ಬೆಂಗಳೂರು:ಕಂಪನಿ ಮಾಲೀಕನ ಬ್ಯಾಂಕ್​ ಖಾತೆಯಿಂದ ಬಾಯ್​ಫ್ರೆಂಡ್​ ಖಾತೆಗೆ ಹಣ ವರ್ಗಾವಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರಣ್ಯಪುರ ಠಾಣಾ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ನಕ್ಷು ಕುಶಾಲಪ್ಪ, ಗಯನಾ ಅಲಿಯಾಸ್​ ರಿಯಾ, ಜಾನು ಅಲಿಯಾಸ್ ರೀತ್ ಮತ್ತು ಜ್ಞಾನವಿ ಅಲಿಯಾಸ್​ ರೀತು ಎಂದು ಗುರುತಿಸಲಾಗಿದೆ. ವೆಂಕಟೇಶ್ ರೆಡ್ಡಿ ಎಂಬಾತನ ಕಂಪನಿಯಲ್ಲಿ ರಿಸಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ರೀತುಗೆ ಕಂಪನಿಯ ಕೆಲ ವ್ಯವಹಾರ, ಅಕೌಂಟ್ ಸಂಬಂಧಿತ ಕೆಲಸಗಳನ್ನೂ ಮಾಲೀಕ ನೀಡಿದ್ದರು.
ಇದನ್ನೂ ಓದಿ:ಆದಾಯ ತೆರಿಗೆ ಇಲಾಖೆ ಹೆಸರಿನಲ್ಲಿ ನಕಲಿ ಆ್ಯಪ್: ಆನ್‌ಲೈನ್‌ನಲ್ಲಿ ಟ್ಯಾಕ್ಸ್ ಸ್ವೀಕರಿಸುವ ನೆಪದಲ್ಲಿ ಮೋಸ
ಕಚೇರಿ ವ್ಯವಹಾರದ ಹಣ ವರ್ಗಾವಣೆ ಸಮಯದಲ್ಲಿ ತನ್ನ ಹಾಗೂ ತನ್ನ ಸಹೋದರಿಯರ ಬಾಯ್​​ಫ್ರೆಂಡ್​ಗಳ ಬ್ಯಾಂಕ್​ ಖಾತೆಗೂ ಹಣ ವರ್ಗಾವಣೆ ಮಾಡುತ್ತಿದ್ದಳು. ಈವರೆಗೆ 2 ಲಕ್ಷದ 70ಸಾವಿರ ರೂ. ಹಣ ವರ್ಗಾವಣೆ ಮಾಡಿ, ವಂಚನೆ ಎಸಗಿದ್ದಳು. ಈ ಸಂಬಂಧ ವಿದ್ಯಾರಣ್ಯಪುರ ಠಾಣೆಗೆ ವೆಂಕಟೇಶ್​ ರೆಡ್ಡಿ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ವಿದ್ಯಾರಣ್ಯಪುರ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಆದಾಯ ತೆರಿಗೆ ಇಲಾಖೆ ಹೆಸರಿನಲ್ಲಿ ನಕಲಿ ಆ್ಯಪ್: ಆನ್‌ಲೈನ್‌ನಲ್ಲಿ ಟ್ಯಾಕ್ಸ್ ಸ್ವೀಕರಿಸುವ ನೆಪದಲ್ಲಿ ಮೋಸ

ಸೀಮೆಬದನೆ ರೂಪದ ಮಾವಿನ ಹಣ್ಣು! ಉಡುಪಿಯಲ್ಲಿ ಪ್ರಕೃತಿ ವೈಚಿತ್ರ್ಯ ಪತ್ತೆ…

ಆರೋಪ ಸಾಬೀತು ಮಾಡಿದರೆ ಸರ್ಕಲ್​ನಲ್ಲಿ ನೇಣು ಹಾಕಿಕೊಂಡು ಸಾಯುವೆ ಎಂದು ಸವಾಲೆಸೆದ ಪರಾಜಿತ ಅಭ್ಯರ್ಥಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 19 =
Remember me
