|ಅವಿನಾಶ ಮೂಡಂಬಿಕಾನಬೆಂಗಳೂರು
ಸಾಮಾಜಿಕ ಜಾಲತಾಣಗಳ ಮೂಲಕ ಅಮಾಯಕರಿಗೆ ಗಾಳ ಹಾಕುತ್ತಿದ್ದ ಸೈಬರ್ ಕಳ್ಳರೀಗ ಕೈಚಳಕದ ಕಾರ್ಯ ವೈಖರಿ ಬದಲಿಸಿದ್ದಾರೆ. ಫೇಸ್​ಬುಕ್, ವಾಟ್ಸ್​ಆಪ್, ಟೆಲಿಗ್ರಾಂಗಳ ಮೂಲಕ ಶ್ರೀಮಂತರಿಗೆ, ಅದರಲ್ಲೂ ಮಹಿಳೆಯರನ್ನು ಟಾರ್ಗೆಟ್ ಮಾಡುವ ವಂಚಕರು ವಿದೇಶಿ ಉಡುಗೊರೆ ಕಳುಹಿಸುವ ಹೆಸರಲ್ಲಿ ಲೂಟಿ ಹೊಡೆಯುತ್ತಿದ್ದಾರೆ. ಎರಡು ವರ್ಷದಲ್ಲಿ 3,380 ಮಂದಿ ವಿದೇಶಿ ಉಡುಗೊರೆ ಮೋಹಕ್ಕೆ ಬಿದ್ದು 60 ಕೋಟಿ ರೂ.ಗೂ ಅಧಿಕ ಹಣ ಕಳೆದುಕೊಂಡಿದ್ದಾರೆ. ರಾಜ್ಯದ ನೂರಾರು ಶ್ರೀಮಂತ ಮಹಿಳೆಯರು ಲಕ್ಷಾಂತರ ರೂ. ಕಳೆದುಕೊಂಡಿದ್ದಾರೆ. 2020ರಲ್ಲಿ ಬೆಂಗಳೂರೊಂದರಲ್ಲೇ 2,113 ವಂಚನೆ ಕೇಸ್ ದಾಖಲಾಗಿವೆ. 2021ರಲ್ಲಿ 1,103, 2022ರ ಜನವರಿವರೆಗೆ ಉಡುಗೊರೆ ಹೆಸರಿನಲ್ಲೇ 141 ವಂಚನೆ ಕೇಸ್ ಸೈಬರ್ ಕ್ರೖೆಂ ಠಾಣೆ ಮೆಟ್ಟಿಲೇರಿವೆ. ಶೇ.85 ಕೇಸ್​ಗಳಲ್ಲಿ ಸೈಬರ್ ವಂಚಕರ ಸಣ್ಣ ಸುಳಿವೂ ಸಿಕ್ಕಿಲ್ಲ.
ಹೇಗೆ ವಂಚನೆ?:ವಂಚಕರು ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಾರೆ. ಇದನ್ನು ಸ್ವೀಕರಿಸಿದರೆ, ವಿದೇಶದಲ್ಲಿ ಉನ್ನತ ಹುದ್ದೆಯಲ್ಲಿರುವುದಾಗಿ ಹೇಳಿಕೊಂಡು ಆಕರ್ಷಣೆ ಆಗುವಂತೆ ಮಾತನಾಡುತ್ತಾರೆ. ಮೊಬೈಲ್ ನಂಬರ್ ಪಡೆದು ತಿಂಗಳುಗಟ್ಟಲೇ ನಿರಂತರವಾಗಿ ವಾಟ್ಸ್​ಆಪ್​ನಲ್ಲಿ ಚಾಟ್ ಮಾಡುತ್ತಾ, ವಿದೇಶದ ಕೆಲ ಪ್ರಸಿದ್ಧ ಸ್ಥಳಗಳನ್ನು ತಮಗೆ ಬೇಕಾದಂತೆ ಎಡಿಟ್ ಮಾಡಿ ಮಹಿಳೆಯರಿಗೆ ಕಳುಹಿಸಿ ನಂಬಿಕೆ ಗಿಟ್ಟಿಸಿಕೊಳ್ಳುತ್ತಾರೆ. ಸೈಬರ್ ಕಳ್ಳರ ಮಾತಿಗೆ ಮರುಳಾಗಿ ಸಲುಗೆಯಿಂದ ಮಾತನಾಡಿದರೆ, ಬೆಲೆಬಾಳುವ ವಿದೇಶಿ ಉಡುಗೊರೆಗಳನ್ನು ಕೊರಿಯರ್ ಮೂಲಕ ಮನೆಗೆ ಕಳುಹಿಸುವುದಾಗಿ ವಿಳಾಸ ಪಡೆಯುತ್ತಾರೆ. ಇದಾದ ಎರಡೇ ದಿನಕ್ಕೆ ಏರ್​ಪೋರ್ಟ್ ಸಿಬ್ಬಂದಿ ಸೋಗಿನಲ್ಲಿ ಕರೆ ಬರುತ್ತದೆ. ನಿಮ್ಮ ಹೆಸರಿನಲ್ಲಿ ಲಕ್ಷಾಂತರ ರೂ. ಬೆಲೆಬಾಳುವ ಉಡುಗೊರೆ ವಿದೇಶದಿಂದ ಬಂದಿದೆ. ತೆರಿಗೆ ಶುಲ್ಕ ಪಾವತಿಸಿದರೆ ಮನೆ ವಿಳಾಸಕ್ಕೆ ಸುರಕ್ಷಿತವಾಗಿ ತಲುಪಿಸುತ್ತೇವೆ ಎಂದು ಬ್ಯಾಂಕ್ ಖಾತೆ ನಂಬರ್ ಕೊಡುತ್ತಾರೆ. ಅವರ ಬ್ಯಾಂಕ್ ಖಾತೆಗೆ ಹಣ ಹಾಕಿದರೆ, ಮತ್ತೆ ಸಬೂಬು ಹೇಳಿ ಇನ್ನಷ್ಟು ಹಣಕ್ಕೆ ಬೇಡಿಕೆಯಿಡುತ್ತಾರೆ. ಅವರು ಹೇಳಿದಂತೆ ಹಣ ಹಾಕಿದಲ್ಲಿ ವಂಚನೆಗೊಳಗಾಗುವುದು ಪಕ್ಕಾ.
ಆರೋಪ ಸಾಬೀತಾದರೆ…:ಮಾಹಿತಿ ತಂತ್ರಜ್ಞಾನ ಕಾಯ್ದೆ (ಐಟಿ ಆಆಕ್ಟ್) 67 ಬಿ ಪ್ರಕಾರ-3 ವರ್ಷ ಜೈಲು ಶಿಕ್ಷೆ, 67-ಎ ಪ್ರಕಾರ 5 ವರ್ಷ ಶಿಕ್ಷೆ, 66-ಇ ಪ್ರಕಾರ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಮಾಹಿತಿ ತಂತ್ರಜ್ಞಾನ ಕಾಯ್ದೆ 2000- 66 (ಸಿ), 66 (ಡಿ) ಪ್ರಕಾರ 3 ವರ್ಷ ಜೈಲು, ಗರಿಷ್ಠ 1 ಲಕ್ಷ ರೂ. ದಂಡ ವಿಧಿಸಲು ಅವಕಾಶಗಳಿವೆ.
ಬೆಂಗಳೂರಿನಲ್ಲಿ ಸೈಬರ್ ಕ್ರೖೆಂ ನಿಯಂತ್ರಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಸಾರ್ವಜನಿಕರು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು.
|ಕಮಲ್ ಪಂತ್ನಗರ ಪೊಲೀಸ್ ಆಯುಕ್ತ
ಲಂಡನ್ ನಿವಾಸಿ ಎಂದು ಹೇಳಿಕೊಂಡು ಫೇಸ್​ಬುಕ್​ನಲ್ಲಿ ಬನಶಂಕರಿಯ 30 ವರ್ಷದ ಮಹಿಳೆಯನ್ನು ವಂಚಕ ಪರಿಚಯಿಸಿಕೊಂಡಿದ್ದ. ಫೋನ್ ನಂಬರ್ ವಿನಿಮಯ ಮಾಡಿಕೊಂಡ ಬಳಿಕ ನಿರಂತರವಾಗಿ ಚಾಟಿಂಗ್ ಮಾಡುತ್ತಿದ್ದ. ಸ್ನೇಹದ ಪ್ರತೀಕವಾಗಿ ಲಂಡನ್​ನಿಂದ ದುಬಾರಿ ಗಿಫ್ಟ್ ಮತ್ತು 27 ಲಕ್ಷ ರೂ. ಮೌಲ್ಯದ ಡಾಲರ್ ಅನ್ನು ಕೊರಿಯರ್ ಮೂಲಕ ಕಳುಹಿಸುತ್ತಿರುವುದಾಗಿ ಹೇಳಿದ್ದ. ಕೊರಿಯರ್ ಶುಲ್ಕವೆಂದು ಆನ್​ಲೈನ್ ಮೂಲಕ ಮಹಿಳೆಯಿಂದ 1 ಲಕ್ಷ ರೂ. ಪಡೆದಿದ್ದ. 2 ದಿನಗಳ ಬಳಿಕ, ಮುಂಬೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್್ಸ ಅಧಿಕಾರಿಗಳು ಕೊರಿಯರ್ ಅನ್ನು ಜಪ್ತಿ ಮಾಡಿದ್ದು, ತೆರಿಗೆ ಕಟ್ಟಬೇಕಾಗಿದೆ ಎಂದು ಮತ್ತೆ 1.50 ಲಕ್ಷ ರೂ. ಪೀಕಿಸಿದ್ದ. ಮತ್ತೆ ಹಣಕ್ಕೆ ಬೇಡಿಕೆಯಿಟ್ಟಾಗ ವಂಚನೆಯ ಆಟ ಮಹಿಳೆಗೆ ಗೊತ್ತಾಗಿ ಠಾಣೆ ಮೆಟ್ಟಿಲೇರಿದ್ದಾಳೆ.
ಫ್ರೆಜರ್​ಟೌನ್ ನಿವಾಸಿ ರಾಬರ್ಟ್ ಡೊನ್ಲಾಡ್​ಗೆ (72) ಮಾ.1ರಂದು ಲಿಲಿನ್ ಮೋರ್ಗೆನ್ ಎಂಬಾತ ಫೇಸ್​ಬುಕ್​ನಲ್ಲಿ ಪರಿಚಯವಾಗಿದ್ದು, ಆರ್ವಿು ಅಧಿಕಾರಿ ಎಂದು ಪರಿಚಯಿಸಿಕೊಂಡು ನಿರಂತರವಾಗಿ ವಾಟ್ಸ್​ಆಪ್​ನಲ್ಲಿ ಚಾಟ್ ಮಾಡಿಕೊಂಡು ನಂಬಿಕೆ ಗಿಟ್ಟಿಸಿಕೊಂಡಿದ್ದ. ಮಾ.7ಕ್ಕೆ ರಾಬರ್ಟ್​ಗೆ ಕರೆ ಮಾಡಿದ ಮೊರ್ಗೆನ್, 200 ಯುಎಸ್ ಡಾಲರ್​ನ್ನು ನಿಮಗೆ ಉಡುಗೊರೆ ನೀಡಲೆಂದು ತರುತ್ತಿದ್ದಾಗ ದೆಹಲಿ ಏರ್​ಪೋರ್ಟ್ ಸಿಬ್ಬಂದಿ ನನ್ನನ್ನು ಹಿಡಿದಿದ್ದಾರೆ. ಬಿಡಿಸಿಕೊಳ್ಳಲು ಸಹಾಯಮಾಡುವಂತೆ ಕೋರಿ 2.29 ಲಕ್ಷ ರೂ.ನ್ನು ತನ್ನ ಖಾತೆಗೆ ಹಾಕಿಸಿಕೊಂಡು ಸಂಪರ್ಕಕ್ಕೆ ಸಿಗದೇ ವಂಚಿಸಿದ್ದಾನೆ.
ಅಮೆರಿಕ ಪ್ರಜೆಯ ಸೋಗಿನಲ್ಲಿ ಇತ್ತೀಚೆಗೆ ಬೆಂಗಳೂರಿನ ಮಹಿಳಾ ಟೆಕ್ಕಿಯ ಫೇಸ್​ಬುಕ್​ಗೆ ವ್ಯಕ್ತಿಯೊಬ್ಬ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದ. ಆತನ ರಿಕ್ವೆಸ್ಟ್​ನ್ನು ಮಹಿಳೆ ಸ್ವೀಕರಿಸುತ್ತಿದ್ದಂತೆ ಮೊಬೈಲ್ ನಂಬರ್ ಪಡೆದು ಚಾಟ್ ಮಾಡಲು ಆರಂಭಿಸಿದ್ದ. 50 ಲಕ್ಷ ರೂ. ಮೌಲ್ಯದ ವಿದೇಶಿ ಡಾಲರ್ ಹಾಗೂ ಬೆಲೆ ಬಾಳುವ ಉಡುಗೊರೆ ಕಳಿಸಿರುವುದಾಗಿ ಹೇಳಿದ್ದ. ಇದಾದ ನಂತರ ಏರ್​ಪೋರ್ಟ್ ಸಿಬ್ಬಂದಿ ಸೋಗಲ್ಲಿ ಮಹಿಳೆಗೆ ಕರೆ ಮಾಡಿ 2.94 ಲಕ್ಷ ರೂ. ಲಪಟಾಯಿಸಿದ್ದಾನೆ.
ಮಹಿಳೆಯರೇ ಏಕೆ?:ಶ್ರೀಮಂತ ಮಹಿಳೆಯರು ವಿದೇಶಿ ಐಷಾರಾಮಿ ಉತ್ಪನ್ನಗಳಿಗೆ ಬೇಗ ಮರುಳಾಗುತ್ತಾರೆ. ಇಂಥವರನ್ನು ಮಾತಿನಲ್ಲಿ ಮೋಡಿ ಮಾಡಿ ಸೆಳೆಯುವುದು ಸುಲಭ ಎಂಬ ಕಾರಣಕ್ಕೆ ಸೈಬರ್ ಕಳ್ಳರ ಟಾರ್ಗೆಟ್ ಆಗಿದ್ದಾರೆ ಎಂದು ಸೈಬರ್ ಕ್ರೖೆಂ ವಿಶ್ಲೇಷಕರು ಹೇಳುತ್ತಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 11 =
Remember me
