ಬೀದರ್​:ರೈಲ್ವೇ ಪ್ರೊಟೆಕ್ಷನ್​ ಫೋರ್ಸ್​ (ಆರ್​ಪಿಎಫ್​) ಕಾನ್​ಸ್ಟೆಬಲ್ ಚೇತನ್ ಸಿಂಗ್ ಎಂಬಾತ ಆರ್​​ಪಿಎಫ್​ ಎಸ್​​ಐ ಮಾತ್ರವಲ್ಲದೆ ಇತರ ಮೂವರನ್ನು ನಿನ್ನೆ ರೈಲೊಳಗೇ ಗುಂಡಿಟ್ಟು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸಂಗತಿಯೊಂದು ಬೆಳಕಿಗೆ ಬಂದಿದೆ.
ಮಹಾರಾಷ್ಟ್ರದ ಪಾಲ್ಘಾರ್ ರೈಲ್ವೇ ಸ್ಟೇಷನ್​ ಬಳಿ ಜೈಪುರ-ಮುಂಬೈ ಸೆಂಟ್ರಲ್ ಎಕ್ಸ್​ಪ್ರೆಸ್​ ರೈಲೊಳಗೇ ಈ ಘಟನೆ ನಡೆದಿದ್ದು, ಕೊಲೆಗೀಡಾದ ಮೂವರು ಪ್ರಯಾಣಿಕರ ಪೈಕಿ ಒಬ್ಬರು ಕರ್ನಾಟಕದವರು. ಚೇತನ್ ಸಿಂಗ್ (34) ತನ್ನ ಹಿರಿಯ ಸಹೋದ್ಯೋಗಿ, ಆರ್​ಪಿಎಫ್​ ಸಬ್​​ ಇನ್​​ಸ್ಪೆಕ್ಟರ್​ ಟಿಕಾರಾಮ್ ಮೀನಾ ಮಾತ್ರವಲ್ಲದೆ ಮೂವರು ಪ್ರಯಾಣಿಕರನ್ನೂ ಗುಂಡಿಟ್ಟು ಕೊಂದಿದ್ದ. ಆ ಮೂವರು ಪ್ರಯಾಣಿಕರ ಪೈಕಿ ಒಬ್ಬರು ಕರ್ನಾಟಕದ ಬೀದರ್​ನ ಹಮೀಲಾಪುರ ನಿವಾಸಿ ಸೈಯದ್ ಸೈಫುದ್ದೀನ್​ ಮುನಿರುದ್ದೀನ್ ಎಂಬುದು ಖಚಿತಪಟ್ಟಿದೆ.
ಇದನ್ನೂ ಓದಿ:ವಿಚ್ಛೇದನಕ್ಕೆ 11 ದಿನ ಇರುವಾಗ ಪತ್ನಿಗೆ ಲಾಟರಿಯಲ್ಲಿ ಬಂಪರ್ ಬಹುಮಾನ: ಆಮೇಲೆ ಲಾಭ ಆಗಿದ್ಯಾರಿಗೆ?
ಸೈಫುದ್ದೀನ್ ಕಳೆದ ಹಲವು ವರ್ಷಗಳಿಂದ ಹೈದರಾಬಾದ್​​ನ ರಿಂಗ್ ಕೋಟಿ ಪ್ರದೇಶದ ಮೊಬೈಲ್​ಫೋನ್​ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಅಂಗಡಿಯ ಮಾಲೀಕರ ಜತೆ ರಾಜಸ್ಥಾನದ ಅಜ್ಮೇರ್​ಗೆ ಹೋಗಿ ರೈಲಿನಲ್ಲಿ ಮರಳುವಾಗ ಈ ಘಟನೆ ಸಂಭವಿಸಿದೆ. ಸೈಫುದ್ದೀನ್ ಪತ್ನಿ ಹಾಗೂ ಮೂವರು ಪುತ್ರಿಯರು ಹಮೀಲಾಪುರದಲ್ಲಿ ವಾಸವಿದ್ದಾರೆ. ಘಟನೆಯಿಂದ ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ಮೃತದೇಹ ಬುಧವಾರ ಬರಲಿದೆ ಎಂದು ಮೂಲಗಳು ತಿಳಿಸಿವೆ.
ನಿದ್ರಿಸಲು ಯಾರಾದರೂ ಅಡ್ಡಿಪಡಿಸಿದರೆ ಅವರ ವಿರುದ್ಧ ಕೇಸು ದಾಖಲಿಸಬಹುದಾ?

ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − 6 =
Remember me
