ಬೆಂಗಳೂರುಗ್ರಾಮೀಣ ಭಾಗದಲ್ಲಿ ಕಡು ಬಡತನದಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಾಷ್ಟ್ರೋತ್ಥಾನ ಪರಿಷತ್‌ನ ‘ಸಾಧನಾ’ ಮತ್ತು ‘ತಪಸ್’ ಹೆಸರಿನಲ್ಲಿ ಊಟ, ವಸತಿ ಸಹಿತ ನೀಟ್ ಮತ್ತು ಜೆಇಇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡುತ್ತಿದೆ.
ವೈದ್ಯಕೀಯ, ಇಂಜಿನಿಯರಿಂಗ್ ಮಾಡಬೇಕೆಂಬ ಧ್ಯೇಯವಿರುವ ಮಕ್ಕಳು ಆ.15ರಿಂದ ಸೆ.30ರೊಳಗೆ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಆ.6ರಂದು ಮೊದಲ ಹಂತದಲ್ಲಿ ಮತ್ತು ನ.10ರಂದು 2ನೇ ಹಂತದಲ್ಲಿ ಸ್ಪಧಾತ್ಮಕ ಪರೀಕ್ಷೆ ನಡೆಯಲಿದೆ. ಲಿತಾಂಶವನ್ನು ಕ್ರಮವಾಗಿ ಆ.15 ಮತ್ತು 25ರಂದು ಪ್ರಕಟಿಸಲಾಗುತ್ತದೆ.
ಹೆಣ್ಣು ಮಕ್ಕಳಿಗೆ ‘ಸಾಧನಾ’ ಹೆಸರಿನಲ್ಲಿ ಸಿಬಿಎಸ್‌ಇ 11, 12ನೇ ಪಿಸಿಎಂಬಿ ಹಾಗೂ ನೀಟ್, ಸಿಇಟಿಗೆ ಬೆಂಗಳೂರಿನ ಹೆಗಡೆನಗರದ ರಾಷ್ಟ್ರೋತ್ತಾನ ವಿದ್ಯಾಕೇಂದ್ರದಲ್ಲಿ ತರಬೇತಿ ನೀಡಲಾಗುತ್ತದೆ. ‘ತಪಸ್’ ಹೆಸರಿನಲ್ಲಿ ಗಂಡು ಮಕ್ಕಳಿಗೆ ಸಿಬಿಎಸ್‌ಇ 11, 12ನೇ ಪಿಸಿಎಂಸಿ ಹಾಗೂ ಐಐಟಿ, ಜೆಇಇಗೆ ಬನಶಂಕರಿ 6ನೇ ಹಂತದಲ್ಲಿರುವ ಕೇಂದ್ರದಲ್ಲಿ ತರಬೇತಿ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗೆ 94812 01144/98446 02529 ಅಥವಾ ವೆಬ್‌ಸೈಟ್http://tapassaadhana.rashtrotthana.orgಗೆ ಭೇಟಿ ನೀಡಬಹುದು.
ಅರ್ಹತಗಳೇನು?ಪ್ರಸ್ತುತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ/10ನೇ ತರಗತಿ ಬರೆಯುವವರಾಗಿರಬೇಕು. 9ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಕನಿಷ್ಠ ಶೇ.85 ಅಂಕ ಪಡೆದಿರಬೇಕು. ಪಾಲಕರ ವಾರ್ಷಿಕ ವರಮಾನ 2 ಲಕ್ಷ ರೂ.ಗಳಿಗಿಂತ ಮೀರರಬಾರದು. ಅರ್ಜಿ ಸಲ್ಲಿಸುವ ವೇಳೆ 9ನೇ ತರಗತಿಯ ಅಂಕಪಟ್ಟಿ ಮತ್ತು ತಮ್ಮ ಭಾವಚಿತ್ರದ ಛಾಯಾಪ್ರತಿಯನ್ನು ಅಪ್‌ಲೋಡ್ ಮಾಡಬೇಕು. ಅರ್ಜೀ ಸಲ್ಲಿಕೆ ಹಾಗೂ ಆಯ್ಕೆ ಪರೀಕ್ಷೆಗಳಿಗೆ ಯಾವುದೇ ಶುಲ್ಕ ನಿಗದಿ ಮಾಡಿಲ್ಲ. ಉಚಿತವಾಗಿ ನಡೆಸಲಾಗುತ್ತದೆ.
ಆಯ್ಕೆ ವಿಧಾನಆಯ್ಕೆಯನ್ನು ಲಿಖಿತ ಪರೀಕ್ಷೆಗಳು ಮತ್ತು ಆಯ್ಕೆ ಶಿಬಿರದ ಮೂಲಕ ಮಾಡಲಾಗುತ್ತದೆ.ಎಲ್ಲ ಜಿಲ್ಲಾ ಕೇಂದ್ರಗಳು ಮತ್ತು ಕೆಲವು ನಗರಗಳಲ್ಲಿ ಏಕ ಕಾಲದಲ್ಲಿ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ.
ಏನೆಲ್ಲ ಸೌಲಭ್ಯ ದೊರೆಯಲಿದೆ?11ನರ ತರಗತಿಗೆ ಪ್ರವೇಶ ಒದಗಿಸುವುದು, ಬೇಸ್ ಸಂಸ್ಥೆಯ ನುರಿತ ಉಪನ್ಯಾಸಕರಿಂದ ತರಬೇತಿ, ತರಗತಿಗಳು, ಪ್ರಯೋಗಾಲಯಗಳು ಹಾಗೂ ಸುಸಜ್ಜಿತ ಗ್ರಂಥಾಲಯವಿದ್ದು, ಕಠಿಣ ಪರಿಶ್ರಮದಿಂದ ಶ್ರೇಷ್ಠರೆನಿಸಲು ಸ್ಫೂರ್ತಿ ನೀಡುವಂತಿದೆ. ಕ್ಷೇಮಕರ, ಸ್ವಚ್ಛ ಮತ್ತು ಆರೋಗ್ಯದಾಯಕ ಸಸ್ಯಾಹಾರಿ ಆಹಾರವನ್ನು ಒದಗಿಸಲಾಗುತ್ತದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:18 − 2 =
Remember me
