ಹುಬ್ಬಳ್ಳಿ:ಕ್ವಾರಂಟೈನ್​ನಿಂದ ತಪ್ಪಿಸಿಕೊಳ್ಳಲು ಚೆಕ್​ಪೋಸ್ಟ್​ನಲ್ಲಿ ಸುಳ್ಳು ಹೇಳಿ ಮನೆ ಸೇರಿಕೊಂಡಿದ್ದ ಕುಟುಂಬಕ್ಕೆ ಗುರುವಾರ ತಡರಾತ್ರಿ ಶಾಕ್​ ಕಾದಿತ್ತು. ಆ ಮನೆ ಬಾಗಿಲಿಗೆ ಬಂದ ಅಧಿಕಾರಿಗಳು ಒಂದೇ ಕುಟುಂಬದ ನಾಲ್ವರನ್ನು ಆಂಬುಲೆನ್ಸ್​ ಮೂಲಕ ಕರೆದೊಯ್ದರು.
ಹುಬ್ಬಳ್ಳಿಯ ಅಶೋಕ ನಗರ ಪೊಲೀಸ್​ ಠಾಣೆ ವ್ಯಾಪ್ತಿಯ ಅಪಾರ್ಟ್​ಮೆಂಟ್​ವೊಂದರಲ್ಲಿ ವಾಸವಿರುವ ಈ ಕುಟುಂಬವು ಆಂಧ್ರಪ್ರದೇಶ ತೆರಳಿತ್ತು. ಲಾಕ್​ಡೌನ್​ ಘೋಷಣೆಯಿಂದಾಗಿ ಅಲ್ಲೇ ಉಳಿಯುವಂತಾಗಿತ್ತು. ಮೂರ್ನಾಲ್ಕು ದಿನದ ಹಿಂದೆಯೇ ಜಿಲ್ಲೆಗೆ ವಾಪಸ್​ ಬಂದಿದೆ. ಆದರೆ, ಹೊರ ರಾಜ್ಯದಿಂದ ಬಂದರೂ ಜಿಲ್ಲಾಡಳಿತಕ್ಕೆ ಮಾಹಿತಿ‌ ನೀಡಿರಲಿಲ್ಲ.
ಇದನ್ನೂ ಓದಿರಿಅತ್ತಿಗೆ ಜತೆ ಸಂಸಾರ ನಡೆಸುತ್ತಿದ್ದವ ಅಣ್ಣನ‌ ಮಗಳ ಜತೆ ಎಸ್ಕೇಪ್…!
ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತ ಜಿಲ್ಲಾಡಳಿತ ಆಂಧ್ರದಿಂದ ಬಂದಿದ್ದ ಗಂಡ-ಹೆಂಡತಿ ಮತ್ತು ಇಬ್ಬರು ಮಕ್ಕಳನ್ನ ಆಂಬುಲೆನ್ಸ್​ ಮೂಲಕ ಕ್ವಾರಂಟೈನ್​ ಕೇಂದ್ರಕ್ಕೆ ಕರೆದೊಯ್ದಿದೆ. ಈ ಘಟನೆಯ ಬಳಿಕ ಅಪಾರ್ಟ್​ಮೆಂಟ್​ ನಿವಾಸಿಗಳಲ್ಲಿ ಆತಂಕ ಶುರುವಾಗಿದೆ.
‘ಸುರಕ್ಷಿತವಾಗಿರಿ, ಜತೆಗೆ ಇತರರ ಸುರಕ್ಷತೆಯನ್ನೂ ಕಾಪಾಡಿ. ಕರೊನಾ ಮಣಿಸುವ ಹೋರಾಟದಲ್ಲಿ ಪ್ರತಿಯೊಬ್ಬ ಪ್ರಜೆಯೂ ಜವಾಬ್ದಾರಿಯುತವಾಗಿ ವರ್ತಿಸಬೇಕು’ ಎಂದು ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ ಕೆಲವರು ಕ್ವಾರಂಟೈನ್​ನಿಂದ ತಪ್ಪಿಸಿಕೊಂಡು ಅಜಾಗರೂಕತೆಯಿಂದ ವರ್ತಿಸುತ್ತಿರುವುದು ವಿಪರ್ಯಾಸ.
ಇದನ್ನೂ ಓದಿರಿರಾಜ್ಯದ ಯಾವೆಲ್ಲ ರೈಲು ನಿಲ್ದಾಣದಲ್ಲಿ ತೆರೆದಿವೆ ಟಿಕೆಟ್​ ರಿಸರ್ವೇಷನ್​ ಕೌಂಟರ್​?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
