| ಕೀರ್ತಿನಾರಾಯಣ ಸಿ. ಬೆಂಗಳೂರುಬಡ ರೋಗಿಗಳ ಅನುಕೂಲಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುಷ್ಠಾನಕ್ಕೆ ತಂದಿರುವ ಉಚಿತ ಆರೋಗ್ಯ ಸೇವೆ ಯೋಜನೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ ಕೆಲ ಖಾಸಗಿ ಆಸ್ಪತ್ರೆಗಳು ಕೋಟ್ಯಂತರ ರೂ. ವಂಚನೆ ಮಾಡಿರುವ ಸಂಗತಿ ಬಯಲಾಗಿದೆ. ರೋಗಿಗಳ ಉಚಿತ ಚಿಕಿತ್ಸೆ ಹೆಸರಲ್ಲಿ ಸಲ್ಲಿಸಿರುವ ನಕಲಿ ದಾಖಲಾತಿಗಳ ಕ್ಲೈಮ್ ಅವ್ಯವಹಾರವನ್ನು ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟಲಿಜೆನ್ಸ್) ಪತ್ತೆಹಚ್ಚಿರುವುದು ವಿಶೇಷ.
ವಿಶ್ವವಿದ್ಯಾಲಯ, ಇ-ಕಾಮರ್ಸ್, ಸೇಲ್ಸ್ ಆಂಡ್ ಮಾರ್ಕೆಟಿಂಗ್, ಫೈನಾನ್ಸ್ ಕಂಪನಿಗಳು, ಕೈಗಾರಿಕೆ ಸೇರಿ ಎಲ್ಲ ಕ್ಷೇತ್ರಗಳಿಗೂ ಕಾಲಿಟ್ಟಿರುವ ಆರ್ಟಿಫಿಶಿಯಲ್ ಇಂಟಲಿಜೆನ್ಸ್ (ಎಐ) ತಂತ್ರಜ್ಞಾನ ಆರೋಗ್ಯ ಕ್ಷೇತ್ರದಲ್ಲೂ ತನ್ನ ಕೆಲಸ ಆರಂಭಿಸಿದೆ. ಆರೋಗ್ಯ ಯೋಜನೆಗಳಲ್ಲಿ ನಡೆಯುವ ಅವ್ಯವಹಾರ ಪತ್ತೆಗೆ, ಪರಿಣಾಮಕಾರಿ ರೋಗ ನಿರ್ವಹಣೆ, ರೋಗ ಬರುವಿಕೆ ಬಗ್ಗೆ ಆರಂಭದಲ್ಲೇ ಎಚ್ಚರಿಕೆ ನೀಡುವಿಕೆ ಸೇರಿ ವೈದ್ಯ ಲೋಕಕ್ಕೆ ಹಲವು ರೀತಿಯಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಉಪಕಾರಿಯಾಗಿದೆ.
ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್​ಎಚ್​ಎ) ಅನುಷ್ಠಾನಕ್ಕೆ ತಂದಿರುವ ಆಯುಷ್ಮಾನ್ ಭಾರತ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಎಬಿ-ಪಿಎಂಜೆಎವೈ)ಯಲ್ಲಿ ಖಾಸಗಿ ಆಸ್ಪತ್ರೆಗಳಿಂದ ನಡೆಯುತ್ತಿರುವ ಅಕ್ರಮವನ್ನು ಎಐ ಪತ್ತೆಹಚ್ಚಿದೆ. ಸರ್ಕಾರ ನಡೆಸುತ್ತಿರುವ ಪ್ರಪಂಚದ ಅತಿದೊಡ್ಡ ಆರೋಗ್ಯ ವಿಮಾ ಯೋಜನೆಯಲ್ಲಿ ದೊಡ್ಡಪ್ರಮಾಣದಲ್ಲಿ ಮೋಸವಾಗುತ್ತಿದೆ. ದೇಶದ ಎಲ್ಲ ರಾಜ್ಯಗಳಿಂದ ಸಂಗ್ರಹವಾಗುವ ಡೇಟಾ ಪರಿಶೀಲನೆ ವೇಳೆ ಕರ್ನಾಟಕ ಸೇರಿ ಹಲವು ರಾಜ್ಯಗಳ ಖಾಸಗಿ ಆಸ್ಪತ್ರೆಗಳು ಸುಳ್ಳು ದಾಖಲಾತಿಗಳನ್ನು ಸಲ್ಲಿಸಿ ಸರ್ಕಾರದಿಂದ ಕೋಟ್ಯಂತರ ರೂ. ಹೆಚ್ಚುವರಿ ಹಣ ಪಡೆದಿರುವುದು ದೃಢಪಟ್ಟಿದೆ.
ಎನ್​ಎಚ್​ಎ ಮಾರ್ಗಸೂಚಿ ಉಲ್ಲಂಘಿಸಿದ ಆರೋಪದಲ್ಲಿ 2023ರ ಆ.5ರವರೆಗೆ 278 ಕೋಟಿ ರೂ.ಗೆ ಸಂಬಂಧಿಸಿದಂತೆ 1.6 ಲಕ್ಷ ಕ್ಲೈಮ್ಳಲ್ಲಿ ಅಕ್ರಮ ನಡೆದಿರುವುದು ದೃಢಪಟ್ಟಿದೆ. ಇಂತಹ ಆಸ್ಪತ್ರೆಗಳ ವಿರುದ್ಧ ಆಯಾ ರಾಜ್ಯಗಳು ಕ್ರಮ ಕೈಗೊಂಡಿವೆ. ಕ್ಲೈಮ್ ಅವ್ಯವಹಾರದಲ್ಲಿ ಭಾಗಿಯಾದ 210 ಆಸ್ಪತ್ರೆಗಳನ್ನು ಡಿ-ಎಂಪಾನೆಲ್ ಮಾಡಲಾಗಿದೆ. 188 ಆಸ್ಪತ್ರೆಗಳನ್ನು ಸಸ್ಪೆಂಡ್ ಮಾಡಿದ್ದು, ಸಂಬಂಧಪಟ್ಟ ಆಸ್ಪತ್ರೆಗಳಿಗೆ 20.71 ಕೋಟಿ ರೂ. ದಂಡ ವಿಧಿಸಲಾಗಿದೆ. ಇದರಲ್ಲಿ 9.5 ಕೋಟಿ ರೂ.ಅನ್ನು ಆಯಾ ರಾಜ್ಯ ಸರ್ಕಾರಗಳೇ ವಸೂಲಿ ಮಾಡಿವೆ. ಕರ್ನಾಟಕದಲ್ಲಿ 2019-20 ರಿಂದ 2022-23ರ ಅವಧಿಯಲ್ಲಿ 127 ಆಸ್ಪತ್ರೆಗಳ ವಿರುದ್ಧ 349 ದೂರು ದಾಖಲಾಗಿವೆ. ಆಸ್ಪತ್ರೆಗಳು 1.45 ಕೋಟಿ ರೂ. ಸುಲಿಗೆ ಮಾಡಿದ್ದು, ಇದರಲ್ಲಿ 59 ಲಕ್ಷ ರೂ. ಮರುವಸೂಲಿ ಮಾಡಲಾಗಿದೆ. 53 ಲಕ್ಷ ರೂ. ದಂಡ ವಿಧಿಸಲಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ ಎಂಪಾನೆಲ್ಡ್ (ನೋಂದಣಿ) ಆಗಿರುವ ದೇಶದ ಯಾವುದೇ ಖಾಸಗಿ ಆಸ್ಪತ್ರೆಗಳಲ್ಲಿ ಫಲಾನುಭವಿಗಳು 5 ಲಕ್ಷ ರೂ.ವರೆಗೂ ಉಚಿತವಾಗಿ ಚಿಕಿತ್ಸೆ ಪಡೆಯಬಹುದು. ನಗದು ರಹಿತವಾಗಿ ಚಿಕಿತ್ಸೆ ನೀಡಿದ ಖಾಸಗಿ ಆಸ್ಪತ್ರೆಗಳು, ಚಿಕಿತ್ಸೆಗೆ ಸಂಬಂಧಪಟ್ಟ ದಾಖಲಾತಿಗಳ ಸಮೇತ ಕ್ಲೈಂ ಅರ್ಜಿ ಸಲ್ಲಿಸಿ, ಸರ್ಕಾರದಿಂದ ಹಣ ಪಡೆಯುತ್ತವೆ.
ಇದರಲ್ಲಿ ಕೇಂದ್ರ ಸರ್ಕಾರ ಶೇ.60 ಹಾಗೂ ರಾಜ್ಯ ಶೇ.40 ಪ್ರಮಾಣದಲ್ಲಿ ಚಿಕಿತ್ಸಾ ವೆಚ್ಚವನ್ನು ಆಸ್ಪತ್ರೆಗಳಿಗೆ ಮರುಪಾವತಿಸುತ್ತಿವೆ. ಆದರೆ, ಖಾಸಗಿ ಆಸ್ಪತ್ರೆಗಳು ನಕಲಿ ವೈದ್ಯಕೀಯ ಬಿಲ್​ಗಳನ್ನು ಸಲ್ಲಿಸುವ ಮೂಲಕ ಯೋಜನೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಟಾಬಯಲು ಮಾಡಿದೆ.
ವಂಚನೆ ಪತ್ತೆ ಹೇಗೆ?:ದೇಶದ ಎಲ್ಲ ರಾಜ್ಯಗಳ ಆಸ್ಪತ್ರೆಗಳಲ್ಲಿ ಯೋಜನೆಯಡಿ ಕೊಡಲಾಗುವ ಚಿಕಿತ್ಸಾ ವಿವರಗಳನ್ನು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಸಂಗ್ರಹಿಸುತ್ತದೆ. ಯೋಜನೆಯಲ್ಲಿ ನಡೆಯುವ ವಂಚನೆ ಪತ್ತೆ ಮತ್ತು ತಡೆಗಟ್ಟಲು ನ್ಯಾಷನಲ್ ಆಂಡ್ ಫ್ರಾಡ್ ಯೂನಿಟ್ (ರಾಷ್ಟ್ರೀಯ ವಂಚನೆ ವಿರೋಧಿ ಘಟಕ) ಸ್ಥಾಪನೆ ಮಾಡಲಾಗಿದೆ. ಇದರಲ್ಲಿ ರಾಡಾರ್ ಮತ್ತು ಫ್ಯಾಕ್ಟ್ ಎಂಬ ಎರಡು ಪೋರ್ಟಲ್​ಗಳನ್ನು ಸ್ಥಾಪಿಸಿ ರಾಜ್ಯಗಳಿಂದ ಬರುವ ಡೇಟಾ ಪರಿಶೀಲನೆಗೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನ ಅಳವಡಿಸಲಾಗಿದೆ. ಕ್ಲೈಮ್ಾಗಿ ಸಲ್ಲಿಸಿರುವ ದಾಖಲಾತಿಗಳಲ್ಲಿ ಯಾವುದೇ ರೀತಿಯ ಅನುಮಾನಾಸ್ಪದ ವಹಿವಾಟು ಕಂಡುಬಂದರೆ ಅದನ್ನು ಎಐ ಪತ್ತೆಹಚ್ಚಲಿದೆ.
ಎನ್​ಎಫ್​ಯುು ಆ ಪ್ರಕರಣವನ್ನು ಆಯಾ ರಾಜ್ಯಕ್ಕೆ ಕಳುಹಿಸುತ್ತದೆ. ಅಲ್ಲಿನ ಲೆಕ್ಕಪರಿಶೋಧಕರ ತಂಡ ದಾಖಲಾತಿಗಳನ್ನು ಪರಿಶೀಲನೆ ನಡೆಸಿ ವರದಿ ಕೊಡುತ್ತದೆ. ವಂಚನೆ ಮಾಡಿರುವುದು ದೃಢಪಟ್ಟರೆ ಸಂಬಂಧಪಟ್ಟ ಆಸ್ಪತ್ರೆ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ.
12 ಕೋಟಿ ಕುಟುಂಬಕ್ಕೆ ಅನುಕೂಲ:ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯನ್ನು 2018ರ ಸೆ.23ರಂದು ಆರಂಭಿಸಲಾಯಿತು. ತಲಾ ಕುಟುಂಬಕ್ಕೆ 5 ಲಕ್ಷ ರೂ.ವರೆಗೆ ಉಚಿತವಾಗಿ ಚಿಕಿತ್ಸೆ ಸೌಲಭ್ಯ ಒದಗಿಸಲಿದೆ. 12 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಸೌಲಭ್ಯವಿದ್ದು, ಅಂದಾಜು 55 ಕೋಟಿ ಮಂದಿ ಫಲಾನುಭವಿಗಳಿದ್ದಾರೆ.
ಹುಲಿ ಉಗುರು: ಏನಿದರ ಧರಿಸುವಿಕೆ ಹಿಂದಿನ ಅಸಲಿಯತ್ತು? ನಕಲಿ ಶೋಕಿಯೋ, ಬಚಾವಾಗೋ ಕರಾಮತ್ತೋ?

ಭಾರತದ ವರ್ಕ್​ ಕಲ್ಚರ್ ಬದಲಾಗಬೇಕು ಎಂದ ಇನ್​ಫೊಸಿಸ್​ ನಾರಾಯಣಮೂರ್ತಿ ಹೇಳಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
