ರಾಯಚೂರು:ಧಾರ್ವಿುಕ ದತ್ತಿ ಇಲಾಖೆ ವ್ಯಾಪ್ತಿಯ ನೂರು ಪ್ರಮುಖ ದೇವಸ್ಥಾನಗಳಲ್ಲಿ ಸಾಮೂಹಿಕ ಉಚಿತ ವಿವಾಹ ನಡೆಸಲು ನಿರ್ಧರಿಸಿರುವ ರಾಜ್ಯ ಸರ್ಕಾರ, ಈಗ ಆಯಾ ದೇಗುಲಗಳ ನಿಶ್ಚಿತ ಠೇವಣಿ ಮೇಲೆ ಕಣ್ಣಿಟ್ಟಿದೆ. ದೇವಸ್ಥಾನದ ಹಣದಲ್ಲೇ ಸರ್ಕಾರ ಪುಕ್ಕಟೆ ಪ್ರಚಾರ ಪಡೆದು ಕೊಳ್ಳುತ್ತಿದೆಯೇ ಎನ್ನುವ ಪ್ರಶ್ನೆ ಹುಟ್ಟು ಹಾಕಿದೆ.
ಎ ಶ್ರೇಣಿ ದೇವ ಸ್ಥಾನಗಳಲ್ಲಿ (ಏ.26 ಹಾಗೂ ಮೇ 24) ಜಾತ್ಯತೀತವಾಗಿ ಉಚಿತ ಸಾಮೂಹಿಕ ವಿವಾಹ ಆಯೋಜಿ ಸುವಂತೆ ಸರ್ಕಾರ ಆದೇಶಿಸಿದೆ. ಇದಕ್ಕೆ ತಗಲುವ ವೆಚ್ಚವನ್ನು ದೇವಸ್ಥಾನದ ನಿಶ್ಚಿತ ನಿಧಿ ಅಥವಾ ಠೇವಣಿಯಿಂದ ಬಳಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ. ಜತೆಗೆ ಕಳೆದ ಅ.31ರಂದು ಸಿಎಂ, ಮುಜರಾಯಿ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ‘ನಿಶ್ಚಿತ ಠೇವಣಿ ಬಳಸಿಯೇ ಎಲ್ಲವನ್ನೂ ನಿಭಾಯಿಸಬೇಕು. ವಿಶೇಷ ಅನುದಾನ ಕೇಳುವಂತಿಲ್ಲ’ ಎಂದು ಮೌಖಿಕ ಸೂಚನೆ ಹೊರಡಿಸಿದ್ದಾರೆ ಎನ್ನಲಾಗಿದೆ.
55 ಸಾವಿರ ರೂ. ವ್ಯಯ:ಸಾಮೂಹಿಕ ಮದುವೆಗೆ ನೋಂದಾಯಿಸಿಕೊಳ್ಳುವ ಒಂದು ಜೋಡಿಗೆ 55 ಸಾವಿರ ರೂ.ವೆಚ್ಚ ಮಾಡಬೇಕು. ವಧುವಿಗೆ 8 ಗ್ರಾಂ ಚಿನ್ನದ ತಾಳಿ, 2 ಗುಂಡಿಗಾಗಿ 40 ಸಾವಿರ ರೂ., ಸೀರೆ, ಕುಪ್ಪಸ, ಹೂವಿನ ಹಾರಕ್ಕೆ 10 ಸಾವಿರ ರೂ., ವರನಿಗೆ ಹೂವಿನ ಹಾರ, ಪಂಚೆ, ಶರ್ಟ್ ಖರೀದಿಗಾಗಿ 5 ಸಾವಿರ ರೂ. ನೀಡಬೇಕು ಎಂಬ ಸೂಚನೆಯಿದೆ. ಇದು ಉತ್ತಮ ವಿಚಾರವೇ ಆದರೂ, ಇದಕ್ಕೆ ತಗಲುವ ವೆಚ್ಚವನ್ನು ದೇವ ಸ್ಥಾನದ ಠೇವಣಿಯಿಂದಲೇ ಭರಿಸಬೇಕೆಂಬ ಆದೇಶಕ್ಕೆ ಕೆಲ ಟ್ರಸ್ಟ್, ಮಂಡಳಿಗಳ ಆಕ್ಷೇಪವಿದೆ.
ಕೆಲ ಪ್ರಶ್ನೆಗಳಿಗಿಲ್ಲ ಉತ್ತರ:ಭಕ್ತರಿಗೆ ಸೌಕರ್ಯ ಒದಗಿಸಲು, ಅಭಿವೃದ್ಧಿ ಸೇರಿ ತುರ್ತು ಸಂದರ್ಭಗಳಲ್ಲಿ ಅನುದಾನ ಬಳಸಿಕೊಳ್ಳಲೆಂದು ದೇವಸ್ಥಾನಗಳು ನಿಶ್ಚಿತ ಠೇವಣಿ ಹೊಂದಿರುತ್ತವೆ. ಈಗ ಇದೇ ಠೇವಣಿಯನ್ನು ಮದುವೆಗೆ ಬಳಸಿದರೆ ಏನು ಪ್ರಯೋಜನ? ಹಣ ಖಾಲಿಯಾದರೆ ಮುಂದಿನ ಅಭಿವೃದ್ಧಿ ಹೇಗೆ ಸಾಧ್ಯ? ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿಯಾದರೆ ಹಣ ಹೊಂದಿಸುವುದು ಹೇಗೆ? ನಿಶ್ಚಿತ ಠೇವಣಿ ಖಾಲಿಯಾದರೆ ದೇವಸ್ಥಾನಕ್ಕೆ ಅನುದಾನ ಕೊಡುವವರು ಯಾರು ಎಂಬ ಪ್ರಶ್ನೆಗಳು ಎದುರಾಗಿವೆ.
ಕಾಲಕಾಲಕ್ಕೆ ಬರುವ ಸರ್ಕಾರದ ಆದೇಶ, ಸೂಚನೆ ಪಾಲಿಸಲೇಬೇಕು. ಸಾಮೂಹಿಕ ಮದುವೆಗೆ ದೇವಸ್ಥಾನಗಳ ನಿಶ್ಚಿತ ಠೇವಣಿ ಹಣ ಬಳಕೆ ಅನಿವಾರ್ಯ.
| ಹೆಸರು ಹೇಳಲಿಚ್ಛಿಸದ ಧಾರ್ವಿುಕ ದತ್ತಿ ನಿಯೋಜಿತ ಅಧಿಕಾರಿ
| ವೆಂಕಟೇಶ ಹೂಗಾರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
