| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರುರಾಷ್ಟ್ರದ ಎಲ್ಲೆಡೆ ವ್ಯಾಪಿಸುತ್ತಿರುವ ಸೈಬರ್ ಕಳ್ಳರ ‘ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಮ್ (ಎಇಪಿಎಸ್) ವಂಚನೆ ಪ್ರಕರಣಗಳು ರಾಜ್ಯಕ್ಕೂ ಕಾಲಿರಿಸಿದೆ. ಗ್ರಾಮೀಣ ಜನರೇ ಹೆಚ್ಚು ಟಾರ್ಗೆಟ್ ಆಗುತ್ತಿದ್ದು, ಕೂಡಿಟ್ಟಿದ್ದ ಸಣ್ಣ ಸಣ್ಣ ಮೊತ್ತವನ್ನು ಸೈಬರ್ ಖದೀಮರು ದೋಚುತ್ತಿರುವುದು ಹೆಚ್ಚಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಬ್ಸಿಡಿ, ಧನ ಸಹಾಯ ಸೇರಿದಂತೆ ವಿವಿಧ ಸೌಲಭ್ಯ ಪಡೆಯಲು ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯವಾಗಿದೆ. ಮುಂದುವರಿದ ಭಾಗವಾಗಿ ಎಇಪಿಎಸ್ ಯೋಜನೆ ಜಾರಿಗೆ ತರಲಾಗಿದೆ. ಅಂದರೆ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಆಧಾರ್ ನಂಬರ್ ಅಥವಾ ಬಯೋಮೆಟ್ರಿಕ್ ಬಳಸಿ ಹಣ ರವಾನೆ ಅಥವಾ ವಿತ್ ಡ್ರಾ ಮಾಡುವ ವ್ಯವಸ್ಥೆಯೇ ಎಇಪಿಎಸ್. ಹಣ ಡ್ರಾ ಮಾಡಲು ಜನರು, ಬ್ಯಾಂಕಿಗೆ ಹೋಗಬೇಕಿಲ್ಲ.
ಗ್ರಾಮೀಣ ಭಾಗದ ಜನರ ಅನುಕೂಲಕ್ಕಾಗಿ ಬ್ಯಾಂಕ್ ಮತ್ತು ಅಂಚೆ ಕಚೇರಿ ಕಡೆಯಿಂದ ಪ್ರತಿನಿಧಿಗಳನ್ನು ನೇಮಕ ಮಾಡಿ ಅವರಿಗೆ ಎಇಪಿಎಸ್ ಮಿಷನ್ ವಿತರಿಸಲಾಗಿದೆ. ಅಲ್ಲದೆ, ಸೈಬರ್ ಸೆಂಟರ್​ಗಳಲ್ಲಿ ಕೆಲವರು ಆಧಾರ್ ನಂಬರ್ ಮತ್ತು ಬೆರಳಚ್ಚು ಪಡೆದು ಗ್ರಾಹಕನ ಬ್ಯಾಂಕ್ ಖಾತೆಯಿಂದ ತಮ್ಮ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡು ನಗದು ಕೊಡುತ್ತಾರೆ. ಒಮ್ಮೆ ಕನಿಷ್ಠ 100 ರೂ.ಗಳಿಂದ ಗರಿಷ್ಠ 10 ಸಾವಿರ ರೂ. ವರೆಗೂ ಡ್ರಾ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಅದರಲ್ಲಿಯೂ ಇತ್ತೀಚೆಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಸೌಲಭ್ಯಕ್ಕಾಗಿ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಅಗತ್ಯವಾಗಿತ್ತು. ಬಹುತೇಕ ಜನರು ಕೆವೈಸಿ ಮಾಡಿಸಿದ್ದಾರೆ. ಆದರೆ ಸೈಬರ್ ಕಳ್ಳರು, ಎಇಪಿಎಸ್ ಮಾರ್ಗವನ್ನೇ ದುರ್ಬಳಕೆ ಮಾಡಿಕೊಂಡು ಅಮಾಯಕ ಜನರ ಬ್ಯಾಂಕ್​ನ ಖಾತೆಗಳಿಗೆ ಕನ್ನ ಹಾಕುತ್ತಿದ್ದಾರೆ.
ಜನರ ಬಯೋಮೆಟ್ರಿಕ್ ಡೇಟಾ ಮತ್ತು ಬೆರಳಚ್ಚು ಮಾಹಿತಿ ಕದ್ದು ಅದರ ಮೂಲಕ ಎಇಪಿಎಸ್ ಮಾರ್ಗವಾಗಿ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿದ್ದಾರೆ. ಎಇಪಿಎಸ್​ನಲ್ಲಿ ಹಣ ಡ್ರಾ ಅಥವಾ ವರ್ಗಾವಣೆಗೆ ಒನ್ ಟೈಮ್ ಪಾಸ್​ವರ್ಡ್(ಒಟಿಪಿ), ಬ್ಯಾಂಕ್ ಖಾತೆ ವಿವರ, ಡೆಬಿಟ್ ಕಾರ್ಡ್ ಮತ್ಯಾವುದೇ ಗೌಪ್ಯ ಮಾಹಿತಿ ಅಗತ್ಯ ಇರುವುದಿಲ್ಲ. ಕೇವಲ ಖಾತೆದಾರನ ಬಯೋಮೆಟ್ರಿಕ್ ಮಾಹಿತಿ ಇದ್ದರೇ ಸಾಕು ಹಣ ಡ್ರಾ ಮಾಡಬಹುದಾಗಿದೆ.
ಬೆಂಗಳೂರು ನಗರ, ಮಂಗಳೂರು, ಚನ್ನರಾಯಪಟ್ಟಣ ತಾಲೂಕು ಸೇರಿದಂತೆ ವಿವಿಧೆಡೆ ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಎಫ್​ಐಆರ್ ದಾಖಲಾಗುತ್ತಿವೆ.
ಹಲವೆಡೆ ಪ್ರಕರಣ ದಾಖಲು:ಎಇಪಿಎಸ್ ವಂಚನೆ ಪ್ರಕರಣಗಳ ತನಿಖೆ ಕೈಗೊಂಡಿರುವ ಪೊಲೀ ಸರಿಗೆ ಸ್ಪೋಟಕ ಮಾಹಿತಿ ಲಭ್ಯವಾಗಿದೆ. ಹೊಸ ಕಾರು, ಸಿಮ್ ಕಾರ್ಡ್ ಖರೀದಿ, ಅಪರಿಚಿತ ವೆಬ್​ಸೈಟ್​ಗಳಲ್ಲಿ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವಾಗ ಜನರ ಬಯೋಮೆಟ್ರಿಕ್ ಮಾಹಿತಿ ಸೋರಿಕೆ ಆಗುತ್ತಿದೆ ಎಂಬುದು ಗೊತ್ತಾಗಿದೆ. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ದಸ್ತಾವೇಜುಗಳ ನೋಂದಣಿಗೆ ಹೆಬ್ಬರಳ ಬೆರಳಚ್ಚು ಮುದ್ರೆ (ಥಂಬ್ ಇಂಪ್ರೆಷನ್) ಕೊಟ್ಟ ಮೇಲೆ ಬ್ಯಾಂಕ್ ಖಾತೆಗೆ ಕನ್ನ ಬೀಳುತ್ತಿದೆ ಎಂಬ ಆರೋಪ ಕೇಳಿಬರುತ್ತಿದ್ದು, ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ಹೈಗ್ರೌಂಡ್ಸ್ ಠಾಣೆಗೆ ದೂರು ಸಲ್ಲಿಸಿರುವ ಮಹಿಳೆ, ಆಸ್ತಿ ಮಾರಾಟ ಸಂಬಂಧ ದಾವಣಗೆರೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಬೆರಳಚ್ಚು ಕೊಟ್ಟಿದ್ದರು. ಇದಾದ ಮೇಲೆ ಎರಡು ಬಾರಿ ಎಇಪಿಎಸ್​ನಲ್ಲಿ 10 ಸಾವಿರ ರೂ. ವಿತ್ ಡ್ರಾ ಆಗಿದೆ.
ಚನ್ನರಾಯಪಟ್ಟಣ ತಾಲೂಕಿನ ನುಗ್ಗೆಹಳ್ಳಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಒಂದೇ ಕುಟುಂಬದ ಆರು ಮಂದಿ ಸೆ.29ರಂದು ವಿಭಾಗ ಪತ್ರ ಮಾಡಿಸಿದ್ದರು. ಕೆಲವೇ ತಾಸಿನಲ್ಲಿ ಐವರ ಬ್ಯಾಂಕ್ ಖಾತೆಯಲ್ಲಿ ಇದ್ದ ಹಣ ವಿತ್ ಡ್ರಾ ಆಗಿದೆ. ಈ ಬಗ್ಗೆ ಬ್ಯಾಂಕ್​ನಲ್ಲಿ ವಿಚಾರಿಸಿದಾಗ ಎಇಪಿಎಸ್ ಮೂಲಕ ಹಣ ಡ್ರಾ ಆಗಿರುವುದಾಗಿ ಸ್ಟೇಟ್​ವೆುಂಟ್ ಕೊಟ್ಟಿದ್ದಾರೆ. ಈ ಬಗ್ಗೆ ನುಗ್ಗೆಹಳ್ಳಿ ಠಾಣೆಗೆ ಕುಟುಂಬದವರು ದೂರು ಸಲ್ಲಿಸಿದ್ದಾರೆ.
ಆಧಾರ್ ಗೌಪ್ಯತೆ ಕಾಪಾಡಲು ಸೂಚನೆ:ಉಪ ನೋಂದಣಿ ಕಚೇರಿಯಲ್ಲಿ ದಸ್ತಾವೇಜುಗಳ ನೋಂದಣಿಗೆ ಬೆರಳಚ್ಚು ಕೊಟ್ಟ ಮೇಲೆ ಬ್ಯಾಂಕ್ ಖಾತೆಯಲ್ಲಿ ಹಣ ಡ್ರಾ ಆಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದ್ದವು. ಎಚ್ಚೆತ್ತ ನೋಂದಣಿ ಮತ್ತು ಮುದ್ರಾಂಕ ಇಲಾಖೆ, ದಸ್ತಾವೇಜಿನ ನೋಂದಣಿ ವೇಳೆ ಪಕ್ಷಗಾರರ ಆಧಾರ್ ಮಾಹಿತಿ ಗೌಪ್ಯತೆ ಕಾಪಾಡುವಂತೆ ಆದೇಶಿಸಿದ್ದಾರೆ. ದಸ್ತಾವೇಜಿನಲ್ಲಿ ಪಕ್ಷಗಾರರ ಆಧಾರ್ ಕೊನೆಯ 4 ನಂಬರ್ ನಮೂದಿಸುವಂತೆ ಮತ್ತು ಅವರ ನಕಲು ಪ್ರತಿಯನ್ನು ಸುರಕ್ಷಿತವಾಗಿ ಕಾಪಾಡುವಂತೆ ಸಬ್ ರಿಜಿಸ್ಟ್ರಾರ್​ಗಳಿಗೆ ಸೂಚನೆ ನೀಡಲಾಗಿದೆ.
ನಮಸ್ಕಾರ ದೇವ್ರು.. ಇಲ್ಲಿ ದೇವ್ರದ್ದೇ ಬ್ಯಾಟಿಂಗ್​-ಫೀಲ್ಡಿಂಗ್​!; ಡಾ.ಬ್ರೋ ಭೇಟಿ ನೀಡಿರುವ ಈ ಕ್ರಿಕೆಟ್ ದೇವಸ್ಥಾನ ಎಲ್ಲಿದೆ?

ಚಂದ್ರಯಾನ, ಸೌರಯಾನದ ಬಳಿಕ ಮತ್ತೊಂದು ಯಾನಕ್ಕೂ ಸಿದ್ಧವಾದ ಇಸ್ರೋ; ಇಲ್ಲಿದೆ ವಿವರ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + seven =
Remember me
