ಬೆಂಗಳೂರು: ಕರೊನಾ ವೈರಸ್ ಸೋಂಕಿಗೆ ಸಂಬಂಧಿಸಿದ ಸಂದೇಹ ನಿವಾರಣೆ ಹಾಗೂ ಸಲಹೆ ಪಡೆಯುವುದಕ್ಕಾಗಿ ವೈದ್ಯರನ್ನು ನೇರವಾಗಿ ಸಂರ್ಪಸಿ ಸಂವಹನ ನಡೆಸುವ ಉಚಿತ ಕನ್ಸಲ್ಟೇಷನ್ ಯೋಜನೆ ಜಾರಿಗೆ ಸರ್ಕಾರ ನಿರ್ಧರಿಸಿದೆ.
ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಬುಧವಾರ ಯೋಜನೆಗೆ ಚಾಲನೆ ನೀಡಲಿದ್ದಾರೆ. ಅವರು ಪ್ರತಿನಿಧಿಸುತ್ತಿರುವ ಮಲ್ಲೇಶ್ವರ ಕ್ಷೇತ್ರದಲ್ಲಿ ಪ್ರಾಯೋಗಿಕವಾಗಿ ಆರಂಭವಾಗಲಿದ್ದು, ನಂತರ ಹಂತಹಂತವಾಗಿ ರಾಜ್ಯಾದ್ಯಂತ ವಿಸ್ತರಿಸುವ ಉದ್ದೇಶ ವಿದೆ. ‘ಟೆಲಿ ಮೆಡಿಸನ್’ ಅಂದರೆ ದೂರವಾಣಿ ಮೂಲಕ ವೈದ್ಯರ ನಡುವೆ ಪರಸ್ಪರ ಮಾಹಿತಿ ವಿನಿಮಯಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಆದರೆ, ವೈದ್ಯರ ಜತೆ ಜನಸಾಮಾನ್ಯರು ದೂರವಾಣಿ ಸಮಾಲೋಚನೆ ನಡೆಸಲು ಅವಕಾಶ ಇರಲಿಲ್ಲ.
ಈ ಸಂಬಂಧ ಕಾನೂನು ತಿದ್ದುಪಡಿ ತಂದು ಆದೇಶ ಹೊರಡಿಸಲಾಗಿದ್ದು, ವೈದ್ಯರ ಜತೆ ಜನರೇ ನೇರವಾಗಿ ಮಾತನಾಡಲು ಅವಕಾಶ ಕಲ್ಪಿಸಲಾಗಿದೆ. ಕರೊನಾ ವೈರಸ್ ಸೋಂಕು ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಜನ ‘ಟೆಲಿ ಕನ್ಸಲ್ಟೇಷನ್’ ಪ್ರಯೋಜನ ಪಡೆಯಬಹುದಾಗಿದೆ ಎಂದು ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ನಿರ್ವಹಣೆ ಹೀಗಿರಲಿದೆ: ಕರೊನಾ ಸೋಂಕಿನ ಲಕ್ಷಣಗಳು, ಸಂಬಂಧಿತ ಆರೋಗ್ಯ ಸಮಸ್ಯೆಗಳು ಹಾಗೂ ಈ ಕುರಿತ ಯಾವುದೇ ಸಂದೇಹ ಪರಿಹರಿಸಿಕೊಳ್ಳಲು ಸಾರ್ವಜನಿಕರು ನುರಿತ ವೈದ್ಯರ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಬಹುದು. ರೋಗ ಲಕ್ಷಣಗಳನ್ನು ಬರೆದುಕೊಳ್ಳುವ ವೈದ್ಯರು ಸೂಕ್ತ ಸಲಹೆ ಸೂಚನೆ ನೀಡುವರು. ಅಗತ್ಯವಿದ್ದಲ್ಲಿ ಕರೆಯನ್ನು ತಜ್ಞ ವೈದ್ಯರಿಗೆ ವರ್ಗಾಯಿಸಿ ಹೆಚ್ಚಿನ ಮಾಹಿತಿ ಒದಗಿಸಲಿದ್ದಾರೆ. ಪೋರ್ಟಿಯಾ ಮೆಡಿಕಲ್ ಸಂಸ್ಥೆ ಈ ಸೇವೆ ಒದಗಿಸಲಿದೆ.ಬೆಳಗ್ಗೆ 8 ರಿಂದ ರಾತ್ರಿ 8ರವರೆಗೆ ಕರೆ ಮಾಡಿ: ವೈದ್ಯರ ತಂಡ ಬೆಳಗ್ಗೆ 8 ರಿಂದ ರಾತ್ರಿ 8ರವರೆಗೆ ಸಾರ್ವಜನಿಕರಿಂದ ಕರೆ ಸ್ವೀಕರಿಸಿ ಸೂಕ್ತ ಮಾರ್ಗದರ್ಶನ ನೀಡಲಿದೆ. ಜತೆಗೆ, ವೆಬ್​ಸೈಟ್​ಗೆ ಭೇಟಿ ನೀಡಿ
ಅಲ್ಲಿಂದಲೂ ವೈದ್ಯರ ಸಲಹೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ದೂರವಾಣಿ ಸಂಖ್ಯೆ: 080-66744788.
ವೆಬ್​ಸೈಟ್:https://t.co/LqPmTkiEnY
Keeping in mind the well-being of the state's citizens, we have worked with@PorteaMedicalto provide free Tele-Consultation services by experienced Doctors. This service will begin for residents of Malleshwaram & will be rolled out across the state soon.https://t.co/LqPmTkiEnYpic.twitter.com/VnCWprlIcD
— Dr. Ashwathnarayan C. N. (@drashwathcn)March 30, 2020

ಮಾಸ್ಕ್ ಧರಿಸುವುದು ಕಡ್ಡಾಯವಲ್ಲ; ಆರೋಗ್ಯವಂತರು ಧರಿಸುವ ಅಗತ್ಯವಿಲ್ಲ ಎಂದ ಆರೋಗ್ಯ ಇಲಾಖೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:15 − 11 =
Remember me
