|ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ಕಚೇರಿ ತೆರೆದು, ಪ್ರತಿನಿಧಿಗಳನ್ನು ನೇಮಿಸಿಕೊಂಡು ಅವರ ಮೂಲಕ ಗ್ರಾಹಕರಿಗೆ ಭಾರಿ ಬಡ್ಡಿ, ಲಾಭಾಂಶದ ಆಮಿಷವೊಡ್ಡಿ ನೂರಾರು ಕೋಟಿ ವಂಚಿಸಿದ ಹತ್ತಾರು ಪ್ರಕರಣಗಳು ಇನ್ನೂ ತನಿಖೆಯ ಹಂತದಲ್ಲಿದ್ದು, ಜನರ ಮನಸ್ಸಿನಿಂದ ಮಾಸಿಲ್ಲ. ಈಗ ವಂಚಕರು ಇಷ್ಟೆಲ್ಲ ಶ್ರಮಪಡುತ್ತಿಲ್ಲ…! ಹೂಡಿಕೆ ಹೆಸರಿನಲ್ಲಿ ಆಪ್ ಅಥವಾ ಟೆಲಿಗ್ರಾಮ್ ವಾಟ್ಸ್​ಆಪ್​ನಲ್ಲಿ ಗ್ರೂಪ್ ಕ್ರಿಯೇಟ್ ಮಾಡೋದೊಂದೇ ಅವರ ಬಂಡವಾಳ. ಮುಂದಿನದೆಲ್ಲ ಕೋಟ್ಯಂತರ ರೂ. ವಂಚನೆಗೆ ರಾಜಮಾರ್ಗ.
ಆನ್​ಲೈನ್​ನಲ್ಲಿ ಸೈಬರ್ ಕಳ್ಳರು ವಿದ್ಯಾವಂತ, ದೊಡ್ಡ ನೌಕರಿಯಲ್ಲಿ ಇರುವವರನ್ನೇ ಟಾರ್ಗೆಟ್ ಮಾಡಿ ಲಕ್ಷಾಂತರ ರೂಪಾಯಿ ಪಡೆದು ಮೋಸ ಮಾಡುತ್ತಿರುವ ಸಾಲು ಸಾಲು ಪ್ರಕರಣಗಳು ಸೈಬರ್ ಪೊಲೀಸ್ ಠಾಣೆಗಳಲ್ಲಿ ದಾಖಲಾಗುತ್ತಿವೆ.
ಸಾಮಾನ್ಯವಾಗಿ ಹೂಡಿಕೆ ಆಪ್ ಲಿಂಕ್ ಕಳುಹಿಸಿ, ಟೆಲಿಗ್ರಾಮ್ ಮತ್ತು ವಾಟ್ಸ್​ಆಪ್​ನಲ್ಲಿ ಗ್ರೂಪ್ ಸೃಷ್ಟಿಸಿ ಅಮಾಯಕರಿಗೆ ಗಾಳ ಬೀಸುತ್ತಿದ್ದಾರೆ.
ವಿವಿಧ ಬಗೆಯ ಹೂಡಿಕೆ ಆಪ್​ಗಳನ್ನು ಗೂಗಲ್ ಪ್ಲೇಸ್ಟೋರ್​ನಲ್ಲಿ ಸೈಬರ್ ಕಳ್ಳರು ಅಪ್​ಲೋಡ್ ಮಾಡಿದ್ದು, ಅದರ ಲಿಂಕ್​ಗಳನ್ನು ಹರಿಬಿಟ್ಟು ಜಾಹೀರಾತು ಕೊಡುತ್ತಾರೆ. ಅಲ್ಪ ಹಣ ಹೂಡಿಕೆ ಮಾಡಿ ಕಡಿಮೆ ಅವಧಿಯಲ್ಲಿ ಶೇ.30 ಕಮಿಷನ್ ಕೊಡುವುದಾಗಿ ಆಮಿಷವೊಡ್ಡುತ್ತಿದ್ದಾರೆ. ಆಪ್ ಡೌನ್​ಲೋಡ್ ಮಾಡಿ ಬ್ಯಾಂಕ್ ಖಾತೆ ವಿವರ ತುಂಬಿ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದಾರೆ.
ಅದೇ ರೀತಿ ಟೆಲಿಗ್ರಾಮ್ ಮತ್ತು ವಾಟ್ಸ್ ಆಪ್​ನಲ್ಲಿ ಲಿಂಕ್​ಗಳನ್ನು ಕಳುಹಿಸಿ ಗ್ರೂಪ್ ಜಾಯಿನ್ ಆಗುವಂತೆ ಜಾಹೀರಾತು ಕೊಡುತ್ತಾರೆ. ಸೇರ್ಪಡೆಯಾದವರಿಗೆ ಕರೆ ಮಾಡಿ ಚಿನ್ನ, ಪೆಟ್ರೋಲಿಯಂ ಸೇರಿದಂತೆ ವಿವಿಧ ಉತ್ಪನ್ನಗಳ ಟ್ರೇಡಿಂಗ್ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡುವಂತೆ ಸಲಹೆ ಕೊಡುತ್ತಾರೆ.
ಒಂದು ಗುಂಪಿನಲ್ಲಿ 100-300 ಜನರನ್ನು ಸೇರ್ಪಡೆ ಮಾಡುತ್ತಾರೆ. ಈ ಗುಂಪುಗಳಲ್ಲಿ ಬಹುತೇಕರು ಸೈಬರ್ ವಂಚಕರೇ ಇರುತ್ತಾರೆ. ಹಣ ಹೂಡಿಕೆ ಮಾಡಿ ಶೇ.30 ಕಮಿಷನ್ ಗಳಿಸಿರುವಂತೆ ಅವರೇ ಚಾಟ್ ಶುರು ಮಾಡುತ್ತಾರೆ. ಅದನ್ನು ಗಮನಿಸುವ ಇತರರು ಹೂಡಿಕೆಗೆ ಆಸಕ್ತಿ ತೋರುತ್ತಿದ್ದಂತೆ ಅಂಥವರಿಗೆ ಕರೆ ಮಾಡಿ ಆಮಿಷ ಒಡ್ಡುತ್ತಾರೆ. ಆರಂಭದಲ್ಲಿ 1 ಸಾವಿರ ರೂ. ಹೂಡಿಕೆಗೆ ಮನವೊಲಿಸುತ್ತಾರೆ. ಇಷ್ಟನ್ನು ಪಾವತಿಸುತ್ತಿದ್ದಂತೆ ಕೆಲವೇ ಗಂಟೆಗೆ ಅದಕ್ಕೆ ಶೇ.30 ಕಮಿಷನ್ ಎಂದು ಅವರ ಖಾತೆಗೆ ಹಣ ಜಮೆ ಮಾಡುತ್ತಾರೆ. ಮತ್ತೆ ಕರೆ ಮಾಡಿ ಇನ್ನೂ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಬರಲಿದೆ ಎಂದು ಮನವೊಲಿಕೆಯಲ್ಲಿ ತೊಡಗುತ್ತಾರೆ. 1 ಸಾವಿರದಿಂದ ಶುರುವಾದ ಹೂಡಿಕೆ ಲಕ್ಷಗಟ್ಟಲೆ ಮೊತ್ತಕ್ಕೆ ಬೆಳೆದಿರುತ್ತದೆ. ಅದನ್ನು ಡ್ರಾ ಮಾಡಬೇಕೆಂದು ಹೂಡಿಕೆದಾರ ಮುಂದಾದಾಗ ಗ್ರೂಪ್ ಡಿಲೀಟ್ ಮಾಡಿ ಸಂಪರ್ಕ ಕಡಿತ ಮಾಡಿಕೊಳ್ಳುತ್ತಾರೆ. ಯಾರನ್ನು ಸಂಪರ್ಕ ಮಾಡಬೇಕೆಂದು ಗೊತ್ತಾಗದೆ ಹೂಡಿಕೆದಾರರು ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಾರೆ.
ಬೆಂಗಳೂರಿನ ವಂಚನೆ
ಕಾಡುಗೋಡಿಯ ಸಿಗೇಹಳ್ಳಿ ನಿವಾಸಿ ಟೆಕ್ಕಿಯನ್ನು ವಾಟ್ಸ್​ಆಪ್ ಗ್ರೂಪ್​ಗೆ ಸೇರಿಸಿಕೊಂಡು ಟ್ರೇಡಿಂಗ್ ವ್ಯವಹಾರದಲ್ಲಿ ಹೂಡಿಕೆ ಮಾಡುವಂತೆ ಕಂತುಗಳಲ್ಲಿ ಹಣ ಪಡೆದು 44.30 ಲಕ್ಷ ರೂ. ವಂಚನೆ.
ಹರಳೂರು ಅಪಾರ್ಟ್​ವೆುಂಟ್​ನಲ್ಲಿ ನೆಲೆಸಿರುವ ಟೆಕ್ಕಿಗೆ ಡಿಐಎಫ್​ಎಂ ಆಪ್​ನಲ್ಲಿ 2022ರ ಆಗಸ್ಟ್ ನಿಂದ 2023ರ ಫೆಬ್ರವರಿ ನಡುವೆ 95.28 ಲಕ್ಷ ರೂ. ಹೂಡಿಕೆ ಮಾಡಿಸಿ ಡ್ರಾ ಮಾಡಲು ಹೋದಾಗ ಆಪ್ ಡಿಲೀಟ್ ಆಗಿದೆ.
ಮೇಡಹಳ್ಳಿಯ ವ್ಯಕ್ತಿಯೊಬ್ಬರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ ಡಿಜಿಟಲ್ ಸಲ್ಯೂಷನ್ ಪ್ರೖೆ. ಲಿ. ಕಂಪನಿಯಲ್ಲಿ ಹೂಡಿಕೆ ಮಾಡುವಂತೆ ಟೆಲಿಗ್ರಾಮ್ ಗ್ರೂಪ್​ಗೆ ಸೇರಿಸಿದ್ದ. ಶೇ.30 ಕಮಿಷನ್ ಆಮಿಷವೊಡ್ಡಿ 21.87 ಲಕ್ಷ ರೂ. ಪಡೆದು ವಂಚನೆ.
ಹಣ ಡ್ರಾ ಮಾಡಲು ಅಸಾಧ್ಯ
ಹೂಡಿಕೆದಾರನ ಹೆಸರಿನಲ್ಲಿ ಪ್ರತ್ಯೇಕ ಖಾತೆ ತೆರೆಯುವ ಸೈಬರ್ ಕಳ್ಳರು ಅದರ ಸಂಪೂರ್ಣ ನಿರ್ವಹಣೆ ಮಾಡುತ್ತಾರೆ. ಜನರು ಹೂಡಿಕೆ ಮಾಡಿದ ಹಣಕ್ಕೆ ಶೇ.30 ಕಮಿಷನ್ ರೂಪದಲ್ಲಿ ಅವರೇ ಸೃಷ್ಟಿಸಿರುವ ಹೂಡಿಕೆದಾರನ ಖಾತೆಗೆ ಜಮೆ ಮಾಡುತ್ತಾರೆ. ಅದನ್ನು ಹೂಡಿಕೆದಾರ ನೋಡಬಹುದು ಹೊರತು ಡ್ರಾ ಮಾಡುವುದು ಅಸಾಧ್ಯ. ಹಣ ಪಡೆಯಲು ಯತ್ನಿಸಿದಾಗ, ಖಾತೆಯಲ್ಲಿ ಕಡಿಮೆ ಹಣ ಇದೆ. ದುಪ್ಪಟ್ಟು ಹಣ ಇದ್ದರಷ್ಟೇ ಲಾಭಾಂಶ ಡ್ರಾಗೆ ಸಾಧ್ಯವೆಂದು ಹೇಳಿ ಮತ್ತಷ್ಟು ಹಣವನ್ನು ಜಮಾ ಮಾಡಿಸಿಕೊಳ್ಳಲು ಖೆಡ್ಡಾ ತೋಡಿರುತ್ತಾರೆ. ಲಾಭಾಂಶವನ್ನೇ ಮತ್ತೆ ಹೂಡಿಕೆ ಮಾಡಿದರೆ ಹೆಚ್ಚಿನ ಕಮಿಷನ್ ಬರಲಿದೆ ಎಂದು ದಿಕ್ಕು ತಪ್ಪಿಸುತ್ತಾರೆ. ಒಟ್ಟಿನಲ್ಲಿ ಹೂಡಿಕೆದಾರನ ಬ್ಯಾಂಕ್ ಖಾತೆಗೆ ಒಂದು ಪೈಸೆಯೂ ಸಿಗದಂತೆ ಮಾಡಿ ಸಂಪರ್ಕ ಕಡಿತ ಮಾಡಿಕೊಳ್ಳುತ್ತಾರೆ.
ಏಕದಿನ ವಿಶ್ವಕಪ್​: ಬೆಂಗಳೂರಿನಲ್ಲಿ ಟೀಮ್​ ಇಂಡಿಯಾ ವಿರುದ್ಧ ಆಡುವ ಎದುರಾಳಿ ನಿರ್ಧಾರ

ಧೋನಿ ಜನ್ಮದಿನಕ್ಕೆ ಸಿದ್ಧವಾಯ್ತು 52 ಅಡಿ ಎತ್ತರದ ಕಟೌಟ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 13 =
Remember me
