ಬೆಂಗಳೂರು:ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶವನ್ನು ಮೂರು ರಾಜಕೀಯ ಪಕ್ಷಗಳು ಬಗೆಬಗೆಯಾಗಿ ವಿಶ್ಲೇಷಣೆ ಮಾಡಿಕೊಳ್ಳುತ್ತಿವೆ. ಈ ಫಲಿತಾಂಶ ಕರ್ನಾಟಕದ ರಾಜಕೀಯ ಹಾಗೂ ಲೋಕಸಭೆ ಚುನಾವಣೆ ಮೇಲಿನ ಪರಿಣಾಮದ ಕುರಿತು ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಬಿಜೆಪಿ ವಲಯದಲ್ಲಿ ಮೂರು ರಾಜ್ಯ ಗೆದ್ದ ಸಂಭ್ರಮ ಕಾಣಿಸಿದರೆ, ಕಾಂಗ್ರೆಸ್​ನಲ್ಲಿ ತೆಲಂಗಾಣದಲ್ಲಿ ಅಧಿಕಾರ ಸಿಕ್ಕ ಸಮಾಧಾನವಿದೆ. ಮೊದಲನೇ ಪುಟದಿಂದ…
ಜೆಡಿಎಸ್ಜೆಡಿಎಸ್ ದುಃಸ್ವಪ್ನ ತೆಲಂಗಾಣದಲ್ಲಿ ಬಿಆರ್​ಎಸ್​ಗೆ ಮರುಕಳಿಸಿದೆ. ಯಾವ ಮತ ಸಮೀಕರಣವನ್ನು ನಂಬಿಕೊಳ್ಳಲಾಗಿದೆಯೋ ಅದನ್ನು ಕಾಂಗ್ರೆಸ್ ಕಿತ್ತುಕೊಂಡಿದೆ. ಈ ವಿಚಾರದಲ್ಲಿ ಇವೆರಡೂ ಪ್ರಾದೇಶಿಕ ಪಕ್ಷಗಳು ಸಮಾನ ದುಃಖಿಗಳು. ಆದರೆ, ಜೆಡಿಎಸ್ ಮುಂದಿನ ಬೆಳವಣಿಗೆ ಅರಿತು ತನ್ನ ಅಸ್ತಿತ್ವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಜತೆ ಈಗಾಗಲೆ ಕೈಜೋಡಿಸಿದೆ. ನಮ್ಮನ್ನು ನಂಬಿದರೆ ನಿಮಗೂ ಅನುಕೂಲ ಎಂಬ ಸಂದೇಶವನ್ನು ಈ ಮೂಲಕ ನೀಡಿದಂತಿದೆ.
ಕಾಂಗ್ರೆಸ್ತೆಲಂಗಾಣ ಗೆಲುವಿನಲ್ಲಿ ರಾಜ್ಯ ಕಾಂಗ್ರೆಸಿಗರ ಪಾತ್ರ ದೊಡ್ಡದು. ಇಲ್ಲಿನ ಗ್ಯಾರಂಟಿ ಘೋಷಣೆ ಮತ್ತು ಅನುಷ್ಠಾನವನ್ನು ಅಲ್ಲಿ ಹೆಚ್ಚು ಪ್ರಚಾರ ಮಾಡಲಾಗಿತ್ತು. ರಾಜ್ಯದಲ್ಲಿ ನಡೆಸಿದ ಮತ ಸಮೀಕರಣವನ್ನು ಅಲ್ಲೂ ವಿಸ್ತರಿಸಲಾಯಿತು. ಈ ಕಾರ್ಯದಲ್ಲಿ ಮುಂಚೂಣಿಯಾಗಿ ಕಾಣಿಸಿದವರು ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವರಾದ ಜಮೀರ್ ಅಹ್ಮದ್, ಶರಣಪ್ರಕಾಶ್ ಪಾಟೀಲ್, ನಾಗೇಂದ್ರ, ಬೋಸರಾಜು. ಈಗ ಈ ಎಲ್ಲ ನಾಯಕರ ಮೊಗದಲ್ಲಿ ಹೆಚ್ಚು ಖುಷಿ ಕಾಣಿಸಿದೆ. ಲೋಕಸಭೆ ಚುನಾವಣೆಗೆ ಟಾನಿಕ್ ಆಗಲಿದ್ದು, ಕಾರ್ಯತಂತ್ರ ರೂಪಿಸಲು ಹೈಕಮಾಂಡ್ ಮುಕ್ತ ಅವಕಾಶ ಕೊಡುವ ಸಾಧ್ಯತೆ ದಟ್ಟವಾಗಿದೆ.
ಬಿಜೆಪಿವಿಧಾನಸಭೆ ಚುನಾವಣೆ ಸೋಲಿನ ಬಳಿಕ ಮಂಕಾಗಿದ್ದ ಬಿಜೆಪಿ ಪಾಳಯದಲ್ಲಿ ಈ ಗೆಲುವು ಹುಮ್ಮಸ್ಸು ತಂದಿದೆ. ಲೋಕಸಭೆ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಮಾಡಬೇಕಾಗಿದ್ದ ಪಕ್ಷದ ನಾಯಕರಿಗೂ ಸಹ ದೊಡ್ಡ ಸವಾಲಿತ್ತು. ಈ ಗೆಲುವು ಅವರಿಗೂ ದೊಡ್ಡ ಬೂಸ್ಟ್ ನೀಡಿದಂತಾಗಿದೆ. ಕರ್ನಾಟಕದ ಸೋಲಿನ ಬಳಿಕ ಲೋಕಸಭೆ ಚುನಾವಣೆ ಹೇಗೋ ಎಂತೋ ಎಂಬಂತಹ ಅಭಿಪ್ರಾಯ ಇದ್ದಿದ್ದು, ಈಗ ಬದಲಾಗಿದೆ. ಮತ್ತೆ ಮೋದಿ ಪ್ರಧಾನಿಯಾಗಲಿದ್ದಾರೆ ಎಂಬ ಮಾತು ಕಮಲ ಪಾಳಯದಲ್ಲಿ ಕೇಳಿಬರುತ್ತಿದೆ. ಮೋದಿ ವರ್ಚಸ್ಸು ಉತ್ತರ ಭಾರತದಲ್ಲಿ ಸ್ಪಷ್ಟವಾಗಿ ಕಾಣಿಸಿದೆ, ದಕ್ಷಿಣದಲ್ಲಿ ಬೆವರಿಳಿಸುವ ಅನಿವಾರ್ಯತೆ ಇದೆ. ಕರ್ನಾಟಕದಲ್ಲಿ ಎಲ್ಲ ನಾಯಕರಲ್ಲಿ ಸಮನ್ವಯ, ಒಂದಾಗಿ ಹೋಗುವ ಸಂದೇಶವನ್ನು ಈ ಚುನಾವಣೆ ಫಲಿತಾಂಶ ಕಟ್ಟಿಕೊಟ್ಟಿದೆ.
ಮೂರು ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಹೀನಾಯ ಸೋಲು: ರಾಹುಲ್​ ಗಾಂಧಿ ಹೇಳಿದ್ದಿಷ್ಟು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 5 =
Remember me
