ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಂಭಾಗದ 23 ಎಕರೆ ಪ್ರದೇಶದಲ್ಲಿ ಸ್ಥಾಪನೆಯಾಗಲಿರುವ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಭವ್ಯ ಪ್ರತಿಮೆ ಹಾಗೂ ಸೆಂಟ್ರಲ್ ಪಾರ್ಕ್ ನಿರ್ಮಾಣಕ್ಕೆ 27ರಂದು ಶಿಲಾನ್ಯಾಸ ನಡೆಯಲಿದೆ. ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗೊಂದಲ ಇಲ್ಲದೆ ಸರಳವಾಗಿ, ಅರ್ಥಪೂರ್ಣವಾಗಿ ಕಾರ್ಯಕ್ರಮ ನಡೆಯಬೇಕು. ಕರೊನಾ ಕಾರಣ ಹೆಚ್ಚುಜನ ಸೇರಲು ಅವಕಾಶ ನೀಡಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಇಡೀ ದೇಶದಲ್ಲಿಯೇ ಇದೊಂದು ಅಪರೂಪದ ಸ್ಮಾರಕವಾಗಲಿದೆ. ದೇಶ, ವಿದೇಶಗಳಿಂದ ಬರುವ ಪ್ರವಾಸಿಗರಿಗೆ ನಮ್ಮ ರಾಜ್ಯದ ಭವ್ಯ ಪರಂಪರೆ ಸಾರಿ ಹೇಳುವ ರೀತಿಯಲ್ಲಿ ಇರುತ್ತದೆ ಎಂದರು.
ಇದನ್ನೂ ಓದಿ;ಸಂಘರ್ಷದ ನಡುವೆ ಸದ್ದಿಲ್ಲದೆ ಚೀನಾಗೆ ಭಾರಿ ತಿರುಗೇಟು ನೀಡಿದೆ ಭಾರತ
ರನ್​ವೇಗಳಲ್ಲಿ ಎಡಬ್ಲ್ಯೂಎಂಎಸ್ ಅಳವಡಿಕೆ:ಸ್ವಾವಲಂಬಿ ಭಾರತದ ಅಭಿಯಾನಕ್ಕೆ ಬೆಂಬಲ ನೀಡಲು ಕೆಂಪೆಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿನ ಎರಡು ರನ್​ವೇಗಳಿಗೆ ಸ್ವದೇಶದಲ್ಲಿ ಅಭಿವೃದ್ಧಿಪಡಿಸಲಾದ ವೈಮಾನಿಕ ಹವಾಮಾನ ನಿರೀಕ್ಷಣಾ ವ್ಯವಸ್ಥೆ (ಎಡಬ್ಲ್ಯೂಎಂಎಸ್) ಅಳವಡಿಸಲಾಗಿದೆ.
ರನ್​ವೇ ಮೇಲೆ ನಿಗಾವಹಿಸಲು ಎಡಬ್ಲ್ಯೂಎಂಎಸ್ ಅಳವಡಿಸಲಾಗಿದೆ. ನೂತನ ತಂತ್ರಜ್ಞಾನವನ್ನು ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರೀಸ್ ಅಭಿವೃದ್ಧಿಪಡಿಸಿದೆ. ಎಡಬ್ಲ್ಯೂಎಂಎಸ್ ಮೂಲಕ ರನ್​ವೇ ಸಂಪೂರ್ಣ ದೃಶ್ಯ ಸೆರೆಹಿಡಿಯಬಹುದಾಗಿದೆ. ಜತೆಗೆ ಅಪಾಯ ಸಂಭವಿಸದಂತೆ ನಿಗಾವಹಿಸಬಹುದಾಗಿದೆ. ಕೆಐಎನಲ್ಲಿನ ಎರಡೂ ರನ್​ವೇಗಳಲ್ಲಿ ಅಳವಡಿಸಲಾಗಿರುವ ನೂತನ ತಂತ್ರಜ್ಞಾನವು ಪೈಲಟ್​ಗಳಿಗೆ ರನ್​ವೇ ನಿಖರ ದೃಶ್ಯ ರವಾನಿಸಲಿದೆ. ಕ್ಯಾಟ್ 1, 2 ಮತ್ತು 3 ವರ್ಗಗಳ ವಿಮಾನಗಳಲ್ಲೂ ಇದರ ನೆರವು ಪಡೆಯಬಹುದಾಗಿದೆ.
ನಟ ಸುಶಾಂತ್​ ಸಿಂಗ್​ ರಜಪೂತ್​ ತಿಂಗಳಿಗೆಷ್ಟು ಖರ್ಚು ಮಾಡುತ್ತಿದ್ದರು? ಹಳೇ ಮ್ಯಾನೇಜರ್​ ನೀಡಿದ್ದಾರೆ ಪೊಲೀಸರಿಗೆ ಮಾಹಿತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + eleven =
Remember me
