ಬೆಂಗಳೂರು:ರಾಜ್ಯ ಭೋವಿ ಅಭಿವೃದ್ಧಿ ನಿಗಮದ ನಿರ್ದೇಶಕರ ಕೋಟಾದಡಿಯಲ್ಲಿ ಅನುದಾನ ಕೊಡಿಸುವ ನೆಪದಲ್ಲಿ ಹಣ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು, ನಿಗಮಕ್ಕೆ ದೊಡ್ಡ ತಲೆನೋವಾಗಿದೆ.
ನಿಗಮದ ನಿರ್ದೇಶಕರ ಕೋಟಾದಡಿ ಯಾವುದೇ ಮಂಜೂರಾತಿ ನೀಡುವ ಅವಕಾಶ ಕಾನೂನಿನಲ್ಲಿ ಇರುವುದಿಲ್ಲ. ನಿರ್ದೇಶಕರ ಹೆಸರು ಹೇಳಿಕೊಂಡು ಮಂಜೂರಾತಿ ಮಾಡಿ ಕೊಡುವ ಭರವಸೆ ಕೊಟ್ಟು ಹಣ ವಸೂಲಿ ಮಾಡುತ್ತಿರುವ ಬಗ್ಗೆ ಭೋವಿ ಜನಾಂಗದ ಜನರಿಂದ ಸಾಕಷ್ಟು ದೂರುಗಳು ನಿಗಮಕ್ಕೆ ಬರುತ್ತಿವೆ. ಅನುದಾನ ಕೊಡಿಸುವ ನೆಪದಲ್ಲಿ ಹಣ ಕೇಳಿದರೆ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡುವಂತೆ ಭೋವಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಲೀಲಾವತಿ ತಿಳಿಸಿದ್ದಾರೆ.
ನಿಗಮದಲ್ಲಿ ನಾಮನಿರ್ದೇಶಿತ ಸದಸ್ಯರಾದ ರವಿಕುಮಾರ್, ವ್ಯವಸ್ಥಾಪಕ ನಿರ್ದೇಶಕರ ಸಹಿಯನ್ನು ಪೋರ್ಜರಿ ಮಾಡಿ ನಕಲಿ ಮಂಜೂರಾತಿಯನ್ನು ಸೃಷ್ಟಿಸಿ ಚೆಕ್ಕುಗಳನ್ನು ಕಳವು ಮಾಡಿದ್ದರು. ಈ ದಾಖಲೆ ಮತ್ತು ಚೆಕ್ ದುರುಪಯೋಗ ಪಡಿಸಿಕೊಂಡು ತಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡಿರುವ ಬಗ್ಗೆ ಈಗಾಗಲೇ ಮಹಾಲಕ್ಷ್ಮೀಪುರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಲಾಗಿದೆ.
ಉಳಿದ ನಿರ್ದೇಶಕರುಗಳು ಸಹ ಇದೇ ರಿತಿ ಸೃಷ್ಟಿಸಿದ ಪ್ರಕರಣಗಳು ಕಂಡು ಬಂದಿದೆ. ಭೋವಿ ಜನಾಂಗದವರು ನಿರ್ದೇಶಕರುಗಳಿಗೆ ಹಣ ನೀಡಿರುವ ಬಗ್ಗೆ ಪ್ರತಿ ದಿನ ದೂರುಗಳು ನಿಗಮಕ್ಕೆ ಬರುತ್ತಿವೆ. ಆದರಿಂದ ಜನರು ಮೋಸ ಹೋಗದಂತೆ ಎಚ್ಚರಿಕೆ ವಹಿಸಿ. ನೇರ ನಿಗಮದ ಕಚೇರಿ ಸಂಪರ್ಕ ಮಾಡುವಂತೆ ವ್ಯವಸ್ಥಾಪಕ ನಿರ್ದೇಶಕಿ ಮನವಿ ಮಾಡಿದ್ದಾರೆ.
ಮಂಡ್ಯ ಹುಡುಗ್ರ ಅಭಿಮಾನ ನೋಡಿ ‘ಓ ಮೈ ಗಾಡ್’ ಎಂದ ಸನ್ನಿ ಲಿಯೋನ್​!; ನಿಮಗಾಗಿ ರಕ್ತದಾನ ಮಾಡುವೆ ಅಂದ್ರು ನಟಿ!
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:6 + nineteen =
Remember me
