ಬೆಂಗಳೂರು:ರಾಜ್ಯದ ಅತಿ ಹಿಂದುಳಿದ ಜಿಲ್ಲೆಯೆಂಬ ಹಣೆಪಟ್ಟಿಗೆ ಒಳಗಾಗಿರುವ ಚಾಮರಾಜನಗರದಲ್ಲಿ ಲಿಥಿಯಂ ಲೋಹ ಆಧಾರಿತ ಲಿಯಾನ್ ಬ್ಯಾಟರಿ ಘಟಕ ತಲೆಯೆತ್ತಲಿದೆ. ಧೀರ್ಘ ಬಾಳಿಕೆ ಬರುವ ಸ್ಮಾರ್ಟ್ ಲಿಯಾನ್ ಬ್ಯಾಟರಿ ಉತ್ಪಾದನಾ ಕೇಂದ್ರಕ್ಕೆ ಶನಿವಾರ (ಆ.26) ಶಿಲಾನ್ಯಾಸ ನಡೆಯಲಿದೆ.
ಈ ಮೂಲಕ ಅಭಿವೃದ್ಧಿಯಿಂದ ದೂರ ಉಳಿದಿರುವ ಹಾಗೂ ಯಾವುದೇ ಬೃಹತ್ ಕೈಗಾರಿಕೆ ಆರಂಭಿಸಲು ಯೋಗ್ಯವಲ್ಲ ಎಂಬ ಹೀಗಳಿಕೆ ಮಧ್ಯೆಯೇ ಸುಮಾರು 2,000 ಕೋಟಿ ರೂ. ಮೊತ್ತದ ಘಟಕ ಮೇಲೇಳಲಿದೆ. ವಿಶೇಷವೆಂದರೆ ವಿಶ್ವದ ಮೊದಲ ಕೃತಕ ಬುದ್ದಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಆಧಾರಿತ ಲಿಥಿಯಂ ಫೆರೌಸ್ ಾಸ್ಪೆಟ್ಸ್ ಸಂಯೋಜಿತ ಪರಿಸರ ಸ್ನೇಹಿ ಹಾಗೂ ಧೀರ್ಘ ಬಾಳಿಕೆ ಬರುವ ಸ್ಮಾರ್ಟ್ ಲಿಯಾನ್ ಬ್ಯಾಟರಿ ಉತ್ಪಾದನಾ ಕೇಂದ್ರ ಆಗಲಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟೆಕ್ರೆನ್ ಬ್ಯಾಟರಿಸ್ ಪ್ರೈ. ಲಿ.ನ ಸಿಇಒ ಡಾ. ಸಿ.ಎಸ್.ಆರ್.ರಾಜು, ಚಾಮರಾಜನಗರದ ಬದನಗುಪ್ಪೆಯ ಕಲಂಬಳ್ಳಿ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯ ಕೈಗಾರಿಕಾ ಪ್ರದೇಶದಲ್ಲಿ ಘಟಕ ನಿರ್ಮಾಣವಾಗಲಿದೆ. ಮೊದಲ ಹಂತದಲ್ಲಿ 500 ಕೋಟಿ ರೂ. ಹೂಡಿಕೆಯೊಂದಿಗೆ ನಾಲ್ಕು ಹಂತಗಳಲ್ಲಿ ಒಟ್ಟು 2,000 ಕೋಟಿ ರೂ. ಹೂಡಿಕೆ ಮಾಡಲಾಗುವುದು. ಸುಮಾರು ಒಂದು ಸಾವಿರ ಮಂದಿಗೆ ಉದ್ಯೋಗ ಸಿಗಲಿದೆ. ಬ್ಯಾಟರಿ ಉತ್ಪಾದನಾ ಘಟಕಕ್ಕೆ ಶನಿವಾರ ಡಿಸಿಎಂ ಡಿ.ಕೆ.ಶಿವಕುಮಾರ್ ಶಿಲಾನ್ಯಾಸ ನೆರವೇರಿಸಲಿದ್ದು, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಪಶು ಸಂಗೋಪನೆ ಸಚಿವ ಕೆ.ವೆಂಕಟೇಶ್, ಶಾಸಕ ಪುಟ್ಟರಂಗ ಶೆಟ್ಟಿ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಂಪನಿಯ ಕಾರ್ಯಕಾರಿ ನಿರ್ದೇಶಕ ಟಿ.ಪಿ.ಭಾರ್ಗವ್, ಸಂಸ್ಥೆಯ ಸಲಹೆಗಾರ ವಲ್ಲಭ, ಅಮೆರಿಕದ ಸಿಒಒ ಧನಂಜಯ್ ಮತ್ತು ತಾಂತ್ರಿಕ ಸಲಹೆಗಾರ ಎ.ಕಾರ್ತಿಕ್ ಹಾಜರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 − 1 =
Remember me
