ನವದೆಹಲಿ/ಬೆಂಗಳೂರು:ಭಾರತದಲ್ಲಿ ಕರೊನಾ ನಾಲ್ಕನೇ ಅಲೆ ಕಟ್ಟಿಹಾಕಲು ಟ್ರೇಸ್, ಟೆಸ್ಟ್, ಟ್ರೀಟ್​ವೆುಂಟ್ ಹಾಗೂ ಟೀಕಾ (ಲಸಿಕೆ) ಎಂಬ ನಾಲ್ಕಂಶದ ಸೂತ್ರ ಪಾಲಿಸಲು ಪ್ರಧಾನಿ ನರೇಂದ್ರ ಮೋದಿ ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿದ್ದಾರೆ. ಇದನ್ನು ಯಥಾವತ್ ಪಾಲಿಸಲು ರಾಜ್ಯ ಸರ್ಕಾರ ತೀರ್ವನಿಸಿದೆ.
ಕರೊನಾ ನಿಯಂತ್ರಣ ಸಂಬಂಧ ಬುಧವಾರ ಎಲ್ಲ ರಾಜ್ಯಗಳ ಸಿಎಂಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಆಯೋಜಿಸಿದ್ದ ವಿಡಿಯೋ ಸಂವಾದದ ನಿರ್ಧಾರ ಕುತೂಹಲ ಕೆರಳಿಸಿತ್ತು. ಆದರೆ ಕಳೆದ ಮೂರು ಅಲೆಗಳಲ್ಲಿ ಕೈಗೊಂಡ ಕ್ರಮಗಳು, ಕಠಿಣ ಕ್ರಮಗಳ ಪರಿಣಾಮ, ಲಸಿಕೆ ಪ್ರಯೋಜನದ ಆಧಾರದಲ್ಲಿ ಬಿಗಿ ನಿರ್ಬಂಧಗಳನ್ನು ಕೈಬಿಟ್ಟ ಪರಿಣಾಮ ಜನ-ಸಾಮಾನ್ಯರು ನಿಟ್ಟುಸಿರು ಬಿಡುವಂತಾಗಿದೆ.
ಜನರ ಜತೆಗೆ ಆರ್ಥಿಕ ಆರೋಗ್ಯಕ್ಕೂ ಸರ್ಕಾರ ಸಮಾನ ಆದ್ಯತೆ ನೀಡಿದೆ. ಆಸ್ಪತ್ರೆಗಳ ಸನ್ನದ್ಧ ಸ್ಥಿತಿ, ಅಗತ್ಯ ಆರೋಗ್ಯ ಪರಿಕರಗಳ ವ್ಯವಸ್ಥೆ ಇನ್ನಿತರ ಕ್ರಮಗಳ ಮೂಲಕ ತಜ್ಞರು ನೀಡಿದ ಎಚ್ಚರಿಕೆಯನ್ನು ಪಾಲಿಸಲು ಮುಂದಾಗಿದೆ. ಸಾರಾಸಗಟು ನಿರ್ಬಂಧ ಬದಲು ನಿರ್ದಿಷ್ಟ ಪ್ರದೇಶಕ್ಕೆ ನಿಯಂತ್ರಣ ಕ್ರಮಗಳನ್ನು ಅನ್ವಯಿಸಿ ಸೋಂಕು ಹೆಚ್ಚು ಹರಡದಂತೆ ನೋಡಿಕೊಳ್ಳಲು ಪ್ರಾಶಸ್ಱ ನೀಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್​ಕಡ್ಡಾಯ, ಕನಿಷ್ಠ ಎರಡು ಅಡಿ ದೈಹಿಕ ಅಂತರದಂತಹ ಚಾಲ್ತಿ ನಿಯಮಗಳ ಪರಿಣಾಮಕಾರಿ ಜಾರಿ ನಿಲುವು ತಳೆದಿದೆ.ಡ
ಆಸ್ಪತ್ರೆಗಳಲ್ಲಿ ಫೈರ್ ಆಡಿಟಿಂಗ್:ಜಿಲ್ಲಾ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಆರೋಗ್ಯ ಸವಲತ್ತುಗಳನ್ನು ಸುಧಾರಿಸಿ ಸನ್ನದ್ಧ ಸ್ಥಿತಿಯಲ್ಲಿಡಲಾಗುವುದು. ಅಲ್ಲದೆ, ಜಿಲ್ಲಾಸ್ಪತ್ರೆಗಳಲ್ಲಿ ಫೈರ್ ಆಡಿಟಿಂಗ್ ಮಾಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಧಾನಿ ಜತೆಗಿನ ವಿಡಿಯೋ ಸಂವಾದದಲ್ಲಿ ಭಾಗಿಯಾದ ಬಳಿಕ ಸುದ್ದಿಗಾರರಿಗೆ ತಿಳಿಸಿದರು.
ರಾಜ್ಯದಲ್ಲಿ ಏ.9ರ ಬಳಿಕ ಕರೊನಾ ಸೋಂಕು ಪ್ರಕರಣಗಳು ಅಲ್ಪ ಏರಿಕೆಯಾಗಿದ್ದರೂ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಬೆಂಗಳೂರಿನಲ್ಲಿ 10,000, ರಾಜ್ಯದ ಇತರೆಡೆ 20,000 ಸೇರಿ ಪ್ರತಿದಿನ ಒಟ್ಟು 30,000 ಟೆಸ್ಟಿಂಗ್ ಮಾಡಲು ತೀರ್ವನಿಸಲಾಗಿದೆ. ರಾಜ್ಯದಲ್ಲಿ 60 ಲಕ್ಷ ಲಸಿಕೆ ಡೋಸ್ ದಾಸ್ತಾನಿದೆ. 6-12, 15 ರಿಂದ 18 ವಯೋಮಿತಿ ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಮುನ್ನೆಚ್ಚರಿಕೆ ಡೋಸ್ ವಿತರಣೆಯನ್ನು ಅಭಿಯಾನ ರೂಪದಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದರು.
ಉಸಿರಾಟ ಸಂಬಂಧಿ ರೋಗಗಳು ಸೇರಿ ವಿವಿಧ ಕಾರಣಗಳಿಂದ ಆಸ್ಪತ್ರೆಗಳಿಗೆ ದಾಖಲಾಗಿರುವವರ ತಪಾಸಣೆ ನಡೆಸಲಿದ್ದು, ಸೋಂಕು ಖಚಿತಪಟ್ಟವರ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್ ಲ್ಯಾಬ್​ಗೆ ಕಳುಹಿಸಿ ವೈರಾಣು ತಳಿ ಯಾವುದೆಂದು ಪತ್ತೆ ಹಚ್ಚಿ ಬೇಕಾದ ಕ್ರಮವಹಿಸಲಾಗುವುದು. ಸರ್ಕಾರಿ ಆಸ್ಪತ್ರೆಗಳಲ್ಲಿ 50,000 ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಒಂದು ಲಕ್ಷ ಹಾಸಿಗೆಗಳು ಲಭ್ಯವಿದ್ದು, 243 ಆಮ್ಲಜನಕ ಘಟಕಗಳ ಪೈಕಿ 242 ಸ್ಥಾಪನೆಯಾಗಿವೆ. ಹಾಲಿ ಆಮ್ಲಜನಕ ಸಾಮರ್ಥ್ಯಕ್ಕೆ ಹೆಚ್ಚುವರಿಯಾಗಿ 1,100 ಟನ್ ಸೇರಿಸಲು ನಿರ್ಧರಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಇಡೀ ಜಗತ್ತನ್ನು ತಲ್ಲಣಿಸಿದ ಕೋವಿಡ್-19 ಸಾಂಕ್ರಾಮಿಕತೆಯ ಸವಾಲು ಇನ್ನೂ ಕೊನೆಯಾಗಿಲ್ಲ. ಒಮಿಕ್ರಾನ್ ರೂಪಾಂತರಿಯ ಉಪ-ಪ್ರಭೇದಗಳ ವಿರುದ್ಧ ದೇಶದ ಜನರು ಎಚ್ಚರದಿಂದ ಇರುವುದು ಅಗತ್ಯ.
|ನರೇಂದ್ರ ಮೋದಿಪ್ರಧಾನಿ
ಅನಗತ್ಯ ನಿರ್ಬಂಧ ಗಳನ್ನು ವಿಧಿಸಿ ಜನರನ್ನು ಗಾಬರಿಗೊಳಿಸುವ ಬದಲು ಹೆಚ್ಚು ಪ್ರಕರಣಗಳು ದಾಖಲಾದ ಪ್ರದೇಶದಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಆದ್ಯತೆ ನೀಡಲಿದ್ದೇವೆ. ಕೋವಿಡ್ ನಿಯಂತ್ರಣ ನಡವಳಿಕೆಗಳನ್ನು ಸಾರ್ವಜನಿಕರು ಅನುಸರಿಸಿ ಸಹಕರಿಸಬೇಕು.
|ಬಸವರಾಜ ಬೊಮ್ಮಾಯಿಮುಖ್ಯಮಂತ್ರಿ
8 ದೇಶಗಳ ಜನರ ಟೆಲಿಟ್ರ್ಯಾಕಿಂಗ್:ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೆಸ್ಟಿಂಗ್ ಪ್ರಮಾಣ ಹೆಚ್ಚಿಸಲಾಗುವುದು. ಆಸ್ಟ್ರೇಲಿಯಾ, ಜಪಾನ್, ಇಂಡೋನೇಷಿಯಾ, ಥೈಲ್ಯಾಂಡ್, ದಕ್ಷಿಣಕೊರಿಯಾ ಮುಂತಾದ ಎಂಟು ದೇಶಗಳಿಂದ ಬರುವ ಪ್ರಯಾಣಿಕರಲ್ಲಿ ಶೇ.2 ರ್ಯಾಂಡಮ್ ತಪಾಸಣೆ ಮಾಡಲಿದ್ದು, ಸೋಂಕು ದೃಢಪಟ್ಟ ಪ್ರಕರಣ ಮಾದರಿಗಳನ್ನು ಜಿನೋಮ್ ಸಿಕ್ವೆನ್ಸಿಂಗ್ ಲ್ಯಾಬ್​ಗೆ ರವಾನಿಸಲಾಗುವುದು. ಅಲ್ಲದೆ, ಮನೆಗೆ ಮರಳಿದವರ ಟೆಲಿ ಟ್ರಾ್ಯಕಿಂಗ್​ಗೂ ನಿರ್ಧರಿಸಲಾಗಿದೆ.
ಮೋದಿ ಮೆಚ್ಚುಗೆ:ಜನರ ಮೇಲಿನ ಹೊರೆ ಇಳಿಸಬೇಕೆಂಬ ಸಲಹೆಗೆ ಕರ್ನಾಟಕ ಸರ್ಕಾರ ಓಗೊಟ್ಟು ಪೆಟ್ರೋಲ್, ಡೀಸೆಲ್ ಮೇಲಿನ ಸುಂಕ ಕಡಿತ ಮಾಡಿದೆ. ಈ ನಿರ್ಧಾರದಿಂದ 5,500 ಕೋಟಿ ರೂ. ಆದಾಯ ಖೋತಾ ಮಾಡಿಕೊಂಡರೂ ಜನಹಿತಕ್ಕೆ ಆದ್ಯತೆ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು. ಕರ್ನಾಟಕ, ಗುಜರಾತ್ ತೈಲ ಸುಂಕ ಕಡಿತ ಮಾಡಿರುವುದನ್ನು ಮೋದಿಯವರು ಉದಾಹರಿಸಿ ಪ್ರಶಂಸಿಸುವ ಜತೆಗೆ ಉಳಿದ ರಾಜ್ಯಗಳಿಗೂ ಇದೇ ಕ್ರಮ ಅನುಸರಿಸಲು ಕೋರಿದರು ಎಂದು ಸಿಎಂ ಬೊಮ್ಮಾಯಿ ಹೇಳಿದರು. ಮತ್ತಷ್ಟು ಸುಂಕ ಕಡಿತದ ಬಗ್ಗೆ ರಾಜ್ಯದ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ತೀರ್ವನಿಸಲಾಗುವುದು ಎಂದರು.
ಭಾಗಿಯಾದವರು:ಮಮತಾ ಬ್ಯಾನರ್ಜಿ (ಬಂಗಾಳ), ಭೂಪೇಶ್ ಬಘೇಲ್ (ಛತ್ತೀಸ್​ಗಢ), ಅರವಿಂದ ಕೇಜ್ರಿವಾಲ್ (ದೆಹಲಿ) ಮತ್ತು ಭಗವಂತ ಮಾನ್ (ಪಂಜಾಬ್) ಸಹಿತ ಹಲವು ರಾಜ್ಯಗಳ ಸಿಎಂಗಳು ಸಮಾಲೋಚನೆಯಲ್ಲಿ ಭಾಗವಹಿಸಿದ್ದರು.
ಕೇಜ್ರಿವಾಲ್ ವರ್ತನೆಗೆ ಆಕ್ರೋಶ:ಪ್ರಧಾನಿ ನಡೆಸಿದ ವರ್ಚುವಲ್ ಸಭೆಯಲ್ಲಿ ಭಾಗವಹಿಸಿದ್ದ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​ರ ವರ್ತನೆಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಸಭೆಯ ನಡಾವಳಿಗಳಲ್ಲಿ ಆಸಕ್ತಿಯೇ ಇಲ್ಲದಂತೆ ವರ್ತಿಸಿದ ಕೇಜ್ರಿವಾಲ್​ರ ದೈಹಿಕ ಹಾವಭಾವಗಳ ವಿಡಿಯೋ ದೃಶ್ಯವನ್ನು ಬಿಜೆಪಿ ಸಾಮಾಜಿಕ ಮಾಧ್ಯಮದಲ್ಲಿ ಹಾಕಿದೆ. ಪ್ರಮುಖ ಸಭೆಯೊಂದರಲ್ಲಿ ಮುಖ್ಯಮಂತ್ರಿಯೊಬ್ಬರು ಈ ರೀತಿ ನಡೆದುಕೊಳ್ಳುವುದು ಸರಿಯೇ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಪ್ರಶ್ನಿಸಿದ್ದಾರೆ.
ಕೋವಿಡ್ 4ನೇ ಅಲೆಯ ಭೀತಿ ಹಿನ್ನೆಲೆಯಲ್ಲಿ ನಗರದ ಎಲ್ಲ ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ, ಮಾಸ್ಕ್ ನಿಯಮ ಉಲ್ಲಂಘನೆ ಮಾಡುವವರಿಗೆ ಮೇ 2 ರಿಂದ 250 ರೂ. ದಂಡ ವಿಧಿಸಲು ಬಿಬಿಎಂಪಿ ತೀರ್ವನಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
