ಬೆಂಗಳೂರು:ಆಶ್ರಯ ಮನೆ ಸೇರಿ 10 ಲಕ್ಷ ರೂ. ಒಳಗೆ ಮನೆ ನಿರ್ಮಿಸುವವರಿಗಾಗಿ ಉಚಿತ ಮರಳು ನೀಡುವ ನೀತಿ ಜಾರಿಗೆ ಸರ್ಕಾರ ಸಿದ್ಧತೆ ನಡೆಸಿದ್ದು, ಶೀಘ್ರದಲ್ಲಿ ಅದನ್ನು ಪ್ರಕಟಿಸಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆ ಮರಳು ದಂಧೆ ತಡೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಜೆಡಿಎಸ್ ಶಾಸಕ ಸಿ.ಎನ್. ಬಾಲಕೃಷ್ಣ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.
ರಾಜ್ಯಲ್ಲಿ 193 ಮರಳು ನಿಕ್ಷೇಪ ಗುರುತಿಸಿ, 87 ಬ್ಲಾಕ್‌ಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಎತ್ತಿನ ಗಾಡಿಯ ಮೂಲಕ ಮರಳು ಸಾಗಣೆಗೆ ಯಾವುದೇ ನಿರ್ಬಂಧವಿಲ್ಲ. ಅಲ್ಲದೆ, ಮರಳು ಪೂರೈಕೆಗೆ ಸಂಬಂಧಿಸಿದಂತೆ ಪಾಸ್‌ಗಳನ್ನು ವಿತರಿಸಲಾಗಿದೆ. ರಾಜ್ಯ ಮಿನರಲ್ಸ್ ಕಾರ್ಪೋರೇಷನ್ ಮತ್ತು ಹಟ್ಟಿ ಚಿನ್ನದ ಗಣಿ ನಿಯಮಿತಕ್ಕೆ ಮರಳು ಪೂರೈಕೆಗೆ ಅನುಮತಿಸಲಾಗಿದೆ. ಮರಳು ಪೂರೈಕೆಯಿಂದಾಗಿ ರಾಜ್ಯಕ್ಕೆ ವಾರ್ಷಿಕ 154 ಕೋಟಿ ರೂ. ಆದಾಯ ಬರುತ್ತಿದೆ. ಈ ಎಲ್ಲದರ ನಡುವೆ ಒಂದು ಪಾಸ್ ಪಡೆದು ಹೆಚ್ಚಿನ ಮರಳು ಸಾಗಣೆ, ಮಣ್ಣನ್ನು ಫಿಲ್ಟರ್ ಮಾಡಿ ಮರಳು ಸಾಗಣೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ:100 ಅಡಿ ಸುನಾಮಿ ಅಲೆಗೆ ಕೊಚ್ಚಿಹೋಗಿದ್ದ ಪೊಲೀಸ್​ ಅಧಿಕಾರಿ 17 ವರ್ಷಗಳ ಬಳಿಕ ಜೀವಂತ ಪತ್ತೆ!
ಉಚಿತ ಮರಳು ನೀತಿ: ರಾಜ್ಯದಲ್ಲಿ ಮರಳಿನ ಕೊರತೆಯಿಲ್ಲ. ಆದರೂ, ಸಣ್ಣ ಪ್ರಮಾಣದ ಮನೆಗಳ ನಿರ್ಮಾಣಕ್ಕೆ ಮರಳಿನ ಅಭಾವವುಂಟಾಗುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಉಚಿತ ಮರಳು ನೀತಿ ಜಾರಿಗೆ ತರಲು ಸಿದ್ಧತೆ ನಡೆಸಲಾಗಿದೆ. ಆಶ್ರಯ ಮನೆ ಸೇರಿ 10 ಲಕ್ಷಕ್ಕಿಂತ ಕಡಿಮೆ ವೆಚ್ಚದ ಮನೆ ನಿರ್ಮಾಣ ಮಾಡುವವರಿಗೆ 100ರಿಂದ 200 ರೂ.ಗೆ 1 ಟನ್ ಮರಳು ಪೂರೈಕೆ ಮಾಡಲಾಗುತ್ತದೆ. ಅದೇ ರೀತಿ ಸರ್ಕಾರಿ ಕಟ್ಟಡಗಳ ನಿರ್ಮಾಣ, ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ರಾಜಧನ ಪಡೆಯಲಾಗುವುದು. ಜಿಲ್ಲೆ ಮತ್ತು ತಾಲೂಕು ಆಡಳಿತದ ಶೇ. 50 ಸಮಯ ಮರಳು ಪೂರೈಕೆ ಪಾಸ್ ನೀಡುವುದರಲ್ಲಿ ವ್ಯರ್ಥವಾಗುತ್ತಿದೆ. ಅದನ್ನು ತಪ್ಪಿಸುವ ಅಂಶಗಳು ಹೊಸ ನೀತಿಯಲ್ಲಿರಲಿದೆ ಎಂದರು.
ಅದಕ್ಕೂ ಮುನ್ನ ಮಾತನಾಡಿದ ಸಿ.ಎನ್. ಬಾಲಕೃಷ್ಣ, ಹಾಸನ ಜಿಲ್ಲೆಯಲ್ಲಿ ಮರಳಿನ ಅಭಾವವಿಲ್ಲ ಎಂದು ಸಚಿವರು ಹೇಳುತ್ತಿದ್ದಾರೆ. ಆದರೆ, ಮರಳಿನ ಕೊರತೆ ಉಂಟಾಗಿ ಫಿಲ್ಟರ್ ಮರಳಿನ ಪೂರೈಕೆ ಹೆಚ್ಚಾಗಿದೆ. ಅದನ್ನು ತಪ್ಪಿಸುವ ಅಗತ್ಯವಿದೆ ಎಂದು ಆಗ್ರಹಿಸಿದರು.
ಅದಕ್ಕೆ ಧ್ವನಿಗೂಡಿಸಿದ ಜೆಡಿಎಸ್‌ನ ಎಚ್.ಡಿ.ರೇವಣ್ಣ, ಫಿಲ್ಟರ್ ಮರಳಿನಿಂದ ಕಟ್ಟಡಗಳ ಗುಣಮಟ್ಟ ಹಾಳಾಗುತ್ತಿದೆ. ಅದನ್ನು ತಡೆಯಲು ಮರಳು ಮತ್ತು ಎಂಸ್ಯಾಂಡ್ ಬಳಕೆ ಹೆಚ್ಚಿಸಬೇಕು. ಅದಕ್ಕಾಗಿ ಕ್ರಷರ್‌ಗಳ ಸರ್ವೇ ಮಾಡಿ, ಅವುಗಳಿಂದ ಎಂ ಸ್ಯಾಂಡ್ ಪಡೆಯಲು ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.
ವಿಧಾನಸಭೆಯಲ್ಲಿ ಹಾಸ್ಯದ ಹೊಳೆ ಹರಿಸಿದ ಸಿದ್ದು ಬಟ್ಟೆ!

ಕೃಷಿ ಭೂಮಿ ಪರಿವರ್ತನೆಗೆ ನೂತನ ನಿಯಮ ಜಾರಿಗೊಳಿಸಲು ಮುಂದಾದ ರಾಜ್ಯ ಸರ್ಕಾರ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:ten − nine =
Remember me
