ವಿಜಯಪುರ:ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳ ಪೈಕಿ ಒಂದಾಗಿರುವ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಯನ್ನು ಇಂದು ಜಾರಿಗೆ ತರಲಾಗಿದೆ. ಈ ಸಂದರ್ಭದಲ್ಲಿ ಖುದ್ದು ಸಿಎಂ ಸಿದ್ದರಾಮಯ್ಯ ಸೇರಿದಂತೆ ಕೆಲವರು ಕಂಡಕ್ಟರ್​-ಡ್ರೈವರ್ ಆಗಿದ್ದೂ ನಡೆದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಂಡಕ್ಟರ್ ರೀತಿ ತಾವೇ ಟಿಕೆಟ್ ಕೊಟ್ಟು ಯೋಜನೆಗೆ ಚಾಲನೆ ನೀಡಿದ್ದರು. ಅದೇ ರೀತಿ ಸಚಿವ ಈಶ್ವರ್ ಖಂಡ್ರೆ ಕೂಡ ನಿರ್ವಾಹಕರಂತೆ ಟಿಕೆಟ್ ನೀಡಿದ್ದರು. ಮತ್ತೊಂದೆಡೆ ಕೆಜಿಎಫ್ ಶಾಸಕಿ ರೂಪಕಲಾ ಬಸ್ಸನ್ನೇ ಚಲಾಯಿಸಿದ್ದರು.
ಇದನ್ನೂ ಓದಿ:ಇನ್ನು ಹಾಡು ಕೇಳುತ್ತ ಸ್ನಾನ ಮಾಡಲ್ಲ ಎಂದು ಕ್ಷಮೆ ಕೋರಿದ ವಿದ್ಯಾರ್ಥಿನಿ!; ದಯವಿಟ್ಟು ಫೋನ್​ ಹಿಂದಿರುಗಿಸಿ ಎಂದು ಮನವಿ
ಮತ್ತೊಂದೆಡೆ ಸ್ವಾಮೀಜಿಯೊಬ್ಬರು ಕೂಡ ಈ ಯೋಜನೆಯ ಚಾಲನೆ ಸಂದರ್ಭದಲ್ಲಿ ತಾವೇ ಸರ್ಕಾರಿ ಬಸ್ ಚಲಾಯಿಸಿದ ಪ್ರಕರಣ ನಡೆದಿದೆ. ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಕೊಲ್ಹಾರದ ದಿಗಂಬರೇಶ್ವರ ಮಠದ ಶ್ರೀ ಕಲ್ಲಿನಾಥ ಸ್ವಾಮೀಜಿ ಬಸ್ ಚಲಾಯಿಸಿದವರು.
ಇದನ್ನೂ ಓದಿ:ನೇತಾಡುತ್ತಿದ್ದ ಬ್ಯಾಂಕ್ ಮ್ಯಾನೇಜರ್ ಶವದ ಮೇಲಿತ್ತು ಮಹಿಳೆಯ ಒಳ ಉಡುಪು!; ಕುತೂಹಲ ಕೆರಳಿಸಿರುವ ಪ್ರಕರಣ
ಮಹಿಳೆಯರಿಗೆ ಬಸ್​ನಲ್ಲಿ ಉಚಿತ ಪ್ರಯಾಣಕ್ಕೆ ಚಾಲನೆ ನೀಡಿದ ಇವರು, ಅಧಿಕಾರಿಗಳ ಸಮ್ಮುಖದಲ್ಲಿ ತಾವೇ ಕೊಲ್ಹಾರ ಪಟ್ಟಣವನ್ನು ಸುತ್ತಾಡಿಸಿದ್ದಾರೆ. ಸ್ವಾಮೀಜಿ ಸುಮಾರು 5 ಕಿ.ಮೀ. ದೂರ ಬಸ್ ಚಲಾಯಿಸಿದ್ದು, ಬಸ್​ನಲ್ಲಿದ್ದವರು ಕೆಲಕಾಲ ಆತಂಕದಲ್ಲಿ ಇದ್ದಿದ್ದೂ ಕಂಡುಬಂತು.
ಮತ್ತೊಂದು ಲವ್ ಜಿಹಾದ್: ಹಿಂದೂ ಯುವತಿಗೆ ಸುಳ್ಳು ಹೇಳಿ ಪ್ರೀತಿಯ ಸೋಗಲ್ಲಿ ಮೋಸ; ಬಳಿಕ ಕಿರುಕುಳ, ಕೊಲೆ ಬೆದರಿಕೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 3 =
Remember me
