|ಗೋವಿಂದರಾಜು ಚಿನ್ನಕುರ್ಚಿಬೆಂಗಳೂರು
ಮಹಾಮಾರಿ ಕರೊನಾ ಸೋಂಕುನಿಮೂಲನೆಗೆಕೇಂದ್ರ ಸರ್ಕಾರ ಲಸಿಕೆ ಉತ್ಸವ ಘೋಷಣೆ ಮಾಡಿದ ಬೆನ್ನಲ್ಲಿಯೇ ಸೈಬರ್ ಕಳ್ಳರು, ಕೋವಿಡ್ ಲಸಿಕೆ ನೋಂದಣಿ ಸೋಗಲ್ಲಿ ವಂಚನೆಗೆ ಬಲೆಬೀಸಿದ್ದಾರೆ. ಮೊಬೈಲ್​ಗೆ ಲಿಂಕ್ ಮತ್ತು ಆಪ್ ಕಳುಹಿಸುತ್ತಿದ್ದು, ಸ್ವಲ್ಪ ಯಾಮಾರಿದರೂ ಬ್ಯಾಂಕ್ ಖಾತೆಗೆ ಕನ್ನ ಬೀಳಲಿದೆ ಎಂದು ಕೇಂದ್ರ ಸೈಬರ್ ಭದ್ರತಾ ಸಚಿವಾಲಯ ಎಚ್ಚರಿಸಿದೆ.
ಕೋವಿಡ್-19 ಎರಡನೇ ಎಲ್ಲೆಡೆ ವ್ಯಾಪಿಸಿರುವುದಕ್ಕೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಹಲವು ಯೋಜನೆ ಕೈಗೊಂಡಿದೆ. 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವುದು ಅದರಲ್ಲಿ ಪ್ರಮುಖವಾಗಿದೆ. ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.80 ಮಂದಿ ಇದರಡಿ ಬರುತ್ತಾರೆ. ಅದಕ್ಕಾಗಿ ಲಸಿಕೆ ಪಡೆಯಲು ನೋಂದಣಿಗೆ ಆನ್​ಲೈನ್ ಸೇವೆ ಒದಗಿಸಿದೆ. ನೋಂದಣಿ ಮಾಡಿಕೊಂಡ ವ್ಯಕ್ತಿಗೆ ದಿನಾಂಕ, ಸಮಯ ಮತ್ತು ಲಸಿಕಾ ಕೇಂದ್ರದ ವಿಳಾಸ ಸಹ ಲಭ್ಯವಾಗಲಿದೆ. ಆ ಸಮಯಕ್ಕೆ ತೆರಳಿ ಲಸಿಕೆ ಪಡೆದು ಸುರಕ್ಷಿತವಾಗಿ ಮನೆಗೆ ಬರುವಂತಹಯೋಜನೆಇದಾಗಿದೆ. ಲಸಿಕಾ ಕೇಂದ್ರದ ಬಳಿಕೆಗೆ ಹೋಗಿ ಗೊಂದಲಕ್ಕೆ ಒಳಗಾಗುವುದು ಬೇಡ ಎಂಬುದು ಇದರ ಉದ್ದೇಶವಾಗಿದೆ.
ಅದಕ್ಕಾಗಿ ಅಧಿಕೃತ ವೆಬ್​ಸೈಟ್, ಪೋರ್ಟಲ್​ಗಳನ್ನು ಪರಿಚಯಿಸಲಾಗಿದೆ. ಆದರೆ ಸೈಬರ್ ಖದೀಮರು, ಮೊಬೈಲ್ ಮತ್ತು ಕಂಪ್ಯೂಟರ್ ಡೇಟಾ ಕಳವು ಮಾಡುವ ಹಾಗೂ ಬ್ಯಾಂಕ್ ಖಾತೆಗೆ ಕನ್ನ ಹಾಕುವ ನೂರಾರು ಲಿಂಕ್ ಮತ್ತು ಆಪ್​ಗಳನ್ನು ಗೂಗಲ್​ನಲ್ಲಿ ಅಪ್​ಲೋಡ್ ಮಾಡಿದ್ದಾರೆ. ಮೊಬೈಲ್ ನಂಬರ್​ಗೆ ಸಂದೇಶ ಅಥವಾ ವಾಟ್ಸ್​ಆಪ್ ಎಸ್​ಎಂಎಸ್ ಬರಲಿವೆ. ಅದರಲ್ಲಿಯೂ ಈ ಎಲ್ಲ ಆಪ್ ಮತ್ತು ಲಿಂಕ್​ಗಳು ಕೋವಿಡ್-19 ಲಸಿಕೆ ನೋಂದಣಿಗೆ ಕೇಂದ್ರ ಸರ್ಕಾರ ಪರಿಚಯಿಸಿರುವ ಮಾದರಿಯಲ್ಲಿ ಇರಲಿವೆ. ಸ್ವಲ್ಪ ವ್ಯತ್ಯಾಸ ಇರಲಿದ್ದು, ಸಾಮಾನ್ಯರಿಗೆ ಬಹುಬೇಗ ಗೊತ್ತಾಗುವುದಿಲ್ಲ.
ಯಾವ ರೀತಿ ಖಾತೆಗೆ ಕನ್ನ?:ಮೊಬೈಲ್​ಗೆ ಸಂದೇಶದ ಜತೆಗೆ ಲಿಂಕ್ ಬರಲಿದೆ. ಅದರ ಮೇಲೆ ಕ್ಲಿಕ್ ಮಾಡಿದಾಗ ಅಪ್ಲಿಕೇಷನ್ ಡೌನ್​ಲೋಡ್ ಆಗಲಿದೆ. ಆನಂತರ ಹೆಸರು, ವಿಳಾಸ, ಆಧಾರ್ ನಂಬರ್, ಬ್ಯಾಂಕ್ ಖಾತೆ ವಿವರ, ಕ್ರೆಡಿಟ್, ಡೆಬಿಟ್ ಕಾರ್ಡ್ ನಂಬರ್ ಕೇಳಲಿದೆ. ಇಷ್ಟು ಭರ್ತಿ ಮಾಡಿದ ಮೇಲೆ ಒಟಿಪಿ ಬರಲಿದ್ದು, ಅದನ್ನು ಲಿಂಕ್​ನಲ್ಲಿ ನೋಂದಣಿ ಮಾಡಿದಾಗ ಬ್ಯಾಂಕ್ ಖಾತೆಗೆ ಕನ್ನ ಬೀಳಲಿದೆ. ಇನ್ನೂ ಕೆಲವರ ಮೊಬೈಲ್, ಕಂಪ್ಯೂಟರ್​ನಲ್ಲಿನ ಡೇಟಾ, ಫೋಟೋ, ಮೊಬೈಲ್ ನಂಬರ್​ಗೂ ಕನ್ನ ಬೀಳಲಿದೆ.
ಇಂಜಕ್ಷನ್, ಆಕ್ಸಿಜನ್ ಸೋಗಲ್ಲೂ ವಂಚನೆ:ಆಮ್ಲಜನಕ, ರೆಮ್ೆಸಿವಿರ್, ಐಸಿಯು ಬೆಡ್ ಕೊಡಿಸುವ ನೂರಾರು ಅನಾಮಧೇಯ ಹೆಲ್ಪ್ ಲೈನ್ ನಂಬರ್ ವಾಟ್ಸ್ ಆಪ್ ಮತ್ತು ಸಂದೇಶಗಳು ವೈರಲ್ ಆಗುತ್ತಿವೆ. ಇದರಲ್ಲಿ ಯಾವುದೇ ಅಸಲಿ, ಯಾವುದು ನಕಲಿ ಎಂಬುದು ಗೊತ್ತಾಗುತ್ತಿಲ್ಲ. ಮಹಿಳಾ ಪೊಲೀಸ್​ಗೆ ಆಮ್ಲಜನಕ ಸಿಲಿಂಡರ್ ಕೊಡಿಸುವ ನೆಪದಲ್ಲಿ 9 ಸಾವಿರ ರೂ. ಪಡೆದು ವಂಚನೆ ಮಾಡಿದ್ದರು. ಐಸಿಯು ಬೆಡ್ ಕೊಡಿಸುವ ಸೋಗಲ್ಲಿ ಹಲವರಿಗೆ ಸೈಬರ್ ಕಳ್ಳರು ವೋಸ ಮಾಡುತ್ತಿದ್ದಾರೆ.
ಆನ್​ಲೈನ್, ಕಾಳಸಂತೆಯಲ್ಲಿ ರೆಮ್​ಸಿವಿರ್, ಬೆಡ್, ಅಮ್ಲಜನಕ, ಲಸಿಕೆ ಹೆಸರಿನಲ್ಲಿ ವಂಚನೆ ಮಾಡುವರ ಬಗ್ಗೆ ಎಚ್ಚರಿಕೆ ಇರಲಿ. ಇವರ ಬಗ್ಗೆ ಸ್ಥಳೀಯ ಪೊಲೀಸರಿಗೆ ಅಥವಾ ಸಿಸಿಬಿಗೆ ಮಾಹಿತಿ ನೀಡಿ ಸಹಕರಿಸಿ.
| ಸಂದೀಪ್ ಪಾಟೀಲ್ ಜಂಟಿ ಪೊಲೀಸ್ ಆಯುಕ್ತ (ಅಪರಾಧ)
ಮಗ ಮಾಡಿದ ಆ ಒಂದು ಕೆಲಸ ಅಮ್ಮನನ್ನೂ ಬಲಿ ಪಡೆಯಿತಾ?; ಪತಿ ಸತ್ತ ಕೆಲವೇ ಕ್ಷಣಗಳಲ್ಲಿ ಪತ್ನಿಗೂ ಸಾವು!

ಸೋಂಕಿತ ತಾಯಿ ತೀರಿಹೋದ ಮೂರೇ ದಿನಕ್ಕೆ ಅಣ್ಣ-ತಮ್ಮನೂ ಕರೊನಾಗೆ ಬಲಿ; ಅಮ್ಮಂದಿರ ದಿನವೇ ಇಬ್ಬರೂ ಏಕಕಾಲಕ್ಕೇ ನಿಧನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − one =
Remember me
