ಬೆಂಗಳೂರು:ಕರ್ನಾಟಕ ಜ್ಯೋತಿಷ್ಯ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯು ಕಳೆದ 25 ವರ್ಷಗಳಿಂದ ಕನ್ನಡ ಮಾಧ್ಯಮದಲ್ಲಿ ಜ್ಯೋತಿಷ ಅಧ್ಯಯನಾಲಾಷಿಗಳಿಗಾಗಿ ಪರಾಶರ ಪದ್ಧತಿಯ ಸಾಂಪ್ರದಾಯಿಕ ಜ್ಯೋತಿಷ ತರಗತಿಗಳನ್ನು ನಡೆಸುತ್ತಾ ಬಂದಿದ್ದು, ಸಾವಿರಾರು ವಿದ್ಯಾರ್ಥಿಗಳು ಇಂದು ಪ್ರಖ್ಯಾತ ಜ್ಯೋತಿಷಿಗಳಾಗಿದ್ದಾರೆ ಎಂದು ಕರ್ನಾಟಕ ಜ್ಯೋತಿಷ್ಯ ಅಧ್ಯಯನ ಕೇಂದ್ರದ ಕಾರ್ಯದರ್ಶಿ ಕೆ.ಪ್ರಕಾಶ್ ರಾವ್ ತಿಳಿಸಿದ್ದಾರೆ.
ನಗರದ ಸುಧಾಮನಗರದಲ್ಲಿರುವ ಕರ್ನಾಟಕ ಜ್ಯೋತಿಷ್ಯ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
2010ನೇ ವರ್ಷದಲ್ಲಿ ದಶಮಾನೋತ್ಸವ ಆಚರಿಸಿದ್ದು, 2019ರ ವರೆಗೆ ಪ್ರತಿವರ್ಷ ಉಚಿತ ಜ್ಯೋತಿಷ ಕಾರ‌್ಯಾಗಾರ, ಸಾರ್ವಜನಿಕರಿಗೆ ಉಚಿತ ಜ್ಯೋತಿಷ್ಯ, ಪರಿಹಾರ ನಿರ್ದೇಶನ ಕಾರ‌್ಯಾಗಾರದ ಜತೆಗೆ ಜ್ಯೋತಿಷ ಸಮ್ಮೇಳನಗಳನ್ನು ಆಯೋಜಿಸಿತ್ತಾ ಬಂದಿದೆ. ಅಲ್ಲದೆ, 2014ರಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಯವು ನಡೆಸುತ್ತಿರುವ ಜ್ಯೋತಿಷ ಸರ್ಟಿಫಿಕೇಟ್, ಡಿಪ್ಲೊಮಾ, ಅಡ್ವಾನ್ಸ್ ಡಿಪ್ಲೋಮಾ ಪರೀಕ್ಷೆಗಳಿಗೆ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ನಿರ್ದೇಶನಗಳನ್ನು ಸಕ್ರಿಯವಾಗಿ ಒದಗಿಸುತ್ತಿದ್ದೇವೆ ಎಂದು ತಿಳಿಸಿದರು.
ಕಳೆದ 25 ವರ್ಷಗಳಲ್ಲಿ ಸಂಸ್ಥೆಯಿಂದ ಸಾವಿರಾರು ವಿದ್ಯಾರ್ಥಿಗಳು ಜ್ಯೋತಿಷ್ಯ,ಹಸ್ತಸಾಮುದ್ರಿಕಾ ಶಾಸ್ತ್ರಗಳನ್ನು ಕಲಿತು ಹವ್ಯಾಸ ಮತ್ತು ವೃತ್ತಿಯಾಗಿ ಅಭ್ಯಾಸ ಮಾಡುತ್ತಿದ್ದಾರೆ. ಹಲಸೂರಿನ ಆದಿತ್ಯ ಸ್ಕೂಲ್ ಆಫ್ ಅಸ್ಟ್ರಾಲಜಿ ಜ್ಯೋತಿಷಿ ಗಜೇಂದ್ರ, ಬಸವೇಶ್ವರನಗರ ಶಿವಯ್ಯಶಾಸ್ತ್ರಿ,ತಾವರೆಕೆರೆಯ ಜ್ಞಾನಜ್ಯೋತಿ ಜ್ಯೋತಿಷ ಕೇಂದ್ರ ಕೃಷ್ಣಕುಮಾರ್.ಆರ್, ದಿವ್ಯಜ್ಯೋತಿ ಕಾಲೇಜ್ ಆಫ್ ಅಸ್ಟ್ರಾಲಜಿ ಸಂಸ್ಥೆಯ ದಿವಂಗತ ರಾಮಮೂರ್ತಿ ಜೋಯಿಸ್ ಸೇರಿ ಹಲವಾರು ಪ್ರತಿಭಾವಂತ ವಿದ್ಯಾರ್ಥಿಗಳು ನಮ್ಮ ಸಂಸ್ಥೆಯಲ್ಲಿ ಕಲಿತವರು ಎಂಬುದು ಹೆಮ್ಮೆಯ ವಿಷಯ. ಅಲ್ಲದೆ, ಅದೇಷ್ಟೋ ವಿದ್ಯಾರ್ಥಿಗಳು ಇಂದಿಗೂ ತಮ್ಮ ಸಂಸ್ಥೆಗಳ ಮೂಲಕ ಜ್ಯೋತಿಷ್ಯ ಆಸಕ್ತರಿಗೆ ಉಚಿತವಾಗಿ ಬೋಧನೆ ಮಾಡುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಜ್ಯೋತಿಷ್ಯದಲ್ಲಿ ಅಪಾರ ಅನುಭವವುಳ್ಳ ಜ್ಯೋತಿಷ್ಯರ ತಂಡದಿಂದ ಬೋಧನೆ.
ಪ್ರಸ್ತುತ ಸಂಸ್ಥೆಯ ಅಧ್ಯಕ್ಷರಾದ ಜೆ.ಹರಿದಾಸ್, ಕಾರ‌್ಯದರ್ಶಿ ಕೆ.ಪ್ರಕಾಶ್‌ರಾವ್, ಮ್ಯಾನೇಜಿಂಗ್ ಟ್ರಸ್ಟಿ ಆರ್.ರಂಗಸ್ವಾಮಿ, ಅಧ್ಯಾಪಕ ಡಾ.ಎಸ್.ಎಂ.ಶಿವಪ್ಪ, ಪಿ.ಅರುಣ್‌ಕುಮಾರ್ ಶರ್ಮಾ, ಬೆಂಗಳೂರು ಅಸ್ಟ್ರಲಾಜಿಕಲ್ ಅಸೋಸಿಯೇಷನ್‌ನ ವಿದ್ಯಾರ್ಥಿಗಳಾಗಿದ್ದು, ಜೆ.ಹರಿದಾಸ್ ಮತ್ತು ಕೆ.ಪ್ರಕಾಶ್‌ರಾವ್ ಅವರು ಡಾ.ಟಿ.ಎಸ್.ವಾಸನ್, ಡಾ.ಎಸ್.ಕೃಷ್ಣಕುಮಾರ್‌ರವರ ಬಳಿ ಬೆಂಗಳೂರಿನ ಐಕಾಸ್‌ನಲ್ಲಿ ಸಹಾ ಅಧ್ಯಯನ ಮಾಡಿದವರಾಗಿದ್ದಾರೆ. ವಿ.ಕೆ.ವೆಂಕಟೇಶಯ್ಯ, ಎಂ.ವಾಸುದೇವಮೂರ್ತಿ, ಮತ್ತು ಎನ್.ವೆಂಕಟಾಚಲಯ್ಯ ಸಹಾ ಜ್ಯೋತಿಷ್ಯತಜ್ಞರಾಗಿದ್ದಾರೆ ಎಂದರು.
ಪ್ರತಿ ವರ್ಷದಂತೆ ಈ ಬಾರಿಯು ಕನ್ನಡದಲ್ಲಿ ಉಚಿತ ಜ್ಯೋತಿಷ್ಯ ತರಗತಿಗಳನ್ನು ನಡೆಸಲು ತಿರ್ಮಾನಿಸಲಾಗಿದೆ. ಪ್ರತಿ ಭಾನುವಾರ ಮಧ್ಯಾಹ್ನ 2.30ರಿಂದ ಸಂಜೆ 5.30ರವರೆಗೆ ಶಿಬಿರ ನಡೆಯಲಿದೆ. ಆಸಕ್ತರು ಶ್ರೀನಿವಾಸನಗರದ ಶಂಕರ್‌ನಾಗ್ ವೃತ್ತದ ಬಳಿ ಇರುವ ವಿ.ಎಸ್.ಕೃಷ್ಣಯ್ಯರ್ ರಸ್ತೆಯ, ಶ್ರೀ ವಿನಾಯಕ ವಿದ್ಯಾ ಸಂಸ್ಥೆ ಸಂಪರ್ಕಿಸಿ.ದೂರವಾಣಿ ಸಂಖ್ಯೆ 9844475547, 9611129208 ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದು ತಿಳಿಸಿದರು.
ಶ್ರೀ ಶ್ರೀ ಶ್ರೀ ಬಾಗಂಗಾಧರನಾಥ ಸ್ವಾಮೀಜಿಗಳಿಂದ ಉದ್ಘಾಟನೆಗೊಂಡ ಸಂಸ್ಥೆ
ಬೆಂಗಳೂರಿನ ವಿ.ವಿ.ಪುರಂನ ಮಹಾವೀರ್‌ಜೈನ್ ಕಾಲೇಜಿನಲ್ಲಿ, ಕಾರ್ಯದರ್ಶಿಗಳಾಗಿದ್ದ ಚಿನ್‌ರಾಜ್‌ಜೈನ್ , ತೋಟಗಾರಿಕೆ ಸಚಿವ ಅಲ್ಲಂ ವೀರಭದ್ರಪ್ಪ, ಹೈಕೋರ್ಟ್ ನ್ಯಾಯಾಧೀಶ ಕೆ.ಶ್ರೀಧರ್‌ರಾವ್, ಬೆಂಗಳೂರು ಅಸ್ಟ್ರಜಿಕಲ್ ಅಸೋಸಿಯೋಷನ್‌ನ ಅಧ್ಯಕ್ಷರಾಗಿದ್ದ ಕೆ.ನಾರಾಯಣನ್, ನಾಡಿಶಾಸ್ತ್ರದ ದಿವಂಗತ ಆರ್.ಜಿ.ರಾವ್, ಸಾಯನ ಸಿದ್ಧಾಂತ ಪಂಡಿತ ಅರವಿಂದ ಪಾಟೀಲ್ ಇವರುಗಳ ಸಹಕಾರದಲ್ಲಿ ಜೂನ್.25 ಎರಡು ಸಾವಿರ ಇಸವಿಯಂದು ಆದಿಚುಂಚನಗಿರಿ ಶ್ರೀ ಶ್ರೀ ಶ್ರೀ ಬಾಗಂಗಾಧರನಾಥ ಸ್ವಾಮೀಜಿಗಳು ಸಂಸ್ಥೆಯನ್ನು ಉದ್ಘಾಟಿಸಿದರು. ಪ್ರಸ್ತುತ ನಗರದ ಶ್ರೀ ವಿನಾಯಕ ವಿದ್ಯಾ ಸಂಸ್ಥೆಯ ಕಾರ‌್ಯದರ್ಶಿ ಕೋದಂಡರಾಮು ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ ಎಂದು ಹೇಳಿದರು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:seventeen − 10 =
Remember me
