ಬೆಂಗಳೂರು:ನೂರಾರು ಅಮಾಯಕ ಜನರಿಗೆ ಚೀಟಿ ಹೆಸರಲ್ಲಿ ಯಾಮಾರಿಸಿ ಲಕ್ಷ ಲಕ್ಷ ಹಣ ದೋಚಿ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಉಪವಿಭಾಗದ ಮಾದನಾಯಕನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ವಶದಲ್ಲಿರುವ ವೆಂಕಟೇಶ ಬಾಬು, ಲೋಕೇಶ್ ಬಾಬು ಮತ್ತು ನಟರಾಜ ಬಾಬು ಎಂಬ ಐನಾತಿ ಸಹೋದರರು ಅಗರಬತ್ತಿ ಕಂಪನಿ, ನಟರಾಜ ಟ್ರೇಡರ್ಸ್, ಬಾಬು ಚಿಟ್ ಫಂಡ್ ಅಂತ ಬೋರ್ಡ್ ಹಾಕಿಕೊಂಡು ಸಾಕಷ್ಟು ವರ್ಷಗಳಿಂದ ಅಮಾಯಕ ಜನರನ್ನು ನಂಬಿಸಿ ಪ್ರತಿ ತಿಂಗಳು ಚೀಟಿ ಹಣ ಕಟ್ಟಿಸಿಕೊಂಡು ಯಾಮಾರಿಸಿದ್ದರು.
ಇದನ್ನೂ ಓದಿರಿ:ಅಮೇಜಾನ್ ಉದ್ಯೋಗಿಯ ಭಯಾನಕ ಆತ್ಮಹತ್ಯೆ: ಯೂಟ್ಯೂಬ್​ನಲ್ಲಿ ಹುಡುಕಾಟ, ಸಾವಿನ ರಹಸ್ಯ ಬಿಚ್ಚಿಟ್ಟ ಡೆತ್​ನೋಟ್​!
ಇಷ್ಟೇ ಅಲ್ಲದೆ, ಬೀದಿಯಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸೋ ಮಂಗಳಮುಖಿಯ ಬಳಿಯೂ ಬಿಡದೇ ಲಕ್ಷ ಲಕ್ಷ ರೂ. ಹಣ ಕೈ ಸಾಲ ಮಾಡ್ಕೊಂಡು ಯಾಮಾರಿಸಿದ್ದರು. ಈ ಬಾಬು ಬ್ರದರ್ಸ್ ಜನರಿಗೆ ಹಣ ಕೊಡುವ ಸಮಯಕ್ಕೆ ಹಣ ಕೊಡದೇ, ಕೆಲವರಿಗೆ ಚೆಕ್​ಗಳನ್ನು ನೀಡಿ, ಕಳೆದ 5-6 ತಿಂಗಳಿಂದ ತಲೆಮರೆಸಿಕೊಂಡಿದ್ದರು.
ಈ ಸಂಬಂಧ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಕೊಂಡಿದ್ದ ಮಾದನಾಯಕನಹಳ್ಳಿ ಪೊಲೀಸ್ರು ಆರೋಪಿಗಳನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ. ತಿಂಗಳೆಲ್ಲಾ ಕಷ್ಟಪಟ್ಟು ದುಡಿದು ತಪ್ಪದೆ ಪ್ರತಿ ತಿಂಗಳು ಇವರನ್ನ ನಂಬಿ ಚೀಟಿ ಹಣ ಕಟ್ಟುತ್ತಿದ್ದ ಜನ್ರ ಬದುಕು ಸದ್ಯ ಬೀದಿಗೆ ಬಿದ್ದಂತ್ತಾಗಿದ್ದು, ಸ್ಮಶನಕ್ಕೆ ಹೋದ ಹೆಣ, ಇಂತಹವರಿಗೆ ಕೊಟ್ಟ ಹಣ ಎಂದು ವಾಪಸ್ಸು ಬರೋಲ್ಲ ಅನ್ನೋ ಗಾದೆ ಮಾತಿನಂತಾಗಿದೆ. ಆದರೂ ಆರೋಪಿಗಳು ಸಿಕ್ಕಿಬಿದ್ದಿರುವುದಿಂದ ಹಣ ಬರಬಹುದು ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ.(ದಿಗ್ವಿಜಯ ನ್ಯೂಸ್​)
ರಾತ್ರೋರಾತ್ರಿ ಸಿನಿಮಾ ಹಾಲ್​ಗೆ ನುಗ್ಗಿ ಸ್ನ್ಯಾಕ್ಸ್​​ ಕದ್ದು ತಿಂದು, ಸೆಕ್ಸ್​ ಮಾಡಿ ಸಿಸಿಟಿವಿಯಲ್ಲಿ ಸಿಕ್ಕಿಬಿದ್ದ ದಂಪತಿ!

ನೈಟ್​ ಶಿಫ್ಟ್​ ಮುಗಿಸಿ ಮನೆಗೆ ತೆರಳುತ್ತಿದ್ದವರ ಮೇಲೆ ಮೃತ್ಯವಿನಂತೆ ಬಂದೆರಗಿದ ಮರ್ಸಿಡೀಸ್​..!

ಸಿಡಿ ಗ್ಯಾಂಗ್​ನ ಕೈ ಹಿಡಿತಿದೆಯೇ ರಾಜಸ್ಥಾನ? ದುಡ್ಡು ಖಾಲಿಯಾಗ್ತಿದ್ದಂತೆಯೇ ಎಸ್ಕೇಪ್​ ಆದ್ರು ಆರೋಪಿಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
