ಬೆಂಗಳೂರು:ರಾಜ್ಯದಲ್ಲಿ ಕೈಗಾರಿಕಾ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ಹಾಗೂ ಉದ್ಯೋಗ ಸೃಷ್ಟಿಸುವ ಯೋಜನೆಗಳಿಗೆ ವೇಗದ ಸ್ಪರ್ಶ ನೀಡಿದ್ದೇವೆ ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.
ಇದನ್ನೂ ಓದಿ :ಗಟ್ಟಿ ಮುಟ್ಟಾಗಿದ್ದೇನೆ ಎಂದು ಟ್ವೀಟ್​ ಮಾಡಿ ಅಭಿಮಾನಿಗಳಿಗೆ ಧೈರ್ಯ ತುಂಬಿದ ಸಿದ್ದರಾಮಯ್ಯ…
“ಜುಲೈ 1ರೊಳಗೆ ಐಫೋನ್ ತಯಾರಿಕಾ ಕಂಪನಿ ಫಾಕ್ಸ್ ಕಾನ್ ಸಂಸ್ಥೆಗೆ ಭೂಮಿಯ ಹಸ್ತಾಂತರ ಮಾಡಲಿದ್ದು, ಫಾಕ್ಸ್ ಕಾನ್ ಸಂಸ್ಥೆಯಿಂದ ಶೀಘ್ರವೇ ದೇವನಹಳ್ಳಿಯಲ್ಲಿ ಘಟಕ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ” ಎಂದು ಸಚಿವರು ಹೇಳಿದ್ದಾರೆ.ಸದ್ಯ ರಾಜ್ಯ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಟ್ವೀಟ್ ಸಮರ ಆರಂಭವಾಗಿದ್ದು, “ಈ ಹಿಂದೆ ಕಾಂಗ್ರೆಸ್ ಅವಧಿಯಲ್ಲಿ ಬಿತ್ತಿದ ಬೀಜ ಮೊಳಕೆಯೊಡೆಯಲು ಮತ್ತೆ ಕಾಂಗ್ರೆಸ್ ಸರ್ಕಾರವೇ ಬರಬೇಕಾಯ್ತು. ಫಾಕ್ಸ್‌ಕಾನ್ ಸಂಸ್ಥೆಯ ಐಫೋನ್ ತಯಾರಿಕಾ ಘಟಕಕ್ಕೆ ಭೂಮಿ ಒದಗಿಸಿ ಬಂಡವಾಳ ಹೂಡಿಕೆಗೆ ಒತ್ತು ನೀಡಲು ಸಜ್ಜಾಗಿದೆ ನಮ್ಮ ಸರ್ಕಾರ” ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಇದನ್ನೂ ಓದಿ :ಲೈಂಗಿಕ ದೌರ್ಜನ್ಯದ ಆರೋಪಿ ಬಿಷಪ್​ರಿಂದ ರಾಜೀನಾಮೆ; ಶಿಸ್ತು ಕ್ರಮ ಅಲ್ಲ ಎಂದ ಚರ್ಚ್!
“ಐಫೋನ್ ತಯಾರಿಕಾ ಕಂಪನಿ ಫಾಕ್ಸ್ ಕಾನ್ ಸಂಸ್ಥೆಯಿಂದ 50,000 ಉದ್ಯೋಗ ಸೃಷ್ಟಿ, ವಾರ್ಷಿಕ 20 ಮಿಲಿಯನ್ ಐಫೋನ್ ತಯಾರಿಕೆ, 1.7 ಬಿಲಿಯನ್ ಬಂಡವಾಳ ಹೂಡಿಕೆ ಆಗಲಿದೆ” ಎಂದು ಎಂ.ಬಿ ಪಾಟೀಲ್ ಅವರ ಅಧಿಕೃತ ಟ್ವಿಟರ್ ಖಾತೆ ಮಾಹಿತಿ ನೀಡಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 18 =
Remember me
