ಬೆಂಗಳೂರು:ನ್ಯೂ ಇಯರ್ ಸಂಭ್ರಮದ ಹೆಸರಿನಲ್ಲಿ ಯುವ ಜನತೆ ಪಾರ್ಟಿಗಳಲ್ಲಿ ಮಿಂದೇಳುತ್ತಿದ್ದಾರೆ. ಬಹುಸಂಖ್ಯೆಯಲ್ಲಿ ಜನರು ಮೋಜು, ಮಸ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ವಾರಾಂತ್ಯ ಆಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಂಭ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಇವರನ್ನೆಲ್ಲಾ ನಿಯಂತ್ರಿಸಲು ಪೊಲೀಸ್ ಸಿಬ್ಬಂದಿಗಳು ಶ್ರಮ ಪಡುತ್ತಿದ್ದಾರೆ.
ನ್ಯೂ ಇಯರ್ ಸೆಲಿಬ್ರೇಷನ್​ಗೆ ಕ್ಷಣಗಣನೆ ಆರಂಭವಾಗಿದ್ದು, ನಗರವೆಲ್ಲಾ ಬಣ್ಣ ಬಣ್ಣದ ವಿದ್ಯತ್ ದೀಪಗಳಿಂದ ಅಲಂಕೃತವಾಗಿದೆ. ಅದರಲ್ಲೂ ಬೆಂಗಳೂರಿನ ಬ್ರಿಗೇಡ್ ರೋಡ್, ಎಂ.ಜಿ.ರೋಡ್, ಚರ್ಚ್ ಸ್ಟ್ರೀಟ್ ಮುಂತಾದ ಕಡೆಗಳಲ್ಲಿ ನ್ಯೂ ಇಯರ್ ಪಾರ್ಟಿ ಸದ್ದು ಜೋರಾಗಿರುತ್ತದೆ. ಇದೀಗ ಚರ್ಚ್ ಸ್ಟ್ರೀಟ್​​ನಲ್ಲಿ ಯುವತಿಯೊಬ್ಬಳು ಫ್ರೀ ಹಗ್ (Free hug) ಅಭಿಯಾನ ನಡೆಸಿ ಸುದ್ದಿಯಾಗಿದ್ದಾಳೆ.
ಯುವತಿಯೊಬ್ಬಳು Free Hug ಎಂದು ಪೋಸ್ಟರ್ ಹಿಡಿದು ನಿಂತಿದ್ದಾಳೆ. ಬೋರ್ಡ್​​ ನೋಡಿದ ಕೆಲ ಯುವಕ-ಯುವತಿಯರು ಮುಂದೆ ಬಂದು ತಬ್ಬಿಕೊಂಡಿದ್ದಾರೆ. ಇದನ್ನು ಗಮನಿಸಿದ ಪೊಲೀಸರು ಕೂಡಲೇ ಎಚ್ಚೆತ್ತುಕೊಂಡು ಯುವತಿಗೆ ಬುದ್ಧಿ ಹೇಳಿದ್ದಾರೆ. ಈ ಮೂಲಕ ಅನಾಹುತ ಆಗುವ ಮುನ್ನ ಕಬ್ಬನ್ ಪಾರ್ಕ್ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nine − two =
Remember me
