ಬೆಂಗಳೂರು:ಫ್ರೀ ಕಾಶ್ಮೀರ ಭಿತ್ರಿಪತ್ರ ಹಿಡಿದು ಬಂಧನಕ್ಕೆ ಒಳಗಾದ ಆರುದ್ರ ತಮ್ಮ ಸ್ವ ಇಚ್ಛಾ ಹೇಳಿಕೆಯಲ್ಲಿ, ತಾನು ಪ್ಲಕಾರ್ಡ್ ಹಿಡಿದಿದ್ದು ಯಾಕೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಆರುದ್ರ ಅಲಿಯಾಸ್ ಅನ್ನಪೂರ್ಣೇಶ್ವರಿಯಾದ ನಾನು ಸಿಎಎ, ಎನ್​ಆರ್​​ಸಿ ಮತ್ತು ಆರ್ಟಿಕಲ್​ 370 ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆಗಳಿಂದ ಪ್ರಚೋದನೆಗೆ ಒಳಗಾಗಿದ್ದೆ.
ಎಲ್ಲೆಲ್ಲಿ ಸಿಎಎ, ಎನ್ಆರ್​​ಸಿ ವಿರುದ್ಧ ನಡೆಯುತ್ತಿತ್ತೋ ಅಲ್ಲೆಲ್ಲ ನಾನೂ ಭಾಗಿಯಾಗುತ್ತಿದ್ದೆ. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಕಾರ್ಯಕ್ರಮಗಳು ಇದ್ದುದು ಕಂಡುಬಂದರೆ ಅಲ್ಲಿ ನಾನೇ ಮುಂದಾಗಿ ಹೋಗುತ್ತಿದ್ದೆ. ನಿನ್ನೆಯೂ ಕೂಡ ಅಮೂಲ್ಯ ಭಾಗಿಯಾಗಿದ್ದ ಕಾರ್ಯಕ್ರಮಕ್ಕೆ ತೆರಳಿದ್ದೆ. ಈ ವೇಳೆ ಅಮೂಲ್ಯ ಪಾಕಿಸ್ತಾನ ಜಿಂದಾಬಾಂದ್​ ಎಂದು ಹೇಳಿದಾಗ ಪೊಲೀಸರು ಆಕೆಯನ್ನು ಬಂಧಿಸಿ ಜೈಲಿಗಟ್ಟಿದ್ದರು.
ಇದನ್ನೂ ಓದಿ:ನಿನ್ನೆ ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯ,.. ಇಂದು ಫ್ರೀ ಕಾಶ್ಮೀರ ಪ್ಲಕಾರ್ಡ್​ ಹಿಡಿದ ಆರುದ್ರಾ… ಯಾರಿವರೆಲ್ಲ?
ಅದಾದ ಬಳಿಕ ಅಮೂಲ್ಯ ವಿರುದ್ಧವಾಗಿ ಹಿಂದೂ ಪರ ಸಂಘಟನೆಗಳು ಟೌನ್​ಹಾಲ್​ ಬಳಿ ಸೇರಿದ್ದವು. ಅದಕ್ಕಾಗಿ ನಾನು ರಟ್ಟಿನಿಂದ ತಯಾರಿಸಿದ ಮುಸಲ್ಮಾನ್ ಹಾಗೂ ದಲಿತರನ್ನ ಮುಕ್ತಗೊಳಿಸಿ, ಫ್ರೀ ಕಾಶ್ಮೀರ ಎಂಬ ಇಂಗ್ಲಿಷ್ ಹಾಗೂ ಕನ್ನಡದ ಬರಹಗಳಿರುವ ಸಂದೇಶಗಳನ್ನು ಬರೆದು ಇಟ್ಟುಕೊಂಡಿದ್ದೆ. ಅಮೂಲ್ಯ ವಿರುದ್ಧ ಪ್ರತಿಭಟನೆಗೆ ಹಿನ್ನಡೆಯಾಗುವಂತೆ ಮಾಡಲು ಅವುಗಳನ್ನು ಪ್ರದರ್ಶಿಸಿದೆ ಎಂದು ಪ್ಲಕಾರ್ಡ್ ಪ್ರದರ್ಶನ ಮಾಡಿದ್ದಾಗಿ ಆರುದ್ರಾ ಹೇಳಿದ್ದಾಳೆ. (ದಿಗ್ವಿಜಯ ನ್ಯೂಸ್​)


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
