ಬೆಂಗಳೂರು:ಬೆಂಗಳೂರು ಬಿಬಿಎಂಪಿ ವ್ಯಾಪ್ತಿಯ ಅಂಜನಾಪುರ ವಾರ್ಡ್​ನ ಕಂಬತ್ತಳ್ಳಿಯಲ್ಲಿ ಮಂಗಳವಾರ ಬೆಳಗ್ಗೆ ಸುಮಾರು 14 ಅಡಿ ಉದ್ದದ ಹೆಬ್ಬಾವೊಂದನ್ನು ರಕ್ಷಣೆ ಮಾಡಲಾಗಿದ್ದು ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.
ಇಂಡಿಯನ್ ರಾಕ್ ಪೈತಾನ್ ಜಾತಿಯ ಹೆಬ್ಬಾವನ್ನು ವನ್ಯಜೀವಿ ಸಂರಕ್ಷಕ ರಹೀದಾಸ್ ಹಾಗೂ ಬಿಬಿಎಂಪಿ ಅರಣ್ಯ ಘಟಕದ ವತಿಯಿಂದ ವನ್ಯಜೀವಿ ಸಂರಕ್ಷಣಾ ತಂಡ ರಕ್ಷಣೆ ಮಾಡಿದೆ. ಇಲ್ಲಿನ ಹಂದಿ ಸಾಕಣೆ ಕೇಂದ್ರದ ನೀರಿನ ಚಾನಲ್​ನೊಳಗೆ ಸೇರಿಕೊಂಡಿದ್ದ ಹೆಬ್ಬಾವನ್ನು ರಕ್ಷಣೆ ಮಾಡಲು ಸತತ 4 ಗಂಟೆ ಕಾರ್ಯಾಚರಣೆ ನಡೆಸಲಾಯಿತು ಎಂದು ರಹೀದಾಸ್ ತಿಳಿಸಿದ್ದಾರೆ.
ಇದನ್ನೂ ಓದಿ:ಬೆಂಗ್ಳೂರಲ್ಲಿ ರ‍್ಯಾಪಿಡೋ ಸವಾರನ ದುರ್ವರ್ತನೆ: ಬೈಕ್​ನಿಂದ ಜಿಗಿದು ಕಾಮುಕನಿಂದ ಪಾರಾದ ಯುವತಿ
ಉಪ ಅರಣ್ಯ ಅಧಿಕಾರಿಗಳ ನಿರ್ದೇಶನದಂತೆ ಅರಣ್ಯದಲ್ಲಿ ಬಿಡಲಾಗಿದೆ, ಸಾಮಾನ್ಯವಾಗಿ ಬೇಸಿಗೆ ವೇಳೆ ಹೆಬ್ಬಾವು ಸೇರಿ ಇನ್ನಿತರ ಜಾತಿಯ ಹಾವುಗಳು ನಗರಪ್ರದೇಶಗಳತ್ತ ಮುಖಮಾಡುತ್ತವೆ, ಅಲ್ಲದೆ ಈ ಭಾಗದಲ್ಲಿ ಹೊಸದಾಗಿ ಬಡಾವಣೆ ನಿರ್ವಣವಾಗುತ್ತಿರುವುದರಿಂದ ಅರಣ್ಯ ಪ್ರದೇಶದ ವ್ಯಾಪ್ತಿ ಚಿಕ್ಕದಾಗುತ್ತಿದ್ದು ಹಾವುಗಳ ಆವಾಸಸ್ಥಾನಕ್ಕೆ ಕುತ್ತುಬರುತ್ತಿದೆ ಎಂದು ತಿಳಿಸಿದ್ದಾರೆ.
ಹದಿನೈದು ವರ್ಷದಿಂದ ವನ್ಯಜೀವಿ ಸಂರಕ್ಷಣೆ ಕಾಯಕದಲ್ಲಿ ತೊಡಗಿಸಿಕೊಂಡಿದ್ದೇನೆ, 10 ಸಾವಿರಕ್ಕೂ ಹೆಚ್ಚು ಹಾವುಗಳ ರಕ್ಷಣೆ ಮಾಡಿದ್ದೇನೆ, ಅರಣ್ಯಧಿಕಾರಿಕಾರಿಗಳ ಮಾರ್ಗದರ್ಶನದಲ್ಲಿ ಅವುಗಳನ್ನು ಸುರಕ್ಷಿತವಾಗಿ ಅರಣ್ಯಪ್ರದೇಶಗಳಿಗೆ ಬಿಡಲಾಗುತ್ತದೆ. ಬೇಸಿಗೆ ವೇಳೆ ಹಾವುಗಳು ನಗರಪ್ರದೇಶಗಳತ್ತ ಬರುತ್ತವೆ. ಯಾರೂ ಅವುಗಳಿಗೆ ಹಾನಿ ಮಾಡಬಾರದು. ಕೂಡಲೇ ಕರೆ ಮಾಡಿದರೆ ರಕ್ಷಣೆ ಮಾಡಲಾಗುವುದು.
| ರಹೀದಾಸ್ ವನ್ಯಜೀವಿ ಸಂರಕ್ಷಕ
ಇದನ್ನೂ ಓದಿ:ನನ್ನ ಮೊದಲ ಗೆಳೆಯ; ‘ಅಭಿ’ ಚಿತ್ರದ ನೆನಪುಗಳ ಬುತ್ತಿ ಬಿಚ್ಚಿಟ್ಟ ನಟಿ ರಮ್ಯಾ
ಪ್ರಸ್ತುತ ಬೇಸಿಗೆ ಇರುವುದರಿಂದ ಹಾವುಗಳು ಬಿಸಿಲಿನ ತಾಪಕ್ಕೆ ಹೊರಬರುತ್ತಿವೆ. ಇವುಗಳಿಗೆ ಯಾರೂ ಹಾನಿಯುಂಟುಮಾಡದೆ ಬಿಬಿಎಂಪಿ ಅರಣ್ಯ ವಿಭಾಗದ ವನ್ಯಜೀವಿ ತಂಡಗಳಿಗೆ ಕರೆ ಮಾಡಿ ಸಂರಕ್ಷಣೆ ಮಾಡಲು ಹಾಗೂ ಸೂಕ್ತ ಆವಾಸ ಸ್ಥಾನಕ್ಕೆ ಬಿಡಲು ಸಾರ್ವಜನಿಕರು ಅನುವು ಮಾಡಿಕೊಡಬೇಕೆಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಸರಿನಾ ಸಿಕ್ಕಲಿಗರ್ ಮನವಿ ಮಾಡಿದ್ದಾರೆ ಎಲ್ಲಿಯಾದರೂ ಇಂಥ ಜೀವಿಗಳು ಕಂಡುಬಂದರೆ ತಕ್ಷಣ ಸಹಾಯವಾಣಿ 080- 22221188 ಕರೆ ಮಾಡುವಂತೆ ಕೋರಿದ್ದಾರೆ.
ಬೆಂಗ್ಳೂರಲ್ಲಿ ರ‍್ಯಾಪಿಡೋ ಸವಾರನ ದುರ್ವರ್ತನೆ: ಬೈಕ್​ನಿಂದ ಜಿಗಿದು ಕಾಮುಕನಿಂದ ಪಾರಾದ ಯುವತಿ

ಜಯಂ ರವಿ ಕಣ್ಣೀರು: ಬೆಂಗಳೂರಿನಲ್ಲಿ ‘ಪೊನ್ನಿಯಿನ್ ಸೆಲ್ವನ್ 2’ ಪ್ರಚಾರದ ವೇಳೆ ಘಟನೆ

ಕಿವಿಯ ಕೂದಲು ಉಲ್ಲೇಖಿಸಿ ನಿರ್ಮಾಪಕನಿಗೆ ತಿರುಗೇಟು ನೀಡಿದ ಸಮಂತಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − eleven =
Remember me
