ಬೆಂಗಳೂರು:ರಾಜ್ಯದಲ್ಲಿ ಇನ್ನೈದು ವರ್ಷಗಳಲ್ಲಿ ನಾಲ್ಕು ಕಡೆ ಹಜ್​ ಭವನ ನಿರ್ಮಾಣ ಮಾಡಲಾಗುವುದು ಎಂದು ವಸತಿ ಮತ್ತು ವಕ್ಫ್​ ಸಚಿವ ಜಮೀರ್ ಅಹ್ಮದ್ ಖಾನ್​ ಹೇಳಿದ್ದಾರೆ. 2023ನೇ‌ ಸಾಲಿನ ಹಜ್ ಯಾತ್ರಿಕರ ವಿಮಾನಯಾನ ಉದ್ಘಾಟನಾ ಕಾರ್ಯಕ್ರಮ ಇಂದು ಯಲಹಂಕದ ಹಜ್ ಭವನದಲ್ಲಿ ನಡೆಯುತ್ತಿದ್ದು, ಅದರಲ್ಲಿ ಪಾಲ್ಗೊಂಡಿದ್ದ ಜಮೀರ್ ಈ ವಿಷಯ ತಿಳಿಸಿದರು.
ಇಡೀ‌ ಭಾರತದಲ್ಲಿ ಯಲಹಂಕ ಸಮೀಪದ ಹಜ್ ಭವನ ಮಾದರಿಯಾದದ್ದು. ಇಷ್ಟು ಸುವ್ಯವಸ್ಥೆ ಇರುವ ಹಜ್ ಭವನ‌ ಬೇರೆಲ್ಲೂ ಇಲ್ಲ. ಈಗ ಈ ಹಜ್ ಭವನದಲ್ಲಿ ಸ್ವಯಂಸೇವಕರಾಗಿ ನೂರಾರು ಮಂದಿ ಕೆಲಸ ಮಾಡುತ್ತಿದ್ದಾರೆ. ಹಜ್‌ ಯಾತ್ರಾರ್ಥಿಗಳ‌ ಪ್ರವಾಸಕ್ಕೆ ಅಗತ್ಯ ಸಹಕರಿಸುತ್ತಿದ್ದಾರೆ. ಈ ಸ್ವಯಂಸೇವಕರನ್ನ ನನ್ನ ವೈಯಕ್ತಿಕ ಹಣದಲ್ಲಿ ಹಜ್​ಗೆ ಕಳಿಸಿಕೊಡುವುದಾಗಿ ಜಮೀರ್ ಅಹ್ಮದ್ ಹೇಳಿದರು.
ಇದನ್ನೂ ಓದಿ:ಐಪಿಎಸ್​-ಐಎಎಸ್ ಸಂಘರ್ಷ: ಜಾಮೀನು ಪಡೆದ ರೂಪಾ ಮೌದ್ಗಿಲ್
ಹಜ್ ಭವನದ ನಿರ್ಮಾಣದ ಹಿಂದೆ ರೋಷನ್ ಬೇಗ್ ಅವರ ಶ್ರಮ ಬಹಳಷ್ಟಿದೆ. ಸಿದ್ದರಾಮಯ್ಯ ಅವರು ಈ ಹಿಂದೆ ಸಿಎಂ ಆಗಿದ್ದಾಗ 100 ಕೋಟಿ ರೂ. ಅನುದಾನ‌ ನೀಡಿದ್ದರು ಎಂಬುದನ್ನು ನೆನಪಿಸಿಕೊಂಡ ಜಮೀರ್, ಇನ್ನು ಐದು‌ ವರ್ಷಗಳಲ್ಲಿ ರಾಜ್ಯದ 4 ಕಡೆ ಹಜ್ ಭವನ‌ ತಲೆ ಎತ್ತಲಿವೆ ಎಂದರು. ಈ ಬಾರಿ‌ ಅಧಿಕಾರಕ್ಕೆ ಬಂದ ಎರಡೇ ದಿನದಲ್ಲಿ ಹಜ್ ಭವನ ನವೀಕರಣಕ್ಕೆ ಸಿಎಂ 5 ಕೋಟಿ ರೂ. ನೀಡಿದ್ದಾರೆ. ಐದು ಸಾವಿರ ಕೋಟಿ ಕೊಡುವುದಾಗಿ ಘೋಷಣೆಯನ್ನೂ ಮಾಡಿದ್ದೀರಿ. ಯಾವುದೇ ಕಾರಣಕ್ಕೂ 5 ಸಾವಿರ ಕೋಟಿಯಲ್ಲಿ‌ ಹಣ ಕಡಿಮೆ‌ ಮಾಡಬಾರದು ಅಂತ ಮುಸ್ಲಿಂ ಧಾರ್ಮಿಕ‌ ಮುಖಂಡರ ಬೇಡಿಕೆ ಇದೆ ಎಂದೂ ಜಮೀರ್ ಹೇಳಿದರು.
ಇದನ್ನೂ ಓದಿ:ವಿಧಾನಪರಿಷತ್ ಉಪ ಚುನಾವಣೆಗೆ ದಿನಾಂಕ ಘೋಷಣೆ; ಇಲ್ಲಿದೆ ಪೂರ್ತಿ ವಿವರ..
2023ನೇ‌ ಸಾಲಿನ ಹಜ್ ಯಾತ್ರಿಕರ ವಿಮಾನಯಾನ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು. ಸಚಿವರಾದ ಜಮೀರ್ ಅಹ್ಮದ್ ಖಾನ್, ಕೆ.ಎಚ್.ಮುನಿಯಪ್ಪ, ಕೃಷ್ಣಬೈರೇಗೌಡ, ಎಂಎಲ್​ಸಿ ಸಲೀಂ ಅಹ್ಮದ್, ‌ಹಜ್ ಸಚಿವ‌ ರಹೀಂ ಖಾನ್, ಮಾಜಿ ಸಚಿವ ರೋಷನ್‌ ಬೇಗ್‌ ಮುಂತಾದವರಿದ್ದರು.
ಇಂದಿನಿಂದ ಜೂ. 22ರ ವರೆಗೆ ಕರ್ನಾಟಕದಿಂದ ಒಟ್ಟು 7 ಸಾವಿರ ಹಜ್‌ ಯಾತ್ರಾರ್ಥಿಗಳು ಪ್ರಯಾಣಿಸಲಿದ್ದು, ಯಾತ್ರೆಗೆ ತೆರಳಲಿರುವವರಿಗಾಗಿ 51 ವಿಶೇಷ ವಿಮಾನಗಳ ವ್ಯವಸ್ಥೆ ಮಾಡಲಾಗಿದೆ.
ನಾಚಿಕೆ-ಅವಮಾನ ಸಹಿಸಿಕೊಂಡು ಬಯಲಲ್ಲೇ ದೇಹದ ಒತ್ತಡ ನಿವಾರಿಸಿಕೊಂಡೆ: ಟಾಯ್ಲೆಟ್ ಇರದೆ ಪಟ್ಟ ಕಷ್ಟದ ಬಗ್ಗೆ ರಾಷ್ಟ್ರಪತಿಗೇ ಪತ್ರ ಬರೆದ ಮಹಿಳೆ

ವಿಂಗ್ ಹೆಸರಲ್ಲಿ ಅಮಾಯಕ ಹಿಂದು ಹುಡುಗರನ್ನು ತಡೆದರೆ ಪರಿಣಾಮ ನೆಟ್ಟಗಿರಲ್ಲ: ವಜ್ರದೇಹಿ ಸ್ವಾಮೀಜಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − fifteen =
Remember me
