ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳ ಪೈಕಿ ಒಂದಾಗಿರುವ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸುವ ಶಕ್ತಿ ಯೋಜನೆಯನ್ನು ರಾಜ್ಯದ ಮಹಿಳೆಯರು ಶಕ್ತಿ ಮೀರಿ ಬಳಸಿಕೊಳ್ಳುತ್ತಿದ್ದು, ಈಗಾಗಲೇ ಕೆಲವೆಡೆ ಅವಾಂತರಗಳು ಆಗಿಹೋಗಿವೆ.
ಇವೆಲ್ಲದರ ನಡುವೆಯೇ ‘ಉಚಿತ ಪ್ರಯಾಣ ಅವಕಾಶ ಹೆಚ್ಚು ದಿನ ಇರಲ್ಲ, ಎಲ್ಲೆಲ್ಲಿಗೆ ಟೂರ್ ಹೋಗಬೇಕೋ ಬೇಗ ಹೋಗಿ ಬನ್ನಿ’ ಎಂಬ ಹೇಳಿಕೆಯೊಂದು ಹೊರಬಿದ್ದಿದೆ. ಮಾಜಿ ಸಚಿವ ಆರ್.ಅಶೋಕ್ ಹೀಗೊಂದು ಹೇಳಿಕೆ ನೀಡುವ ಮೂಲಕ ಆಡಳಿತಾರೂಢ ಕಾಂಗ್ರೆಸ್​ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಇದನ್ನೂ ಓದಿ:ಅವನಲ್ಲಿ.. ಇವಳಿಲ್ಲಿ..; ಇಬ್ಬರೂ ಸತ್ತ ಮೇಲೆ ಬಹಿರಂಗವಾಯ್ತು ಪ್ರೇಮ!
ಬಸ್​ನಲ್ಲಿ ಉಚಿತ ಪ್ರಯಾಣ ಅವಕಾಶ ಹೆಚ್ಚು ದಿನ ಇರುವುದಿಲ್ಲ. ಎಲ್ಲೆಲ್ಲಿಗೆ ಟೂರ್ ಹೋಗಬೇಕೋ ಬೇಗ ಹೋಗಿಬನ್ನಿ. ಈ ಯೋಜನೆಯನ್ನು ಬೇಗ ಬಳಸಿಕೊಳ್ಳಿ, ಆಮೇಲೆ ನಿಮಗೆ ಅವಕಾಶ ಸಿಗುವುದಿಲ್ಲ. ಖಜಾನೆ ಖಾಲಿಯಾಗುತ್ತಿದೆ, ಇನ್ನೊಂದು ವರ್ಷದಲ್ಲಿ ರಾಜ್ಯ ದಿವಾಳಿಯಾಗುತ್ತದೆ. ಆಗ ಎಲ್ಲ ಯೋಜನೆಗಳನ್ನು ಹಿಂದಕ್ಕೆ ಪಡೆಯುತ್ತಾರೆ. ಬೇಗ ನಿಮ್ಮ ಎಲ್ಲ ಹರಕೆಗಳನ್ನು ತೀರಿಸಿಕೊಳ್ಳಿ ಎಂದು ಅವರು ರಾಜ್ಯದ ಮಹಿಳೆಯರನ್ನು ಉದ್ದೇಶಿಸಿ ಹೇಳಿದ್ದಾರೆ.
ಬಸ್​ ಡೋರೇ ಕಿತ್ತು ಹೋಯ್ತು!; ಉಚಿತ ಪ್ರಯಾಣಕ್ಕಾಗಿ ಮಹಿಳೆಯರ ‘ಶಕ್ತಿ’ ಪ್ರಯೋಗ

ಮಠದ ಆವರಣದೊಳಗಿದ್ದ 15ಕ್ಕೂ ಹೆಚ್ಚು ಸಮಾಧಿಗಳೇ ಧ್ವಂಸ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 − one =
Remember me
