| ಕೃಷ್ಣರಾಜ ಕುತ್ಪಾಡಿ
ದಶರಥನ ಯಜ್ಞದ ಸುತ್ತ ದೇವತೆಗಳದೇ ಕಾರುಬಾರು. ದೇವತೆಗಳು ಯಜ್ಞಪುರುಷನಾದ ತಮ್ಮ ರಕ್ಷಣೆಗಾಗಿ ನಾರಾಯಣನನ್ನು ಸ್ತುತಿಸಿದರು.
ಉತ್ಸಾದಯತಿ ತ್ರೀನ್ ಲೋಕಾನ್ ಸ್ತ್ರಿಯಶ್ಚಾಪ್ಯಪಕರ್ಷತಿ|
‘ಮೂರು ಲೋಕಗಳ ಮೂಲೆ ಮೂಲೆಗಳನ್ನು ಕಿತ್ತು ತಿನ್ನುತ್ತಿದ್ದಾನೆ ಈ ರಾವಣ. ನಿರಪರಾಧಿಯರಾದ ಹೆಣ್ಣುಮಕ್ಕಳನ್ನು ಅಪಹರಿಸಿ ಹಿಂಸಿಸುತ್ತಿದ್ದಾನೆ.’
ಮಾನುಷೀಂ ತನುಮಾಸ್ಥಾಯ ರಾವಣಂ ಜಹಿ ಸಂಯುಗೇ|
‘ನರಭಕ್ಷಕನಾದ ರಾವಣನನ್ನು ನರನ ರೂಪದಿಂದಲೇ ಕದನಗೈದು ಸಂಹರಿಸು.’ ಎಂದು ಬೇಡಿಕೊಂಡರು. ಅವನ ನಗೆಯಲ್ಲಿ ‘ತಥಾಸ್ತು’ ಎಂಬ ಭರವಸೆ ಇತ್ತು. ಇಷ್ಟೇ ಅಲ್ಲದೆ ದೇವತೆಗಳು ನಾರಾಯಣನ ಸೇವೆಗಾಗಿ ತಾವೆಲ್ಲರೂ ಮನುಷ್ಯ, ಕರಡಿ, ಮಂಗಗಳ ನಡುವೆ ಒಬ್ಬರಾಗಿ ನಿಂತರು. ಪ್ರಜಾಪತಿ ಎನಿಸಿದ ಚತುಮುಖ ಯಜ್ಞದ ನಡುವೇದಿಯಲ್ಲಿ ಬೆಂಕಿಮೈಯವನಾಗಿ, ಪಾಯಸವನ್ನು ಹೊತ್ತು ದಶರಥನ ಮುಂದೆ ಬಂದನು.
ಇದಂ ತು ನೃಪಶಾರ್ದೂಲ ಪಾಯಸಂ ದೇವನಿರ್ವಿುತಂ|
ಪ್ರಜಾಕರಂ ಗೃಹಾಣ ತ್ವಂ ಧನ್ಯಮಾರೋಗ್ಯವರ್ಧನಂ||
‘ರಾಜನೇ! ದೇವತೆಗಳು ತಯಾರಿಸಿದ ಪಾಯಸವಿದು. ಒಳ್ಳೆಯ ಸಂತತಿಯನ್ನು ಒದಗಿಸುವಂಥದ್ದು. ಜೀವನಕ್ಕೆ ಧನ್ಯತಾಭಾವ ನೀಡುವಂಥದ್ದು. ಆರೋಗ್ಯವನ್ನು ಹೆಚ್ಚಿಸುವಂಥದ್ದು.’ನಾಲ್ಮೊಗ ಹೀಗೆ ಹೇಳಿ ಅನುಗ್ರಹಿಸಿ ಮರೆಯಾದ. ದಶರಥ ತಲೆಬಾಗಿ ಆ ಪಾಯಸವನ್ನು ಸ್ವೀಕರಿಸಿದ. ಅವನ ಸಂತೋಷಕ್ಕೆ ಪಾರವೇ ಇರಲಿಲ್ಲ. ಭಾಗ್ಯದ ಬಾಗಿಲು ತೆರೆದಿತ್ತು. ತನ್ನ ಮಡದಿಯರಿಗೆ ಪಾಯಸವನ್ನು ಹಂಚಿದ.
ಕೌಸಲ್ಯಾಯೈ ನರಪತಿಃ ಪಾಯಸಾರ್ಧಂ ದದೌ ತದಾ|
ಅರ್ಧಾದರ್ಧಂ ದದೌ ಚಾಪಿ ಸುಮಿತ್ರಾಯೈ ನರಾಧಿಪಃ|
ಕೈಕೇಯೈ ಚಾವಶಿಷ್ಟಾರ್ಧಂ ದದೌ ಪುತ್ರಾರ್ಥಕಾರಣಾತ್|
ಪ್ರದದೌ ಚಾವಶಿಷ್ಟಾರ್ಧಂ ಪಾಯಸಸ್ಯಾಮೃತೋಪಮಂ|
ಅನುಚಿಂತ್ಯ ಸುಮಿತ್ರಾಯೈ ಪುನರೇವ ಮಹೀಪತಿಃ||
‘ಅಮೃತದಂತಿರುವ ಪಾಯಸದ ಅರ್ಧಭಾಗವನ್ನು ಕೌಸಲ್ಯೆಗೆ ನೀಡಿದ. ಅರ್ಧದ ಅರ್ಧ ಎಂದರೆ ಕಾಲು ಭಾಗವನ್ನು ಸುಮಿತ್ರೆಗೆ ಒದಗಿಸಿದ. ಉಳಿದದ್ದರಲ್ಲಿ ಅರ್ಧಭಾಗ ಅಂದರೆ ಎಂಟನೇ ಒಂದು ಭಾಗ ಕೈಕೇಯಿಗೆ ಪಾಯಸವನ್ನು ಕೊಟ್ಟ. ಉಳಿದ ಭಾಗವನ್ನು ಮತ್ತೊಮ್ಮೆ ಸುಮಿತ್ರೆಗೆ ಪ್ರತ್ಯೇಕವಾಗಿ ನೀಡಿ ಪಾಯಸವನ್ನು ಹಂಚಿದ.’
1/2, 1/4, 1/8, 1/16 ಹೀಗೆ ಭಿನ್ನರಾಶಿಯ ಗಣಿತವನ್ನು ಸಾವಿರಾರು ವರ್ಷಗಳ ಹಿಂದಿನ ಭಾರತೀಯ ಗಣಿತದ ಇತಿಹಾಸ ಗುರುತಿಸಿದೆ. ನಾವು ಗಮನಿಸಬಹುದಾದ ಪರಮಾಣುಕಾಲದ ಸೂಕ್ಷ್ಮಭಾಗವನ್ನು ಭಾಗವತ ಗುರುತಿಸಿದ್ದು 16/18,225 ಎಂಬುದಾಗಿ. ಇಂತಹ ನೂರಾರು ಗಣಿತ ಕುತೂಹಲಗಳು ರಾಮಾಯಣದಲ್ಲಿ ಅಡಗಿವೆ.
(ಲೇಖಕರು ಸಂಸ್ಕೃತ ಉಪನ್ಯಾಸಕರು)
ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಮಿಂಚಿದ್ದ ಸಿಂಧು ಮೆನನ್​ ಈಗ ಹೇಗಿದ್ದಾರೆ? ಇಲ್ಲಿವೆ ಫೋಟೋಗಳು…

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:sixteen − 2 =
Remember me
