ಬೆಂಗಳೂರು:ಸ್ವಾತಂತ್ರ್ಯದ ಅಮೃತ ಮಹೋತ್ಸವದ ವೇಳೆ ಕ್ಲಬ್ ಹೌಸ್‌ನಲ್ಲಿ ಡಿಪಿಗೆ ಪಾಕಿಸ್ತಾನದ ಧ್ವಜ ಹಾಕಿಕೊಂಡು ಪಾಕ್ ಪರ ಮಾತನಾಡಿದ್ದ ಪ್ರಕರಣ ಸಂಬಂಧ ಸಂಪಿಗೆಹಳ್ಳಿ ಪೊಲೀಸರು, ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಸಿ.ವಿ. ರಾಮನ್‌ನಗರ ಮತ್ತು ಬೈಯಪ್ಪನಹಳ್ಳಿ ನಿವಾಸಿಗಳಾದ ಯುವಕರು, ಪ್ರತ್ಯೇಕ ಸಾಫ್ಟ್​​ವೇರ್​ ಕಂಪನಿಯಲ್ಲಿ ಟೆಕ್ಕಿಗಳಾಗಿದ್ದಾರೆ. ಕ್ಲಬ್ ಹೌಸ್‌ನಲ್ಲಿ ತಮ್ಮ ಗೆಳೆಯರ ಜತೆ ಹರಟೆ ವೇಳೆ ಪಾಕಿಸ್ತಾನ ಪರ ಉಡಾಫೆ ಮಾತನಾಡಿದ್ದರು. ಈ ನಾಲ್ವರು ಹಿಂದು ಧರ್ಮೀಯರಾಗಿದ್ದು, ಪ್ರಕರಣ ಸಂಬಂಧ ಇಬ್ಬರನ್ನು ಪ್ರಶ್ನಿಸಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಉಳಿದ ಇಬ್ಬರನ್ನು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆ.15ರಂದು ನಾಲ್ವರು ಸ್ನೇಹಿತರು ದೇಶದ ಪ್ರೇಮದ ಬಗ್ಗೆ ಮಾತನಾಡುತ್ತಿದ್ದರು. ಒಬ್ಬಾತ ಪಾಕಿಸ್ತಾನದಲ್ಲಿ ಸಹ ಒಳ್ಳೆಯ ಜನ ಇದ್ದಾರೆ. ಎಲ್ಲರನ್ನು ದ್ವೇಷಿಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾನೆ. ಈ ಮಾತಿಗೆ ನೀನು ಪಾಕ್ ಪ್ರೇಮಿ ಎಂದು ಮತ್ತೊಬ್ಬ ತೆಗಳಿದ್ದಾನೆ. ಅದಕ್ಕೆ ಕೆರಳಿದ ಆ ನಾಲ್ವರು, ನಾವು ಪಾಕಿಸ್ತಾನದ ಧ್ವಜವನ್ನು ಡಿಪಿಯಾಗಿ ಹಾಕಿಕೊಳ್ಳುತ್ತೇವೆ. ಏನಿವಾಗ ಎಂದು ಉಡಾಫೆ ಮಾಡಿದ್ದಾರೆ. ಬಳಿಕ ಅಂತೆಯೇ ಪ್ರೊಫೈಲ್‌ಗಳಿಗೆ ಪಾಕಿಸ್ತಾನದ ಧ್ವಜ ಚಿತ್ರವನ್ನು ಬಳಸಿದ್ದಾರೆ. ನಂತರ ಪಾಕಿಸ್ತಾನದ ರಾಷ್ಟ್ರಗೀತೆಯನ್ನು ಪ್ಲೇ ಮಾಡಿದ್ದಾರೆ. ಇದನ್ನು ಗಮನಿಸಿದ ಕ್ಲಬ್‌ಹೌಸ್ ಕೇಳುಗರು, ಸ್ಕ್ರೀನ್​​ಶಾಟ್ ತೆಗೆದು ಜಾಲತಾಣದಲ್ಲಿ ವೈರಲ್ ಮಾಡಿದ್ದರು. ಇದು ತೀವ್ರ ಆಕ್ರೋಶಕ್ಕೆ ವ್ಯಕ್ತವಾಗಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿದ ಸಂಪಿಗೆಹಳ್ಳಿ ಪೊಲೀಸರು, ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತಾಂತ್ರಿಕ ಮಾಹಿತಿ ಆಧರಿಸಿ ನಾಲ್ವರನ್ನು ಪತ್ತೆ ಹಚ್ಚಿದ್ದಾರೆ. ಇಬ್ಬರನ್ನು ವಿಚಾರಣೆ ನಡೆಸಿದ್ದಾರೆ. ಎಲ್ಲರೂ ಖಾಸಗಿ ಕಂಪನಿ ಉದ್ಯೋಗಿಗಳಾಗಿದ್ದು, ತಮಾಷೆ ಮಾಡಲು ಹೋಗಿ ಸಂಕಷ್ಟ ತಂದುಕೊಂಡಿದ್ದಾರೆ. ಉದ್ದೇಶಪೂರ್ವಕವಾಗಿ ನಡೆಸಿದ ಕೃತ್ಯವಲ್ಲ ಎಂಬುದು ವಿಚಾರಣೆ ವೇಳೆ ಸ್ಪಷ್ಟವಾಗಿದೆ. ಈ ಬಗ್ಗೆ ತನಿಖೆ ನಡೆಸಿ ಕೋರ್ಟ್‌ಗೆ ಆರೋಪ ಪಟ್ಟಿ ಸಲ್ಲಿಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಗರ್ಲ್​ ನಂ. 166’ ಗ್ರೇಟ್ ಎಸ್ಕೇಪ್​: 7ನೇ ವಯಸ್ಸಲ್ಲಿ ನಾಪತ್ತೆ, ಹದಿನಾರನೇ ವಯಸ್ಸಲ್ಲಿ ಮನೆಗೆ ಬಂದ್ಲು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
