ಬೆಂಗಳೂರು:“ನಾನು ಮಾಜಿ ಉಪಮುಖ್ಯಮಮಂತ್ರಿ ಡಾ. ಜಿ.ಪರಮೇಶ್ವರ ಅವರ ಅಣ್ಣನ ಮಗಳು. ಸಮಾಜ ಸೇವಕಿಯಾಗಿ ಕೆಲಸ ಮಾಡುತ್ತಿರುವೆ. ನಿರುದ್ಯೋಗಿಗಳು ಸ್ವಂತ ಉದ್ಯೋಗ ಹಾಗೂ ವ್ಯವಹಾರ ಮಾಡಿಕೊಳ್ಳಲು ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಬ್ಯಾಂಕಿನಿಂದ 10 ಲಕ್ಷ ರೂ. ಸಾಲ ಕೊಡಿಸುತ್ತೇನೆ…” ಎಂದವಳ ಹಿಸ್ಟರಿ ಕೇಳಿದ್ರೆ ಬೆಚ್ಚಿಬೀಳ್ತೀರಿ.
ಪ್ರೀತಿಯ ಬಲೆ ಬೀಸಿದ್ದಲ್ಲದೆ, ಮದುವೆ ಆಗದಿದ್ದರೆ ರೇಪ್​ ಕೇಸ್​ ಹಾಕೋದಾಕಿ ಬೆದರಿಕೆಯನ್ನೂ ಒಡ್ಡಿದ್ದಾಳೆ. ಅಷ್ಟೇ ಅಲ್ಲ, ಸಾಲ ಕೊಡಿಸುವುದಾಗಿ 10ಕ್ಕೂ ಹೆಚ್ಚು ಮಂದಿಗೆ ವಂಚಿಸಿದ್ದಾಳೆ. ಯುವಕನೊಬ್ಬ ಆಕೆಯನ್ನು ತುಮಕೂರಿಗೆ ಕರೆದೊಯ್ದು ಡಾ.ಜಿ. ಪರಮೇಶ್ವರ್​ರ ಮುಂದೆ ಮುಖತಃ ಭೇಟಿ ಮಾಡಿಸಿದಾಗ ಬಯಲಾಯ್ತು ವಂಚಕಿಯ ಅಸಲಿ ಮುಖ!
ಡಾ. ಜಿ.ಪರಮೇಶ್ವರ್​ರ ಅಣ್ಣನ ಮಗಳ ಸೋಗಿನಲ್ಲಿ ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಬ್ಯಾಂಕಿನಿಂದ ಸಾಲ ಕೊಡಿಸುವುದಾಗಿ ಜನರಿಂದ ಹಣ ಪಡೆದು ವಂಚಿಸುತ್ತಿದ್ದ ಜ್ಞಾನಗಂಗಾ ಲೇಔಟ್​ ನಿವಾಸಿ ಪಲ್ಲವಿ (32) ಪೊಲೀಸರ ಅಥಿತಿಯಾಗಿದ್ದಾಳೆ. ಆರೋಪಿತೆ 10ಕ್ಕೂ ಹೆಚ್ಚು ಮಂದಿಗೆ ವಂಚಿಸಿರುವುದು ವಿಚಾರಣೆಯಿಂದ ಗೊತ್ತಾಗಿದೆ. ಆಕೆಯಿಂದ ವಂಚನೆಗೊಳಗಾದವರು ದೂರು ನೀಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಜ್ಞಾನಭಾರತಿ ಠಾಣೆ ಪೊಲೀಸರು ತಿಳಿಸಿದ್ದಾರೆ.
ಜನಾರ್ದನ್​ ಎಂಬುವವರ ಬಳಿ ನಾಗದೇವನಹಳ್ಳಿ ನಿವಾಸಿ ಯೋಗೇಶ್​ ಕ್ಯಾಬ್​ ಚಾಲಕರಾಗಿದ್ದಾರೆ. ಲಾಕ್​ಡೌನ್​ಗೂ ಮುಂಚೆ ಯೋಗೇಶ್​ನ ಮಾವ ಆಟೋ ಚಾಲಕ ರಾಜಶೇಖರ್​ಗೆ ಪಲ್ಲವಿಯ ಪರಿಚಯವಾಗಿತ್ತು. ಮೇ ತಿಂಗಳಲ್ಲಿ ರಾಜಶೇಖರ್​ಗೆ ಕರೆ ಮಾಡಿದ್ದ ಪಲ್ಲವಿ, ಎರಡು ದಿನದ ಮಟ್ಟಿಗೆ ಕಾರು ಬಾಡಿಗೆಗೆ ಬೇಕು ಎಂದಿದ್ದಳು. ಆಗ ರಾಜಶೇಖರ್​, ಮೈಸೂರಿನ ವಿದ್ಯಾರಣ್ಯಪುರದ ಅಂದಾನಿ ಸರ್ಕಲ್​ನಲ್ಲಿರುವ ಪಲ್ಲವಿಗೆ ಕಾರು ಬಾಡಿಗೆಗೆ ಬೇಕಾಗಿದೆ. ಅವರನ್ನು ಭೇಟಿ ಮಾಡು. ಬಾಡಿಗೆ ಹಣ ಕೊಡುತ್ತಾಳೆ ಎಂದು ತನ್ನ ಅಳಿಯ ಯೋಗೇಶ್​ಗೆ ತಿಳಿಸಿದ್ದ. ಅದರಂತೆ ಪಲ್ಲವಿಯನ್ನು ಯೋಗೇಶ್​ ಸಂಪರ್ಕಿಸಿದ್ದ. ಆಕೆಯನ್ನು ಬೆಂಗಳೂರು, ತುಮಕೂರಿಗೆ ಕರೆದೊಯ್ದಿದ್ದ. ಎರಡು ದಿನದ ಬಾಡಿಗೆ ಹಣ ಕೊಟ್ಟು, ತಾನು ಕರೆದಾಗ ಬರುವಂತೆ ಯೋಗೇಶ್​ಗೆ ಸೂಚಿಸಿದ್ದಳು.
ಮೇ 30ರ ಬಳಿಕ ಆಗಾಗ್ಗೆ ಬಾಡಿಗೆಗೆ ಯೇಗೇಶ್​ ಕಾರನ್ನು ಪಲ್ಲವಿ ಕರೆಸಿಕೊಂಡಿದ್ದಳು. ನೆಲಮಂಗಲದಲ್ಲಿ ಆಸ್ತಿ ಇದೆ. ಮೈಸೂರು, ಬೆಂಗಳೂರಿನಲ್ಲಿ ಸ್ವಂತ ಮನೆ ಇದೆ ಎಂದು ಹೇಳಿಕೊಂಡು, ಅ.22ರವರೆಗೆ 40 ಸಾವಿರ ಕಿ.ಮೀ. ಸುತ್ತಾಡಿಸಿದ್ದಳು. 4.30 ಲಕ್ಷ ರೂ. ಬಾಡಿಗೆಯಾಗಿತ್ತು. ಕಾರು ಸರ್ವೀಸ್​ ಮಾಡಿಸಲು 21 ಸಾವಿರ ರೂ. ಕೊಟ್ಟಿದ್ದು, ಬಾಕಿ ಹಣ ಕೇಳಿದಾಗ ಸಬೂಬು ಹೇಳತೊಡಗಿದ್ದಳು. ಇದಾದ ಕೆಲ ದಿನಗಳ ಬಳಿಕ, ‘ನೀನಂದ್ರೆ ನನಗೆ ತುಂಬಾ ಇಷ್ಟ. ನಿನ್ನನ್ನು ಪ್ರೀತಿಸುತ್ತೇನೆ’ ಎಂದು ಯೋಗೇಶ್​ಗೆ ಸಂದೇಶ ಕಳುಹಿಸಿದ್ದಳು. ಇದಕ್ಕೆ ಯೋಗೇಶ್​ ನಿರಾಕರಿಸಿದಾಗ ಒಮ್ಮೆ ಯೋಚಿಸಿ ತಿಳಿಸುವಂತೆ ಹೇಳಿದ್ದಳು.
ಪರಮೇಶ್ವರ್​ ಮುಂದೆ ಭೇಟಿ:ಬಾಡಿಗೆ ಹಣ ಕೊಡುವಂತೆ ಯೋಗೇಶ್​ ಒತ್ತಾಯಿಸುತ್ತಿದ್ದ. ಈ ವೇಳೆ ಆಕೆ, ‘ಮದುವೆ ಮಾಡಿಕೋ. ಇಲ್ಲವಾದರೆ ಅತ್ಯಾಚಾರ ಎಸಗಿರುವುದಾಗಿ ಪೊಲೀಸರಿಗೆ ದೂರು ಕೊಟ್ಟು, ಜೈಲಿಗೆ ಕಳುಹಿಸುತ್ತೇನೆ’ ಎಂದು ಬ್ಲ್ಯಾಕ್​ಮೇಲ್​ ಮಾಡಿದ್ದಳು. ಯೋಗೇಶ್​ ಭಯಗೊಂಡು ಸುಮ್ಮನಾಗಿದ್ದ. ಕಾರು ಮಾಲೀಕ ಜನಾರ್ದನ್​ ಅವರು ಮನೆಯ ಕಾರ್ಯಕ್ರಮಕ್ಕೆ ಪಲ್ಲವಿಯನ್ನು ಆಹ್ವಾನಿಸಿದ್ದರು. ನಾಲ್ಕೈದು ದಿನವಿದ್ದ ಆಕೆ, ವಾಪಸ್​ ಹೋಗುವಾಗ ಮಾರ್ಗಮಧ್ಯೆ ತಾಳಿ ಕಟ್ಟುವಂತೆ ಯೋಗೇಶ್​ ಜೊತೆ ಗಲಾಟೆ ಮಾಡಿದ್ದಳು. ಆಕೆಯ ನಡತೆ ಬಗ್ಗೆ ಅನುಮಾನ ಬಂದಿತ್ತು. ಕೂಡಲೇ ಕಾರು ಮಾಲೀಕ ಜನಾರ್ದನ್​ ಮತ್ತು ಚಾಲಕ ಯೋಗೇಶ್​, ಪಲ್ಲವಿಯನ್ನು ಸದಾಶಿವನಗರದಲ್ಲಿರುವ ಡಾ. ಜಿ.ಪರಮೇಶ್ವರ್​ರ ಮನೆಗೆ ಕರೆತಂದು ಅವರ ಪತ್ನಿ ಮುಂದೆ ಹಾಜರು ಪಡಿಸಿದ್ದರು. ಆಗ ಅವರು, ‘ಪಲ್ಲವಿ ಯಾರೆಂಬುದೇ ಗೊತ್ತಿಲ್ಲ. ಡಾ. ಜಿ.ಪರಮೇಶ್ವರ್​ ಅವರನ್ನೇ ಕೇಳಬೇಕು’ ಎಂದಿದ್ದರು. ಹೀಗಾಗಿ, ಪಲ್ಲವಿಯನ್ನು ತುಮಕೂರಿಗೆ ಕರೆದೊಯ್ದು ಪರಮೇಶ್ವರ್​ರ ಮುಂದೆ ಮುಖತಃ ಭೇಟಿ ಮಾಡಿಸಿದಾಗ, ‘ಈಕೆ ನನ್ನ ಅಣ್ಣನ ಮಗಳಲ್ಲ. ಈಕೆಯನ್ನು ಕೂಡಲೇ ಪೊಲೀಸರಿಗೆ ಒಪ್ಪಿಸಿ, ದೂರು ದಾಖಲಿಸಿ’ ಎಂದು ಸೂಚಿಸಿದರು. ಆಗಲೇ ವಂಚಕಿಯ ಅಸಲಿ ಮುಖ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಂಟ್ರೋಲ್​ ರೂಂ​ಗೆ ಕಿಡ್ನ್ಯಾಪ್​ ದೂರು:ಪೊಲೀಸ್​ ಠಾಣೆಗೆ ಕರೆತರುತ್ತಿದ್ದಾಗ ಮಾರ್ಗಮಧ್ಯೆ ಕಾರಿನಿಂದ ಇಳಿದಿದ್ದ ಪಲ್ಲವಿ, ಯೋಗೇಶ್​ ಎಂಬಾತ ತನ್ನನ್ನು ಅಪಹರಿಸಿದ್ದಾನೆ ಎಂದು ನಿಯಂತ್ರಣ ಕೊಠಡಿಗೆ ದೂರು ಮುಟ್ಟಿಸಿದ್ದಳು. ನಿಯಂತ್ರಣ ಕೊಠಡಿಯಿಂದ ಬಂದ ಮಾಹಿತಿ ಆಧರಿಸಿ ಕೆಂಗೇರಿ ಪೊಲೀಸರು ಯೋಗೇಶ್​ಗೆ ಕರೆ ಮಾಡಿ, “ಪಲ್ಲವಿಯನ್ನು ಅಪಹರಿಸಿರುವ ಬಗ್ಗೆ ದೂರು ಬಂದಿದೆ. ಆಕೆಯನ್ನು ಕೂಡಲೇ ತಂದು ಬಿಡಿ’ ಎಂದು ಎಚ್ಚರಿಸಿದ್ದರು. ಆಗ ಯೋಗೇಶ್​ ನಡೆದ ವಿಚಾರವನ್ನು ವಿವರಿಸಿ ಪಲ್ಲವಿಯನ್ನು ಕೆಂಗೇರಿ ಪೊಲೀಸರಿಗೆ ಒಪ್ಪಿಸಿದ್ದರು. ಬಳಿಕ ಆಕೆಯನ್ನು ನಮ್ಮ ಠಾಣೆಗೆ ಹಸ್ತಾಂತರಿಸಿದ್ದಾರೆ. ಪಲ್ಲವಿಗೆ ಮದುವೆಯಾಗಿದ್ದು ಪತಿಯಿಂದ ದೂರ ಇದ್ದಾಳೆ. ಮತ್ತೋರ್ವನ ಜತೆ ಸಲುಗೆ ಬೆಳೆಸಿ, ಮದುವೆಯಾಗಿ 8 ಲಕ್ಷ ರೂ. ಸುಲಿಗೆ ಮಾಡಿದ್ದಾಳೆ. ಸರ್ಕಾರಿ ನೌಕರರಿಗೆ ವರ್ಗಾವಣೆ ಮಾಡಿಸುವುದಾಗಿ, ಸಬ್ಸಿಡಿ ಸಾಲ ಕೊಡಿಸುವುದಾಗಿ ಹಲವರಿಂದ ಲಕ್ಷಾಂತರ ರೂ. ಪಡೆದು ವಂಚಿಸಿರುವುದು ಈವರೆಗಿನ ವಿಚಾರಣೆಯಿಂದ ಗೊತ್ತಾಗಿದೆ ಎಂದು ಜ್ಞಾನಭಾರತಿ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಇಬ್ಬರು ಪತ್ನಿಯರೊಂದಿಗಿನ ಕಾಮದಾಟದ ಲೈವ್​ ದೃಶ್ಯವನ್ನೇ ಮಾರಾಟಕ್ಕಿಟ್ಟ 24ರ ಯುವಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − 4 =
Remember me
