ಚಿತ್ರದುರ್ಗ:ಭೀಕರ ಕಾರು ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ದುರಂತ ಸಾವಿಗೀಡಾಗಿರುವ ಘಟನೆ ಚಿತ್ರದುರ್ಗ ತಾಲೂಕಿನ ಮಲ್ಲಾಪುರ ಗ್ರಾಮದ ಬಳಿ ಇಂದು (ಆ.13) ಮುಂಜಾನೆ ನಡೆದಿದೆ.
ಮೃತರನ್ನು ಸಂಗನ ಬಸವಪ್ಪ (36), ಪತ್ನಿ ರೇಖಾ (29), ಪುತ್ರ ಅಗಸ್ತ್ಯ (07) ಹಾಗೂ ಸಂಬಂಧಿ ಭೀಮಾ ಶಂಕರ್ (26) ಎಂದು ಗುರುತಿಸಲಾಗಿದೆ. ಮತ್ತೋರ್ವ ಪುತ್ರ ಆದರ್ಶ(3), ಪುತ್ರಿ ಅನ್ವಿಕಾ (5) ಹಾಗೂ ಕಾರು ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ:ಕಾವೇರಿ ನೀರು ಹಂಚಿಕೆ: ತಜ್ಞರೊಂದಿಗೆ ಚರ್ಚಿಸಿ ತೀರ್ಮಾನ; ತಮಿಳುನಾಡಿನ ಕ್ಯಾತೆ ಸಲ್ಲದು, ಸಂಕಷ್ಟದ ಸೂತ್ರ ಪಾಲಿಸಲಿ ಎಂದ ಸಿಎಂ
ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಲಾರಿಯೊಂದಕ್ಕೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ಮೃತ ಸಂಗನ ಬಸವಪ್ಪ ಖಾಸಗಿ ಬ್ಯಾಂಕ್ ನೌಕರರಾಗಿದ್ದು, ಕುಟುಂಬದ ಜತೆ ವೀಕೆಂಡ್​ ರಜೆ ಹಿನ್ನೆಲೆಯಲ್ಲಿ ಮಲೆನಾಡು ಟ್ರಿಪ್ ಹೊರಟಿದ್ದರು. ವಿಜಯಪುರದಿಂದ ಚಿಕ್ಕಮಗಳೂರಿಗೆ ತೆರಳುವ ವೇಳೆ ಚಿತ್ರದುರ್ಗದ ಮಲ್ಲಾಪುರ ಬಳಿ ಡೆಡ್ಲಿ ಅಪಘಾತ ಘಟಿಸಿದೆ.
ಮೃತರು ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಕುದರಿ ಸಾಲವಡಗಿ ಮೂಲದವರು ಎಂದು ತಿಳಿದುಬಂದಿದೆ. ಅಪಘಾತ ನಡೆದ ಚಿತ್ರದುರ್ಗ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ. ಪರಶುರಾಮ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ದಿಗ್ವಿಜಯ ನ್ಯೂಸ್​)
ಭಾರತದಲ್ಲೂ UFO ಪತ್ತೆ!? ಮಲಯಾಳಂ ನಟಿ ಹಂಚಿಕೊಂಡ ಇನ್​ಸ್ಟಾಗ್ರಾಂ ಪೋಸ್ಟ್​ ವೈರಲ್​​

ವಿದೇಶಿ ಬದುಕಿನ ಮೋಹ ತಂದ ಸಾವು: ಆ ಕ್ಷಣ ಅಂಕಣ..

ಸಮವಸ್ತ್ರ ಬಟ್ಟೆಗಿಲ್ಲ ಬೇಡಿಕೆ, ನೇಕಾರರಿಗೆ ಕಷ್ಟ: ಕೆಎಚ್​ಡಿಸಿಗೆ ಸಿಕ್ಕಿಲ್ಲ ‘ವಿದ್ಯಾವಿಕಾಸ’; ಸರ್ಕಾರದಿಂದ ಬಾರದ 30 ಕೋಟಿ ರೂ. ಬಾಕಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
