ಬೆಂಗಳೂರು:ಬಹುಮುಖಿ ಗೆಳೆಯರ ಬಳಗ, ಸುದ್ಧಿ ಸಂಗಾತಿ ಯೂಟ್ಯೂಬ್​ ಚಾನಲ್​ ಹಾಗೂ ಅಪೂರ್ವ ಪ್ರಕಾಶನದ ಕೊಡಮಾಡುವ ‘ಅಪ್ಪ ಪ್ರಶಸ್ತಿ’ಗೆ 2021-2023ರ ಅವಧಿಯಲ್ಲಿ ಪ್ರಕಟವಾಗಿರುವ ವಿವಿಧ ಲೇಖಕರ ನಾಲ್ಕು ಕೃತಿಗಳು ಆಯ್ಕೆಯಾಗಿವೆ.
ಲೇಖಕರಾದ ಕೊಡಗಿನ ಸ್ಮಿತಾ ಅಮೃತ್​ ರಾಜ್​ ಅವರ ‘ನೆಲದಾಯ ಪರಿಮಳ’ (ಲಲಿತ ಪ್ರಬಂಧಗಳ ಸಂಕಲನ), ಬೆಂಗಳೂರಿನ ಡಾ. ಟಿ.ವೆಂಕಟೇಶಮೂರ್ತಿ ಅವರ ‘ಕನ್ನಡ ನಾಟಕಗಳು: ರಾತ್ರಿ ರೂಪಕಗಳು’ (ವಿಮರ್ಶಾತ್ಮಕ ಕೃತಿ), ಬಾಗಲಕೋಟೆಯ ಮಲ್ಲಿಕಾರ್ಜುನ ಶಲ್ಲಿಕೇರಿ ಅವರ ‘ದೀಡೆಕರೆ ಜಮೀನು’ (ಕಥಾ ಸಂಕಲನ), ಹಾಗೂ ತುಮಕೂರಿನ ಗುರುಪ್ರಸಾದ್​ ಕಂಟಲಗೆರೆ ಅವರ ‘ಟ್ರಂಕು ತಟ್ಟೆ’ (ಅನುಭವ ಕಥನ) ಪ್ರಶಸ್ತಿಗೆ ಆಯ್ಕೆಯಾಗಿದೆ. ಪ್ರಶಸ್ತಿಯು 5 ಸಾವಿರ ರೂ. ನಗದು, ಪ್ರಶಸ್ತಿ ಪತ್ರ ಹಾಗೂ ಫಲಕ ಒಳಗೊಂಡಿದೆ.
ಪ್ರಶಸ್ತಿ ಪ್ರದಾನ ಸಮಾರಂಭ ಆ.4ರಂದು ತುಮಕೂರಿನಲ್ಲಿ ನಡೆಯಲಿದ್ದು, ಹಿರಿಯ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಪುರಸತರಿಗೆ ಪ್ರಶಸ್ತಿ ವಿತರಿಸಲಿದ್ದಾರೆ ಎಂದು ಬಳಗದ ಸಂಚಾಲಕ ಟಿ.ಸತೀಶ್​ ಜವರೇಗೌಡ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 5 =
Remember me
