ಬೆಂಗಳೂರು:ರೌಡಿಶೀಟರ್‌ವೊಬ್ಬನ ಹತ್ಯೆಗೆ ಬಳಸಲು ದ್ವಿಚಕ್ರವಾಹನ ದರೋಡೆ ಮಾಡಿದ ನಾಲ್ವರು ಕಾಮಾಕ್ಷಿಪಾಳ್ಯ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಸುಂಕದಕಟ್ಟೆಯ ನಿವಾಸಿ ವಿಕ್ರಮ್ (20), ಮಂಜುನಾಥ್ (21), ಸಾಗರ್ (19), ನವೀನ್ (21) ಬಂಧಿತರು. ತಲೆಮರೆಸಿಕೊಂಡಿರುವ ಶಶಿ ಅಲಿಯಾಸ್ ಲೂಸ್‌ಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಬಂಧಿತ ಆರೋಪಿಗಳಿಂದ 2 ದ್ವಿಚಕ್ರವಾಹನ ಮತ್ತು ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ.
ಖಾಸಗಿ ಕಂಪನಿ ಉದ್ಯೋಗಿಯೊಬ್ಬರು ಮೇ 31ರಂದು ಸಂಜೆ 6.15ರಲ್ಲಿ ಕಾಮಾಕ್ಷಿಪಾಳ್ಯದ ನೀಲಗಿರಿ ತೋಪಿನ ಬಳಿ ಇರುವ ಪೆಟ್ರೋಲ್ ಬಂಕ್‌ನಲ್ಲಿ ಸ್ಕೂಟರ್‌ಗೆ ಪಟ್ರೋಲ್ ಹಾಕಿಸಿ, ಚಕ್ರಕ್ಕೆ ಗಾಳಿ ಹಾಕಿಸಲು ಹೋಗಿದ್ದರು. ಆ ವೇಳೆ ಇವರ ಬಳಿ ಬಂದ ಆರೋಪಿಗಳು ಮಾರಕಾಸ್ತ್ರ ತೋರಿಸಿ ಬೆದರಿಸಿ ಸ್ಕೂಟರ್‌ನೊಂದಿಗೆ ಪರಾರಿಯಾಗಿದ್ದರು. ಸ್ಕೂಟರ್ ಮಾಲೀಕರು ಕಾಮಾಕ್ಷಿಪಾಳ್ಯ ಠಾಣೆಗೆ ದೂರು ನೀಡಿದ್ದರು.
ಇದನ್ನೂ ಓದಿ:ಪತ್ನಿಯನ್ನು ಕೊಂದ ಬಳಿಕ ಪತಿ ಮಾಡಿದ್ದನ್ನು ಕೇಳಿದ್ರೆ ಶಾಕ್​ ಆಗ್ತೀರಾ! ಇಡೀ ಊರೇ ಬೆಚ್ಚಿಬಿದ್ದ ಘಟನೆ ಇದು
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪೆಟ್ರೋಲ್ ಬಂಕ್ ಆಸು-ಪಾಸಿನಲ್ಲಿದ್ದ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿ ಆರೋಪಿಗಳ ಗುರುತು ಪತ್ತೆ ಹಚ್ಚಿ ಬಂಧಿಸಿದ್ದಾರೆ. ರೌಡಿಶೀಟರ್ ಲೇಔಟ್ ಅನಿಲ್‌ನನ್ನು ಕೊಲೆ ಮಾಡಲು ಸ್ಕೂಟರ್ ಅಗತ್ಯವಿದ್ದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ.
ರೌಡಿ ಕೊಲೆಗೆ ಸಂಚು:ಕೊಲೆ ಪ್ರಕರಣವೊಂದರಲ್ಲಿ ಜೈಲು ಸೇರಿರುವ ಆಂಧ್ರಹಳ್ಳಿ ಅಭಿ ತನ್ನ ವಿರೋಧಿ ಗ್ಯಾಂಗ್‌ನ ಬ್ಯಾಡರಹಳ್ಳಿ ಠಾಣೆಯ ರೌಡಿಶೀಟರ್ ಲೇಔಟ್ ಅನಿಲ್‌ನನ್ನು ಕೊಲೆ ಮಾಡಲು ಜೈಲಿನೊಳಗಿದ್ದೇ ಸಂಚು ರೂಪಿಸಿದ್ದ. ಅದರಂತೆ ತನ್ನ ಸಹಚರ ಶಶಿ ಅಲಿಯಾಸ್ ಲೂಸ್‌ನನ್ನು ಸಂಪರ್ಕಿಸಿ, ‘ಲೇಔಟ್ ಅನಿಲ್ 3 ತಿಂಗಳು ಪೆರೋಲ್ ಮೇಲೆ ಜೈಲಿನಿಂದ ಹೊರ ಬಂದಿದ್ದಾನೆ. ಆತನನ್ನು ಹತ್ಯೆ ಮಾಡಲು ಹುಡುಗರು, ಗಾಡಿ ಸಿದ್ಧತೆ ಮಾಡು’ ಎಂದು ಸೂಚಿಸಿದ್ದ ಎನ್ನಲಾಗಿದೆ.
ಇದನ್ನೂ ಓದಿ:ಮಾಂಸ ಕಡಿಯುವ ಕತ್ತಿಯಿಂದ ಅಣ್ಣ ಅತ್ತಿಗೆಯನ್ನು ಕೊಚ್ಚಿದ; ಪುಟ್ಟ ಕಂದಮ್ಮನನ್ನೂ ಬಿಡಲಿಲ್ಲ…
ಶಶಿ ತನ್ನ ಸಹಚರರಾದ ಬಂಧಿತ ಆರೋಪಿಗಳಿಗೆ ಹಣದ ಆಮಿಷವೊಡ್ಡಿ ಕೊಲೆ ಮಾಡಲು 2 ಸ್ಕೂಟರ್, ಹಣ ರೆಡಿ ಮಾಡುವಂತೆ ಹೇಳಿದ್ದ. ಈತನ ಸೂಚನೆಯಂತೆ ಬಂಧಿತರು ಮಾದನಾಯಕನಹಳ್ಳಿ ಮತ್ತು ಕಾಮಾಕ್ಷಿಪಾಳ್ಯದಲ್ಲಿ ಒಂದೊಂದು ಸ್ಕೂಟರ್ ದರೋಡೆ ಮಾಡಿದ್ದರು. ಹಣದ ಅಗತ್ಯತೆಯಿದ್ದ ಹಿನ್ನೆಲೆಯಲ್ಲಿ ಬ್ಯಾಡರಹಳ್ಳಿ, ಪೀಣ್ಯ, ರಾಜಗೋಪಾಲನಗರದಲ್ಲಿ ಇಸ್ಪೀಟ್​ ಅಡ್ಡೆಗಳ ಮೇಲೆ ದಾಳಿ ನಡೆಸಿ ಅಲ್ಲಿದ್ದವರಿಗೆ ಮಾರಕಾಸ್ತ್ರ ತೋರಿಸಿ ಅವರಿಂದ ಒಂದಿಷ್ಟು ಹಣ ಕಸಿದುಕೊಂಡಿದ್ದರು ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ.
ಶಿಲ್ಪಾ ನಾಗ್​ ರಾಜೀನಾಮೆ ಸ್ವೀಕರಿಸೋಲ್ಲ : ಉಸ್ತುವಾರಿ ಸಚಿವ ಸೋಮಶೇಖರ್

ಗ್ಯಾಂಗ್​ರೇಪ್​ ಕೇಸ್ : ಯುವತಿ-ಆರೋಪಿಗಳನ್ನು ಭಾರತಕ್ಕೆ ತಂದವ ಬಾಂಗ್ಲಾ ಪೊಲೀಸ್ ವಶಕ್ಕೆ; ಯುವತಿ ಹೇಳಿಕೆ ದಾಖಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
