ಬೆಂಗಳೂರು: ಬೆಂಗಳೂರಿನಿಂದ ದಕ್ಷಿಣ ಆಫ್ರಿಕಾದ ದೇಶಗಳಿಗೆ ಮಾದಕ ವಸ್ತು ಸಾಗಣೆ ಮಾಡುತ್ತಿದ್ದ ಅಂತಾರಾಷ್ಟ್ರೀಯ ಡ್ರಗ್ಸ್ ಜಾಲವೊಂದು ಕೇಂದ್ರದ ಮಾದಕ ದ್ರವ್ಯ ನಿಗ್ರಹ ದಳದ (ಎನ್‌ಸಿಬಿ) ಬಲೆಗೆ ಬಿದ್ದಿದೆ. ದಂಧೆಯಲ್ಲಿ ತೊಡಗಿದ್ದ ನೈಜೀರಿಯಾ ಮೂಲದ ಇಬ್ಬರು ಪ್ರಮುಖ ಆರೋಪಿಗಳು ಸೇರಿ ನಾಲ್ವರು ಪೆಡ್ಲರ್‌ಗಳನ್ನು ಸೆರೆ ಹಿಡಿದಿದ್ದಾರೆ.
ನೈಜೀರಿಯಾ ಮೂಲದ ಒನೋವೋ, ಸಿ. ಒಕ್ವೋರ್ ಹಾಗೂ ಅಮೃತಹಳ್ಳಿಯ ಡಿ.ಶುಕ್ಲಾ, ಜಿ.ಮರಿಯಾ ಬಂಧಿತರು. ಆರೋಪಿಗಳಿಂದ 20 ಲಕ್ಷ ರೂ. ಮೌಲ್ಯದ 6 ಕೆ.ಜಿ. 870 ಗ್ರಾಂ. ಸ್ಯೂಡೋೆಡ್ರೈನ್ ಮಾದಕ ವಸ್ತು ಜಪ್ತಿ ಮಾಡಲಾಗಿದೆ. ದಕ್ಷಿಣ ಆಫ್ರಿಕಾ ದೇಶಗಳಿಗೆ ಬೆಂಗಳೂರಿನಿಂದ ಡ್ರಗ್ಸ್ ಪಾರ್ಸೆಲ್ ಹೋಗುತ್ತಿರುವ ಬಗ್ಗೆ ಎನ್‌ಸಿಬಿ ಗುಪ್ತದಳಕ್ಕೆ ಮಾಹಿತಿ ಲಭ್ಯವಾಗಿತ್ತು. ಇದನ್ನು ಆಧರಿಸಿ ನ. 11ರಂದು ಎನ್‌ಸಿಬಿ ತಂಡ ಕಾರ್ಯಾಚರಣೆ ಕೈಗೊಂಡಿತ್ತು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿ.ಶುಕ್ಲಾ ಮತ್ತು ಜಿ.ಮರಿಯಾ ಸಿಕ್ಕಿಬಿದ್ದಿದ್ದರು. ಇವರಿಬ್ಬರು ದಕ್ಷಿಣ ಆಫ್ರಿಕಾ ದೇಶಗಳಿಗೆ ಸಾಗಣೆ ಮಾಡುತ್ತಿದ್ದರು ಎಂಬುದು ಗೊತ್ತಾಗಿತ್ತು. ತೀವ್ರ ವಿಚಾರಣೆಗೊಳಪಡಿಸಿದಾಗ ದಂಧೆಯ ಕಿಂಗ್‌ಪಿನ್‌ಗಳ ಬಗ್ಗೆ ಬಾಯ್ಬಿಟ್ಟಿದ್ದರು. ಈ ಸುಳಿವಿನ ಮೇರೆಗೆ ನೈಜೀರಿಯಾದ ಒನೋವೋ ಮತ್ತು ಒಕ್ವೋರೋನನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ವಲಯ ಎನ್‌ಸಿಬಿ ನಿರ್ದೇಶಕ ಅಮಿತ್ ಘವಾಟೆ ತಿಳಿಸಿದ್ದಾರೆ.
ಮಗುವಿನ ಬ್ಯಾಗ್‌ನಲ್ಲಿ ಸಾಗಾಟ: ಮಕ್ಕಳನ್ನು ಹೊತ್ತುಕೊಳ್ಳಲು ಬಳಸುವ ಬ್ಯಾಗ್‌ಗಳಲ್ಲಿ ಡ್ರಗ್ಸ್ ಪ್ಯಾಕೆಟ್‌ಗಳನ್ನು ತುಂಬಿದ್ದರು. ಸಾಮಾನ್ಯ ತೂಕಕ್ಕಿಂತ ಹೆಚ್ಚಿನ ಭಾರ ಇರುವುದು ತಪಾಸಣೆ ವೇಳೆ ಕಂಡು ಬಂದಿತ್ತು. ಬ್ಯಾಗ್ ಬಿಚ್ಚಿ ಪರಿಶೀಲಿಸಿದಾಗ ಡ್ರಗ್ಸ್ ಪತ್ತೆಯಾಗಿದೆ. ಅಮೃತಹಳ್ಳಿಯಲ್ಲಿ ಪ್ಯಾಕಿಂಗ್ ಆಗುತ್ತಿದ್ದ ಡ್ರಗ್ಸ್ ದಕ್ಷಿಣಾ ಆಫ್ರಿಕಾಕ್ಕೆ ಹೋಗುತ್ತಿತ್ತು. ಅಲ್ಲಿನ ಎರಡು ಪ್ರದೇಶಗಳ ವಿಳಾಸ ಪಾರ್ಸೆಲ್‌ಗಳ ಮೇಲೆ ನಮೂದಿಸಲಾಗಿದೆ.
ಅಕ್ರಮವಾಗಿ ನೆಲೆಸಿದ್ದರು: ನೈಜೀರಿಯಾ ಪ್ರಜೆಗಳು ವಿದ್ಯಾರ್ಥಿ ವೀಸಾದಡಿ ಬಂದು ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದರು. ಸುಲಭವಾಗಿ ಲಕ್ಷಾಂತರ ರೂ. ಸಿಗುತ್ತಿದ್ದರಿಂದ ಆಮಿಷಕ್ಕೆ ಒಳಗಾಗಿ ಡಿ.ಶುಕ್ಲಾ ಮತ್ತು ಜಿ.ಮರಿಯಾ ಪ್ರಮುಖ ಆರೋಪಿಗಳ ಜೊತೆ ದಂಧೆಗೆ ಕೈ ಜೋಡಿಸಿದ್ದರು. ಆರೋಪಿಗಳು ಹಲವು ತಿಂಗಳಿಂದ ದಂಧೆಯಲ್ಲಿ ತೊಡಗಿದ್ದರು ಎಂಬುದು ಪ್ರಾಥಮಿಕ ತನಿಖೆಯಲ್ಲಿ ಎನ್‌ಸಿಬಿಗೆ ಗೊತ್ತಾಗಿದೆ. ಬ್ಯಾಂಕ್ ದಾಖಲಾತಿ ಹಾಗೂ ವೀಸಾ ಮತ್ತು ಪಾಸ್‌ಪೋರ್ಟ್ ಜಪ್ತಿ ಮಾಡಿ ಪರಿಶೀಲನೆಗೆ ಒಳಪಡಿಸಿದ್ದಾರೆ.
ಕೆಮಿಕಲ್‌ನಿಂದ ತಯಾರಿಸಿದ್ದ ಡ್ರಗ್ಸ್: ಈ ಹಿಂದಿನ ಹಲವು ಪ್ರಕರಣಗಳಲ್ಲಿ ಎಲ್‌ಎಸ್‌ಡಿ, ಎಂಡಿಎಂಎ, ಹೈಡ್ರೋಗಾಂಜಾ, ಕೊಕೇನ್, ಬ್ರೌನ್ ಶುಗರ್, ಹಶೀಶ್ ಆಯಿಲ್ ಪತ್ತೆಯಾಗಿತ್ತು. ಇದೇ ಮೊದಲ ಬಾರಿಗೆ ‘ಸ್ಯೂಡೋೆಡ್ರೈನ್’ ಎಂಬ ಮಾದಕ ದ್ರವ್ಯ ಸಿಕ್ಕಿದೆ. ಸೋಪು, ಡಿಟೆರ್ಜಂಟ್ ಪೌಡರ್, ಸುಗಂಧದ್ರವ್ಯ ಹಾಗೂ ಪೇಂಟ್ ಸೇರಿದಂತೆ ಇನ್ನಿತರ ವಸ್ತುಗಳ ಉತ್ಪಾದನೆಗೆ ಬಳಸುವ ರಾಸಾಯನಿಕಗಳು ಬಳಕೆಯಾಗಿವೆ. ಈ ರಾಸಾಯನಿಕವನ್ನು ಅನುಮತಿ ಇಲ್ಲದೆ ಮಾರಾಟಕ್ಕೆ ಅವಕಾಶವಿಲ್ಲ. ಆದರೆ, ಒನೋವೋ ಮತ್ತು ಸಿ. ಒಕ್ವೋರ್ ಅಕ್ರಮವಾಗಿ ಸಂಗ್ರಹಿಸಿ ಡ್ರಗ್ಸ್ ತಯಾರಿಸುತ್ತಿದ್ದರು. ತೀರ ಅಪಾಯಕಾರಿ ಡ್ರಗ್ಸ್ ಇದಾಗಿದ್ದು, ರಾಸಾಯನಿಕ ಮಾರಾಟ ಮಾಡಿರುವರ ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದು ಎನ್‌ಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:3 × two =
Remember me
