ಗದಗ:ಕಾಂಗ್ರೆಸ್​ನ ಐದು ಗ್ಯಾರಂಟಿಗಳ ಪೈಕಿ ಮೊದಲನೆಯದಾಗಿ ಜಾರಿಗೆ ಬಂದಿರುವ, ಮಹಿಳೆಯರಿಗೆ ಸರ್ಕಾರಿ ಬಸ್​ಗಳಲ್ಲಿ ಉಚಿತ ಪ್ರಯಾಣದ ಅವಕಾಶ ಕಲ್ಪಿಸುವ ‘ಶಕ್ತಿ’ ಯೋಜನೆ ಇದೀಗ ರಾಜ್ಯಾದ್ಯಂತ ನಕಾರಾತ್ಮಕ ಸಂಗತಿಗಳಿಂದಾಗಿಯೂ ಭಾರಿ ಸುದ್ದಿಯಲ್ಲಿದೆ.
ಇದನ್ನೂ ಓದಿ:ಫ್ರೀ ಅಂತ ಬಂದ ಮಹಿಳೆಯರು ವಾಪಸ್ ಹೋಗಲು ಬಸ್ ಇಲ್ಲದೆ ಪರದಾಟ!
ಉಚಿತ ಪ್ರಯಾಣದ ಅವಕಾಶದಿಂದ ಬಸ್​ಗಳಲ್ಲಿ ವಿಪರೀತ ನೂಕುನುಗ್ಗಲು ಸೃಷ್ಟಿಯಾಗಿ ಬಸ್​ ಡೋರ್​ ಕಿತ್ತುಹೋಗಿದ್ದ ಪ್ರಕರಣ ನಡೆದಿದ್ದರೆ, ಬಸ್​ನಲ್ಲಿ ಉಚಿತ ಪ್ರಯಾಣಕ್ಕೆ ಬಂದಿದ್ದ ಮಹಿಳೆಯರು ಬಸ್​ನಲ್ಲೇ ಹೊಡೆದಾಟ ನಡೆಸಿದ ವಿಡಿಯೋ ಕೂಡ ಇಂದು ವೈರಲ್ ಆಗಿದೆ.
ಇದನ್ನೂ ಓದಿ:ಮಹಿಳೆಯರ ‘ಶಕ್ತಿ’ಗೆ ಕಿತ್ತು ಹೋಯ್ತು ಇನ್ನೊಂದು ಬಸ್ ಡೋರ್!
ಮಹಿಳೆಯರೇ ಬಸ್​ನಲ್ಲಿ ತುಂಬಿಕೊಳ್ಳಲಾರಂಭಿಸಿದ್ದರಿಂದ ಶಾಲಾ ಮಕ್ಕಳ ಪ್ರಯಾಣಕ್ಕೂ ಅಡ್ಡಿಯಾದ ಪ್ರಕರಣಗಳು ವರದಿಯಾಗಿವೆ. ಮಹಿಳೆಯರ ಉಚಿತ ಪ್ರಯಾಣದ ಬಸ್​ಗಳಲ್ಲಿ ಪುರುಷರಿಗೆ ಶೇ.50 ಆಸನಗಳ ಮೀಸಲು ಘೋಷಿಸಿದ್ದರೂ ಸುಲಭವಾಗಿ ಮೀಸಲು ಸೀಟು ಬಿಟ್ಟುಕೊಡದ ಮಹಿಳೆಯರಿಂದಾಗಿ ಪ್ರಯಾಣಿಕರ ನಡುವೆ ಬಸ್​ನಲ್ಲಿ ವಾಗ್ವಾದ ನಡೆಯುತ್ತಿದೆ. ‘ಪುರುಷರಿಗಾಗಿ’ ಎಂದು ನಿಗಮದವರು ಬರೆಸದ ಕಾರಣ ಸೀಟು ಬಿಟ್ಟು ಕೊಡಿ ಎಂದು ಕೇಳಲು ಪುರುಷರಿಗೆ ಕಷ್ಟವಾಗುತ್ತಿದೆ. ಕೇಳಿದರೆ ‘ಪುರುಷರಿಗಾಗಿ’ ಅಂತ ಎಲ್ಲಿದೆ ಎಂಬ ಪ್ರಶ್ನೆಯೂ ಎದುರಾಗುತ್ತಿದೆ.
ಇದನ್ನೂ ಓದಿ:ಪುರುಷರ ಪ್ರಯಾಣ ಪ್ರಯಾಸ, ಮೀಸಲು ಆಸನ ಕೇಳದ ಸ್ಥಿತಿ!
ಇವೆಲ್ಲದರ ಜತೆಗೆ ಈಗ ಪುರುಷ ಪ್ರಯಾಣಿಕರಿಗೆ ಬಸ್​ಗೆ ಹತ್ತುವುದು ಕೂಡ ಕಷ್ಟವಾಗಿ ಪರಿಣಮಿಸಿದೆ. ಬಸ್​ ಬರುತ್ತಿದ್ದಂತೆ ಮಹಿಳೆಯರು ಡೋರ್ ಬಳಿ ಮುಗಿಬೀಳುವುದರಿಂದ ಪುರುಷರು ಬಸ್​ಗೆ ಪ್ರವೇಶಿಸುವುದು ಕಷ್ಟಕರವಾಗಿ ಪರಿಣಮಿಸಿದೆ. ಇದೇ ಕಾರಣಕ್ಕೆ ಇಂದು ಗದಗದಲ್ಲಿ ಪುರುಷ ಪ್ರಯಾಣಿಕರು ಕಿಟಕಿ ಮೂಲಕ ಬಸ್​ಗೆ ಪ್ರವೇಶಿಸಬೇಕಾದ ಸನ್ನಿವೇಶ ಎದುರಾಗಿತ್ತು. ಡೋರ್ ಬಳಿ ಜಮಾಯಿಸಿದ ಮಹಿಳೆಯರನ್ನು ತಳ್ಳಿಕೊಂಡು ಒಳಹೋಗುವುದು ಇನ್ನೊಂದು ರೀತಿಯ ಸಮಸ್ಯೆಗೆ ಆಸ್ಪದ ನೀಡುವ ಸಾಧ್ಯತೆ ಇರುವುದರಿಂದ ಪುರುಷರು ಹೀಗೆ ಕಿಟಕಿ ಮೂಲಕ ಹತ್ತಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಕೆಲ ಪ್ರಯಾಣಿಕರು ಅಲವತ್ತುಕೊಂಡಿದ್ದಾರೆ.
ಲೇಡಿ ಕಾನ್​​ಸ್ಟೆಬಲ್​ ಹೃದಯಾಘಾತದಿಂದ ಸಾವು; 2021ರಲ್ಲಿ ಪತಿ ಕರೊನಾಗೆ ಬಲಿ, ಈಗ ಒಂದೂವರೆ ವರ್ಷದ ಮಗು ಅನಾಥ

ಅನಗತ್ಯವಾಗಿ ಮಹಾಪ್ರಾಣ ಪ್ರಯೋಗಿಸಬೇಡಿ..: ನಟ ಜಗ್ಗೇಶ್​ಗೆ ‘ಮೇಷ್ಟ್ರ’ ಕನ್ನಡ ಪಾಠ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
