| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ದೊಡ್ಡ ಸವಾಲನ್ನು ಮುಂದಿಟ್ಟುಕೊಂಡು ಬಜೆಟ್ ರೂಪಿಸುತ್ತಿರುವ ಹಣಕಾಸು ಇಲಾಖೆಗೆ ವಿದ್ಯುತ್ ಹೊರೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಸಂದೇಶವೊಂದನ್ನು ರವಾನಿಸಿದ್ದು, ವಿದ್ಯುತ್ ಬಳಕೆದಾರರು ಮತ್ತು ವಿದ್ಯುತ್ ಸರಬರಾಜು ಕಂಪನಿಗಳ (ಎಸ್ಕಾಂ) ಪರವಾಗಿ ದನಿ ಎತ್ತಿದೆ.
ಇಂಧನ ಇಲಾಖೆ ಅಪರ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದು ಅಭಿಪ್ರಾಯ ತಿಳಿಸಿರುವ ಆಯೋಗ, ಗಂಭೀರ ಸಂಗತಿಯನ್ನು ಪ್ರಸ್ತಾಪಿಸಿದೆ. ಇದೀಗ ಇಂಧನ ಇಲಾಖೆಯು ಆಯೋಗದ ಅಭಿಪ್ರಾಯವನ್ನು ಹಣಕಾಸು ಇಲಾಖೆ ಮುಂದೆ ಮಂಡಿಸಿದ್ದು, ಲೆಕ್ಕಾಚಾರಗಳನ್ನು ಪುನರ್ ಪರಿಶೀಲಿಸುವ ಅನಿವಾರ್ಯತೆಗೆ ಸರ್ಕಾರ ಸಿಲುಕಿದೆ. ಆದರೆ, ಆಯೋಗದ ಅಭಿಪ್ರಾಯಕ್ಕೆ ಸರ್ಕಾರದ ಮಟ್ಟದಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ಆಯೋಗದ ಎಚ್ಚರಿಕೆ: ಕೃಷಿ ಪಂಪ್​ಸೆಟ್​ಗಳಿಗೆ ಹಾಗೂ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ನೀಡುವುದಕ್ಕೆ ಬಜೆಟ್​ನಲ್ಲೇ ಹೆಚ್ಚು ಅನುದಾನ ಮೀಸಲಿಟ್ಟುಕೊಳ್ಳಿ. ಉಚಿತ ವಿದ್ಯುತ್ ಕೊಡುವುದಕ್ಕಾಗಿ ಕೈಗಾರಿಕೆ ಅಥವಾ ವಾಣಿಜ್ಯ ವಿದ್ಯುತ್ ಬಳಕೆದಾರರ ಮೇಲೆ ಹೊರಹಾಕಬೇಡಿ ಎಂದು ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಸರ್ಕಾರಕ್ಕೆ ಖಡಾಖಂಡಿತವಾಗಿ ಹೇಳಿದೆ. ಉಚಿತ ವಿದ್ಯುತ್ ನೀಡಲು ಹಣ ಹೊಂದಾಣಿಕೆ ಮಾಡುವ ಉದ್ದೇಶದಿಂದ ಕೈಗಾರಿಕೆ ಹಾಗೂ ವಾಣಿಜ್ಯ ಉದ್ದೇಶದ ವಿದ್ಯುತ್ ಬಳಕೆದಾರರಿಗೆ ಬಳಕೆ ಶುಲ್ಕ ಹೆಚ್ಚಿಸಲು ಬಯಸಿದರೆ ಆಗಬಹುದಾದ ಅಪಾಯವನ್ನು ಎತ್ತಿ ತೋರಿಸಿದೆ. ಒಂದು ವೇಳೆ ಕೈಗಾರಿಕೆ ಅಥವಾ ಹೈವೋಲ್ಟೇಜ್ ಬಳಕೆದಾರರಿಗೆ ಹೆಚ್ಚು ಶುಲ್ಕ ಹಾಕಿದರೆ ಅವರು ಖಾಸಗಿಯ ಮೊರೆ ಹೋಗಬಹುದು. ಖಾಸಗಿ ಉತ್ಪಾದಕರಿಂದ ಅವರು ವಿದ್ಯುತ್ ಖರೀದಿ ಮಾಡಿಕೊಳ್ಳಲು ಅವಕಾಶವಿದೆ. ಇದರಿಂದ ಎಸ್ಕಾಂಗಳ ಮೇಲೆ ದೂರಗಾಮಿ ಪರಿಣಾಮ ಉಂಟಾಗಲಿದೆ. ಎಸ್ಕಾಂಗಳಿಗೆ ಕೈಗಾರಿಕೆ ಹಾಗೂ ಹೈ ವೋಲ್ಟೇಜ್ ಬಳಕೆದಾರರೂ ಕೂಡ ಅನಿವಾರ್ಯ. ಈ ಕಾರಣಕ್ಕೆ ಇಂತಹ ಗ್ರಾಹಕರನ್ನು ಕಳೆದುಕೊಳ್ಳಬಾರದೆಂದು ಎಚ್ಚರಿಸಲಾಗಿದೆ.
ಎಸ್ಕಾಂ ಆದಾಯಕ್ಕೆ ಪೆಟ್ಟು:ನಿರ್ವಹಣೆ ವೆಚ್ಚದ ಕಾರಣಕ್ಕೆ ವಿದ್ಯುತ್ ಸರಬರಾಜು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಬೆಸ್ಕಾಂ ವ್ಯಾಪ್ತಿಯಲ್ಲಿ 2014ರಲ್ಲಿ ಸರಾಸರಿ ವಿದ್ಯುತ್ ವಿತರಣಾ ವೆಚ್ಚ 5.04 ರೂ. ಇದ್ದು, ಹತ್ತು ವರ್ಷಗಳ ಬಳಿಕ ಅಂದರೆ 2024ರಲ್ಲಿ 9.62 ರೂ. ಪ್ರತಿ ಯೂನಿಟ್ ಆಗುತ್ತಿದೆ. ವಿದ್ಯುತ್ ವೆಚ್ಚ ವಿಚಾರಕ್ಕೆ ಬಂದರೆ 2014ರಲ್ಲಿ ಪ್ರತಿ ಯೂನಿಟ್​ಗೆ 4.36 ರೂ. ಇದ್ದಿದ್ದು, ಇಂದು 7.73 ರೂ. ಆಗಿದೆ. ಮೊದಲನೇ ಪುಟದಿಂದ…
ವಿದ್ಯುತ್ ಸಬ್ಸಿಡಿಗಳಿಂದ ಕೈಗಾರಿಕೆ ಮತ್ತು ವಾಣಿಜ್ಯ ಬಳಕೆದಾರರ ಮೇಲೆ ವೆಚ್ಚ ಹೆಚ್ಚಳ ಮಾಡಿಕೊಂಡು ಬರಲಾಗಿದೆ. ಇದು ಕೈಗಾರಿಕೆ ಮತ್ತು ವಾಣಿಜ್ಯ ಕ್ಷೇತ್ರ ಬೆಳವಣಿಗೆ ಮೇಲೂ ಅಡ್ಡ ಪರಿಣಾಮ ಬೀರುತ್ತಿದೆ. ಅಷ್ಟೇ ಅಲ್ಲದೇ ಹೈ ಟಾರಿಫ್​ನಿಂದ ದೊಡ್ಡ ಬಳಕೆದಾರರು ಮುಕ್ತ ಮಾರುಕಟ್ಟೆಯಿಂದ ವಿದ್ಯುತ್ ಖರೀದಿ ಆರಂಭಿಸುತ್ತಿದ್ದಾರೆ. ಈ ಬೆಳವಣಿಗೆ ಎಸ್ಕಾಂಗಳ ಆದಾಯಕ್ಕೆ ಪೆಟ್ಟು ಕೊಡುತ್ತಿದೆ. ಹೀಗಾಗಿಯೇ ಕ್ರಾಸ್ ಸಬ್ಸಿಡಿ ಕೈಬಿಡುವಂತೆ ಆಯೋಗ ಸರ್ಕಾರಕ್ಕೆ ಸಲಹೆ ನೀಡಿದೆ.
ಬ್ರೇಕ್ ಹಾಕಿ10 ಎಚ್​ಪಿ ಐಪಿ ಸೆಟ್​ಗಳಿಗೆ ನೀಡುತ್ತಿರುವ ಉಚಿತ ವಿದ್ಯುತ್​ಗಾಗಿ 2023-2024ನೇ ಸಾಲಿನಲ್ಲಿ 13,966 ಕೋಟಿ ರೂ. ಎಸ್ಕಾಂ ಗಳಿಗೆ ನೀಡಲು ಆಯೋಗ ಹಂಚಿಕೆ ಮಾಡಿತ್ತು. ಇದು ಕ್ರಾಸ್ ಸಬ್ಸಿಡಿ ಪರಿಗಣಿಸಿದ ಬಳಿಕ. ಅಂದರೆ ಕೈಗಾರಿಕೆ ಹಾಗೂ ಎಚ್​ಡಿ ಬಳಕೆದಾರರಿಗೆ ಹೆಚ್ಚುವರಿ ಶುಲ್ಕ ಹಾಕುವ ಮೂಲಕ 5680 ಕೋಟಿ ರೂ.ವನ್ನು ಹೊಂದಾಣಿಕೆ ಮಾಡಿಕೊಳ್ಳಲಾಗುತ್ತದೆ. ಅಂದರೆ ಒಟ್ಟಾರೆ ಐಪಿ ಸೆಟ್​ಗಳಿಗೆ ಉಚಿತ ವಿದ್ಯುತ್​ಗಾಗಿ 19646 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. 2024-25ರಲ್ಲಿ ಐಪಿ ಸೆಟ್ ವಿದ್ಯುತ್ ಬಳಕೆ ವೆಚ್ಚ ಶೇ.8ರಷ್ಟು ಹೆಚ್ಚುವರಿಯಾಗಬಹುದೆಂದು ನಿರೀಕ್ಷಿಸಲಾಗಿದೆ. ಅಂದರೆ 21,200 ಕೋಟಿ ರೂ. ಆಗಬಹುದು.
ಹಣಕಾಸು ಇಲಾಖೆ ಗರಂಆಯೋಗದ ಪತ್ರದ ಬಗ್ಗೆ ಹಣಕಾಸು ಇಲಾಖೆ ತೀವ್ರ ಅಸಮಾಧಾನ ಹೊರಹಾಕಿದೆ. ಕ್ರಾಸ್ ಸಬ್ಸಿಡಿ ಸರ್ಕಾರದ ನೀತಿ ನಿರೂಪಣೆ ವಿಷಯ. ಅದನ್ನು ಮಾಡಬಾರದೆಂದು ಹೇಳಲು ಆಯೋಗ ಯಾರು? ಅದರ ವ್ಯಾಪ್ತಿ ಮೀರಿ ವರ್ತಿಸುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಸರ್ಕಾರ ಎಲ್ಲಿಂದ ದುಡ್ಡು ತರಬೇಕು? ಅಲ್ಲದೇ ಇದು ವಿದ್ಯುತ್ ನಿಯಂತ್ರಣ ಪ್ರಾಧಿಕಾರದ ವ್ಯಾಪ್ತಿಗೆ ಬಾರದ ವಿಷಯ ಎಂಬ ಅಭಿಪ್ರಾಯಕ್ಕೂ ಬರಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕಣ್ಣಿಗೊಂದು ಸವಾಲು: ಈ ಫೋಟೋದಲ್ಲಿರುವ 2ನೇ ಬೆಕ್ಕನ್ನು ಪತ್ತೆಹಚ್ಚುವ ಸಾಮರ್ಥ್ಯ ನಿಮಗಿದೆಯಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
