ರಾಮನಗರ:ಹೊಟ್ಟೆ ತುಂಬಾ ಹಸಿವಾಗುತ್ತಿದೆ ನನಗೆ ಅಡುಗೆ ಮಾಡಲು ಬರುವುದಿಲ್ಲ. ಮನೆಗೆ ಬಂದು ಮುದ್ದೆ ಮಾಡಿಕೊಡು ಎಂದು ಹೇಳಿ ವ್ಯಕ್ತಿಯೋರ್ ವ ಯುವತಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕತ್ತಲೆಪಾಳ್ಯ ಗ್ರಾಮದಲ್ಲಿ ನಡೆದಿದೆ. 15 ದಿನಗಳ ಹಿಂದೆ ದುರ್ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಘಟನೆ ಸಂಬಂಧ ಪೊಲೀಸರು ಗೋಪಿ ಎಂಬಾತನನ್ನು ಬಂಧಿಸಿದ್ದು, ಈತನಿಗೆ ಸಹಾಯ ಮಾಡಿದ ಆರೋಪದ ಮೇಲೆ ವೆಂಕಟೇಶ್, ಶಶಿಕುಮಾರ್, ಚಂದ್ರಶೇಖರ್​ ಎಂಬುವವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಕತ್ತಲೆಪಾಳ್ಯ ಗ್ರಾಮದ ವೆಂಕಟೇಶ್ ಎಂಬುವವರಿಗೆ ಗೋಪಿ ಸಂಬಂಧಿಯಾಗಿದ್ದು, ಆಗಿಂದಾಗೆ ಅವರ ಮನೆಗೆ ಭೇಟಿ ನೀಡುತ್ತಿದ್ದ. ಈ ವೇಳೆ ಅಲ್ಲೇ ಪಕ್ಕದಲ್ಲಿ ವಾಸವಿದ್ದ ಯುವತಿಯನ್ನು ಗಮನಿಸಿದ್ದ ಆರೋಪಿ ಆಕೆಯನ್ನು ಪರಿಚಯ ಮಾಡಿಕೊಂಡಿದ್ದಾನೆ. ಹೀಗೆ ಮುಂದೊಂದಿ ದಿನ ಗೋಪಿ ಆ ಯುವತಿಗೆ ಮನೆಗೆ ಬಂದು ಮುದ್ದೆ ಮಾಡಿಕೊಡುವಂತೆ ಕರೆದಿದ್ದ. ಯುವತಿ ಮುದ್ದೆ ಮಾಡಿಕೊಡಲು ಗೋಪಿ ಮನೆಗೆ ಹೋಗಿದ್ದಳು. ಈ‌ ವೇಳೆ ಗೋಪಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದು, ಅದನ್ನು ವಿಡಿಯೋ ಮಾಡಿಕೊಂಡಿದ್ದಾನೆ. ವಿಚಾರ ಯಾರಿಗಾದರೂ ಹೇಳಿದರೆ ಸೋಶಿಯಲ್​ ಮೀಡಿಯಾಗೆ ಹಾಕುವುದಾಗಿ ಬೆದರಿಸಿದ್ದನಂತೆ. ಇದರಿಂದ ಹೆದರಿದ ಯುವತಿ ತಡವಾಗಿ ಹೇಳಿದ್ದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ.
ಇದನ್ನೂ ಓದಿ:ರಣವೀರ್​, ಶಾರುಖ್​ರನ್ನು ಹಿಂದಿಕ್ಕಿ ವಿಶೇಷ ಸಾಧನೆ ಮಾಡಿದ ವಿರಾಟ್​; ಆಕಾಶ ನೋಡುತ್ತಿದೆ ಕೊಹ್ಲಿಯ ಈ ಹೊಸ ದಾಖಲೆ
ಘಟನೆ ನಡೆದು 15 ದಿನಗಳೇ ಕಳೆದರು ಪ್ರಕರಣ ಹೊರ ಬಂದಿರಲಿಲ್ಲ ಇದಕ್ಕೆ ಕಾರಣವಾಗಿದ್ದು ಊರ ಹಬ್ಬ ಎನ್ನಲಾಗಿದೆ. ಬಹಳ ವರ್ಷಗಳಿಂದ ಮಾಡದ ಹಬ್ಬವನ್ನ ಗ್ರಾಮದಲ್ಲಿ ಮಾಡಲಾಗುತಿತ್ತು. ಈ ವೇಳೆ ಅತ್ಯಾಚಾರದ ವಿಷಯವನ್ನ ಹೇಳಿದರೆ ಎಲ್ಲಿ ಗ್ರಾಮದಲ್ಲಿ ಜಗಳವಾಗುತ್ತೋ ಎಂದು ಭಯಗೊಂಡ ಯುವತಿ ಈ ವಿಚಾರವನ್ನು ಯಾರಿಗೂ ಹೇಳಿರಲಿಲ್ಲ.
ಗ್ರಾಮದಲ್ಲಿ ಊರ ಹಬ್ಬದ ಕಾರಣದಿಂದ ಯುವತಿ ಅತ್ಯಾಚಾರದ ಸಂಗತಿಯನ್ನ ಯಾರ ಬಳಿಯು ಹೇಳಿಕೊಂಡಿರಲಿಲ್ಲ. ಹೀಗೀರುವಾಗ ಗ್ರಾಮದಲ್ಲಿ ಓರ್ವ‌ ವೃದ್ಧೆ ಮೃತಪಟ್ಟಿದ್ದರು. ಹಾಗಾಗಿ ಊರ ಹಬ್ಬವನ್ನ ನಿಲ್ಲಿಸಲಾಗಿತ್ತು. ಹಬ್ಬದ ಆಚರಣೆ ನಿಂತ ಹಿನ್ನೆಲೆಯಲ್ಲಿ ಯುವತಿ ಪೋಷಕರ ಬಳಿ ನಡೆದ ಘಟನೆ ಬಗ್ಗೆ ವಿವರಿಸಿದ್ದಾಳೆ. ಮಗಳ ವಿಚಾರ ತಿಳಿದ ಪೋಷಕರು ಬಿಡದಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಆರೋಪಿ ಗೋಪಿ ಹಾಗೂ ಆತನಿಗೆ ಸಹಾಯ ಮಾಡಿದ ವೆಂಕಟೇಶ್, ಶಶಿಕುಮಾರ್, ಚಂದ್ರಶೇಖರ್​ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:11 − eight =
Remember me
