ಬೆಂಗಳೂರು:ರಾಜ್ಯದಲ್ಲಿ 40 ಲಕ್ಷ ವಲಸೆ ಕಾರ್ಮಿಕರು ಇರುವ ಅಂದಾಜಿದ್ದು, ಕೇಂದ್ರ ಸರ್ಕಾರದ ಗರೀಬ್ ಕಲ್ಯಾಣ್ ಯೋಜನೆಯಡಿ ಅವರಿಗೆಲ್ಲ ಜೂನ್ ಒಂದರಿಂದ ಉಚಿತ ಧಾನ್ಯ ಹಂಚಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ. ಗೋಪಾಲಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸೋಮವಾರ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ ಪ್ಯಾಕೇಜ್‌ನ ಭಾಗವಾಗಿದೆ.ಮೇ 26 ರಿಂದ 31ರವರೆಗೆ ವಲಸೆ ಕಾರ್ಮಿಕರಿಗೆ ತಲಾ 5 ಕೆಜಿ ಅಕ್ಕಿ ಅಥವಾ ಗೋಧಿ ವಿತರಿಸಲಾಗುವುದು. 2ನೇ ಹಂತದಲ್ಲಿ ಜೂನ್ 1 ರಿಂದ 10ರವರೆಗೆ ತಲಾ 5 ಕೆಜಿ ಅಕ್ಕಿ ಹಾಗೂ 2 ಕೆಜಿ ಕಡಲೆ ಕಾಳು ವಿತರಿಸಲಾಗುವುದು.ವಲಸಿಗ ಕಾರ್ಮಿಕ ಸಮೀಪದ ನ್ಯಾಯಬೆಲೆ ಅಂಗಡಿಯಲ್ಲಿ ಆಧಾರ್ ನಂಬರ್ ನೀಡಿ ಈ ಪಡಿತರ ಪಡೆಯಬಹುದು.
ಇದನ್ನೂ ಓದಿ:ನೂರಾರು ಭಾರತೀಯರನ್ನು ಗಡಿಪಾರು ಮಾಡಿದ ಅಮೆರಿಕ, ಉಳಿದವರ ಸ್ಥಿತಿ ಅಯೋಮಯ!
ಎಪಿಎಲ್, ಬಿಪಿಎಲ್, ಸ್ವಂತ ಮನೆ, ಆದಾಯ ತೆರಿಗೆ ಕಟ್ಟುವ ವಲಸೆ ಕಾರ್ಮಿಕರಿಗೆ ಈ ಸೌಲಭ್ಯ ಸಿಗದು.ರಾಜ್ಯದಲ್ಲಿ 4 ಕೋಟಿ ಪಡಿತರ ಚೀಟಿದಾರರಿದ್ದಾರೆ. ಇದರಲ್ಲಿ ಶೇ.10ರಷ್ಟು ವಲಸೆ ಕಾರ್ಮಿಕರು ಇದ್ದಾರೆಂದು ಕೇಂದ್ರ ಸರ್ಕಾರವೇ ಅಂದಾಜಿಸಿದೆ. ಈ ಪೈಕಿಯೂ ಕೆಲವರು ಈಗಾಗಲೇ ಸ್ವಸ್ಥಳಕ್ಕೆ ಮರಳಿದ್ದಾರೆ. ಉಳಿದ ಕಾರ್ಮಿಕರನ್ನು ರಾಜ್ಯ ಸರ್ಕಾರವೇ ಗುರುತಿಸಿ ಧಾನ್ಯ ವಿತರಿಸಲಿದೆ ಎಂದು ಗೋಪಾಲಯ್ಯ ಹೇಳಿದರು.
ದೇವೇಗೌಡರನ್ನು ಪಂಜಾಬಿನ ಜನ ಸ್ಮರಿಸುವುದು ಏಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 7 =
Remember me
