ಮಂಡ್ಯ:ನಿನ್ನೆ (ಜು.29) ರಾತ್ರಿ ವಿ.ಸಿ. ನಾಲೆಗೆ ಕಾರು ಉರುಳಿ ಬಿದ್ದು ನಾಲ್ವರು ದುರಂತ ಸಾವಿಗೀಡಾದ ಘಟನೆ ಗಾಮನಹಳ್ಳಿ ಬಳಿ ನಡೆದಿದೆ. ಕೇವಲ ಮೂರು ದಿನದ ಅಂತರದಲ್ಲಿ ನಡೆದ ಮತ್ತೊಂದು ದುರಂತ ಘಟನೆ ಇದಾಗಿದೆ.
ಎರಡು ಪ್ರತ್ಯೇಕ ಘಟನೆಯಲ್ಲಿ ವಿ.ಸಿ ನಾಲೆಗೆ ಕಾರು ಉರುಳಿ ಐವರು ಜಲಸಮಾಧಿಯಾಗಿದ್ದಾರೆ. ಕಳೆದ ಗುರುವಾರ ಮಂಡ್ಯದ ತಿಬ್ಬನಹಳ್ಳಿ ಬಳಿ ನಡೆದ ದುರಂತದಲ್ಲಿ ಓರ್ವ ಮೃತಪಟ್ಟಿದ್ದ. ಆ ಘಟನೆ ಮಾಸುವ ಮುನ್ನವೇ ನಿನ್ನೆ ರಾತ್ರಿ ಮತ್ತೊಂದು ದುರಂತ ಸಂಭವಿಸಿದೆ.
ಇದನ್ನೂ ಓದಿ:ಇಸ್ರೋ ರಾಕೆಟ್​ ಉಡಾವಣೆ ಯಶಸ್ವಿ: ಸಿಂಗಾಪುರದ 6 ಉಪಗ್ರಹಗಳನ್ನು ಹೊತ್ತು ಸಾಗಿದ ಪಿಎಸ್​ಎಲ್​ವಿ-ಸಿ56
ಕಳೆದ ರಾತ್ರಿ ಗಾಮನಹಳ್ಳಿ ಬಳಿ ವಿ.ಸಿ ನಾಲೆಗೆ ಕಾರು ಉರುಳಿಬಿದ್ದ ನಾಲ್ವರು ಮಹಿಳೆಯರು ಮೃತಪಟ್ಟಿದ್ದಾರೆ. ಮೃತರನ್ನು ಗಾಮನಹಳ್ಳಿ ಗ್ರಾಮದ ಮಹದೇವಮ್ಮ, ಗೊರವನಹಳ್ಳಿ ಗ್ರಾಮದ ಸಂಜನಾ, ಮಮತಾ ಹಾಗೂ ರೇಖಾ ಎಂದು ಗುರುತಿಸಲಾಗಿದೆ. ಕಾರು ಚಲಾಯಿಸುತ್ತಿದ್ದ ಮನೋಜ್ ಬಚಾವ್ ಆಗಿದ್ದಾರೆ.
ಈ ಅಪಘಾತಕ್ಕೆ ಕಾರಿನ ವೇಗವೇ ಕಾರಣ ಎನ್ನಲಾಗುತ್ತಿದೆ. ದೇವರ ಕಾರ್ಯಕ್ಕೆ ಸಂಬಂಧಿಕರನ್ನು ಆಹ್ವಾನಿಸಲು ಹೋದವರು ಇದೀಗ ಮಸಣ ಸೇರಿದ್ದಾರೆ. ಸಂಬಂಧಿಕರನ್ನು ಕರೆಯಲು ಗೊರವನಹಳ್ಳಿಯಿಂದ ದೊಡ್ಡ ಮಲಗೂಡಿಗೆ ಕುಟುಂಬಸ್ಥರು ತೆರಳುತ್ತಿದ್ದರು. ರಸ್ತೆ ತಿರುವಿನಲ್ಲಿ ಬಲವಾಗಿ ಬ್ರೇಕ್ ಹಾಕಿದರೂ ಕಂಟ್ರೋಲ್ ಸಿಗದ ಕಾರು ತಡೆಗೋಡೆಗೆ ಡಿಕ್ಕಿಯಾಗಿ, ಪಲ್ಟಿ ಹೊಡೆದು ನಾಲೆಗೆ ಉರುಳಿದೆ. ಕಾರಿನಲ್ಲಿದ್ದ ಐವರ ಪೈಕಿ ನಾಲ್ವರು ಕಾರಿನಿಂದ ಹೊರಬರಲಾಗದೆ ಮೃತಪಟ್ಟಿದ್ದಾರೆ. ಇದೀಗ ಗಾಮನಹಳ್ಳಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.(ದಿಗ್ವಿಜಯ ನ್ಯೂಸ್​)
ವ್ಯಾಘ್ರಗಳ ನೆಲೆಯಲ್ಲಿ ಬಂಡೀಪುರವೇ ಅಗ್ರ; ಹುಲಿ ಗಣತಿ ವರದಿ ಬಿಡುಗಡೆ

ಕೀಳರಿಮೆಯಿಂದಾದ ಕಿರುಕುಳ: ಆ ಕ್ಷಣ ಅಂಕಣ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − six =
Remember me
