ಬೆಂಗಳೂರು:ಪೊಲೀಸರ ಬಂಧಿಯಾಗಿರುವ ವಂಚಕರಲ್ಲೇ ಮಹಾ ವಂಚಕ ಯುವರಾಜ್ ಅಲಿಯಾಸ್​ ಸ್ವಾಮಿಯ ಮತ್ತೊಂದು ಮುಖವಾಡ​ ಬಯಲಾಗಿದ್ದು, 2003ರಲ್ಲೇ ಪೊಲೀಸ್​ ಪಟ್ಟಿಯಲ್ಲಿದ್ದ ಪ್ರಮುಖ ವಂಚಕ ಎಂಬುದು ತಿಳಿದುಬಂದಿದೆ.​ಸೆವಾಲಾಲ್ ಸಂಗಮಬಸವ ಸ್ವಾಮಿಯಾಗಿ ಎಸ್ಕೇಪ್ ಆದ ಬಳಿಕ ಯುವರಾಜ್ ಆಗಿ ಪ್ರತ್ಯಕ್ಷನಾದವನ ಕಥೆಯಿದು. ಆರಂಭದಲ್ಲಿ ಉಪ್ಪಾರಪೇಟೆ ಪೊಲೀಸರ ಕೈಯಿಂದ ಎಸ್ಕೇಪ್ ಆಗಿ ಇದೀಗ ಸಿಸಿಬಿ ಪೊಲೀಸರ ಕೈಯಲ್ಲಿ ಯುವರಾಜ್​ ಸಿಕ್ಕಿಬಿದ್ದಿದ್ದಾನೆ.
ಇದನ್ನೂ ಓದಿರಿ:ಪತ್ನಿಗೊಂದು, ಆಕೆಗೊಂದು ಮನೆ: ಹೆಂಡ್ತಿ ಕೈಲೇ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಕೊಪ್ಪಳದ ಇಂಜಿನಿಯರ್​!
2003ರಲ್ಲೇ ಯುವರಾಜ್ ಕೈಗೆ ಕೋಳ ಬಿದ್ದಿತ್ತು. ಮೆಡಿಕಲ್ ಸೀಟ್ ಕೊಡಿಸುವುದಾಗಿ ನಂಬಿಸಿ ಲಕ್ಷ ಲಕ್ಷ ರೂಪಾಯಿ ವಂಚನೆ ಮಾಡಿದ ಆರೋಪದಲ್ಲಿ ಬಂಧಿಯಾಗಿದ್ದ. ಉತ್ತರ ಪ್ರದೇಶ, ಆಂಧ್ರ ಪ್ರದೇಶ ಹಾಗೂ ರಾಜಸ್ಥಾನ ಮೂಲದ ವಿದ್ಯಾರ್ಥಿಗಳಿಗೆ ಡೆಂಟಲ್ ಸೀಟ್ ಕೊಡಿಸುವುದಾಗಿ ಮಕ್ಮಲ್ ಟೋಪಿ ಹಾಕಿದ್ದ.
ಈ ಕುರಿತು 2003ರಲ್ಲಿ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧ 6 ತಿಂಗಳು ಸೆರೆವಾಸ ಸಹ ಅನುಭವಿಸಿದ್ದ. ಆ ಬಳಿಕ ಜಾಮೀನಿನ ಮೇಲೆ ಆಚೆ ಬಂದಿದ್ದ. ನಾಲ್ಕೈದು ವರ್ಷ ಪೊಲೀಸರ ಕಣ್ಣಿಗೆ ಮಣ್ಣೆರೆಚಿ ಜೀವನ ನಡೆಸುತ್ತಿದ್ದ.
ಇದನ್ನೂ ಓದಿ:ಕಾಮುಕ ಸೋದರಸಂಬಂಧಿಯನ್ನು ಕೊಂದ ಯುವತಿಯನ್ನು ಬಂಧಿಸದೇ ಬಿಟ್ಟು ಕಳುಹಿಸಿದ ಪೊಲೀಸ್​ ಅಧಿಕಾರಿ!
ಇದರ ನಡುವೆ ಯುವರಾಜ್ ಹೆಸರಲ್ಲಿ ಪ್ರಭಾವಿಗಳಿಗೆ ವಂಚಿಸುವುದನ್ನೇ ವೃತ್ತಿಯಾಗಿಸಿಕೊಂಡಿದ್ದ. ಇದೀಗ ಸಿಸಿಬಿ ಕೈಗೆ ಸಿಕ್ಕಿಬಿದ್ದಿರುವ ಯುವರಾಜ್​ಗೆ ಮತ್ತೊಂದು ಕಂಟಕ ಶುರುವಾಗಿದೆ. ಸಿಸಿಬಿ ಪೊಲೀಸರ ಬಳಿಕ ಉಪ್ಪಾರಪೇಟೆ ಪೊಲೀಸರು ಯುವರಾಜ್​ನನ್ನು ವಶಕ್ಕೆ ಪಡೆಯಲು ಸಿದ್ದರಾಗಿದ್ದಾರೆ.(ದಿಗ್ವಿಜಯ ನ್ಯೂಸ್​)
17ರಂದು ಪಲ್ಸ್ ಪೋಲಿಯೋ ಕಾರ್ಯಕ್ರಮ

ನಿಮ್ಮನ್ನು ಭೇಟಿಯಾಗಬೇಕು ಎನ್ನುತ್ತಲೇ ಗೇಟ್​ ಹಾರಿ ನಟಿ ಮನೆಗೆ ನುಗ್ಗಿದ ಯುವಕ: ಮುಂದೇನಾಯ್ತು?!

ಲವ್​ ಮಾಡೋದು ತಪ್ಪಲ್ಲ, ಪ್ರೇಮಿಗಳನ್ನು ಶಿಕ್ಷಿಸುವುದು ಗಂಭೀರ ಅಪರಾಧ ಎಂದ ಸುಪ್ರೀಂ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
