ಕೋವಿಡ್ ಎರಡನೇ ಅಲೆ ಗರ್ಭಿಣಿಯರ ಮೇಲೆ ಗಂಭೀರ ಸ್ವರೂಪದ ಪರಿಣಾಮ ಬೀರುತ್ತಿದ್ದು, ಅವಧಿಪೂರ್ವ ಮಕ್ಕಳ ಜನನದ ಜತೆಗೆ ತಾಯಂದಿರ ಮರಣ ಪ್ರಮಾಣವೂ ಹೆಚ್ಚಿದೆ. ಇದರಿಂದಾಗಿ ನವಜಾತ ಶಿಶುಗಳು ಹುಟ್ಟುತ್ತಲೇ ತಾಯಿಯಿಂದ ಬೇರ್ಪಡುತ್ತಿವೆ. ಪ್ರಸ್ತುತ ಕೋವಿಡ್ ಸೋಂಕಿಗೆ ಒಳಗಾಗುತ್ತಿರುವ ಗರ್ಭಿಣಿಯರು ಹಾಗೂ ಮಗುವನ್ನು ಉಳಿಸಲು ವೈದ್ಯರು ಅವಧಿಪೂರ್ವ ಹೆರಿಗೆ ಮಾಡುತ್ತಿದ್ದಾರೆ. ಇಲ್ಲವಾದಲ್ಲಿ ತಾಯಿ ಮತ್ತು ಮಗು ಇಬ್ಬರನ್ನೂ ಉಳಿಸುವುದು ಕಷ್ಟ ಎನ್ನುತ್ತಾರೆ ವೈದ್ಯರು.
ಬೆಂಗಳೂರಿನ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಅಡಿಯಲ್ಲಿ ಬರುವ ಘೋಷಾ ಆಸ್ಪತ್ರೆ ಒಂದರಲ್ಲೇ ಕಳೆದ ಒಂದು ತಿಂಗಳಲ್ಲಿ ಸೋಂಕಿಗೆ ಒಳಗಾಗಿರುವ 330ಕ್ಕೂ ಹೆಚ್ಚು ಗರ್ಭಿಣಿಯರು ದಾಖಲಾಗಿದ್ದಾರೆ. ಈ ಪೈಕಿ 72 ಸಾಮಾನ್ಯ, 87 ಸಿಸೇರಿಯನ್ ಹಾಗೂ 20 ಮಂದಿಗೆ ಅವಧಿ ಪೂರ್ವ ಪ್ರಸವ ಮಾಡಲಾಗಿದೆ. ಇದರಲ್ಲಿ ಆರು ಮಕ್ಕಳು ಹುಟ್ಟುತ್ತಲೇ ಕೋವಿಡ್ ಸೋಂಕಿಗೆ ಒಳಗಾಗಿವೆ. ಆ ಶಿಶುಗಳನ್ನು ಮಕ್ಕಳ ತೀವ್ರ ನಿಗಾ ಘಟಕದಲ್ಲಿಟ್ಟು (ಎನ್​ಐಸಿಯು) ಚಿಕಿತ್ಸೆ ನೀಡಲಾಗುತ್ತಿದೆ. ಉಳಿದಂತೆ ಹೆರಿಗೆಯಾದ 3 ದಿನಗಳ ನಂತರ ತಾಯಿ ಮತ್ತು ಮಗುವಿನ ಸ್ವಾ್ಯಬ್ ಪರೀಕ್ಷೆ ಮಾಡಿಸಿ ಸೋಂಕು ಇಲ್ಲದಿರುವುದನ್ನು ಖಚಿತ ಪಡಿಸಿಕೊಂಡು ನಂತರ ಮಗುವನ್ನು ತಾಯಿಯ ಬಳಿಗೆ ನೀಡಲಾಗುತ್ತದೆ ಎನ್ನು ತ್ತಾರೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಡಿ. ತುಳಸಿ ದೇವಿ.
ಕಾಡುವ ಉಸಿರಾಟ ಸಮಸ್ಯೆ
ಕೋವಿಡ್ ಸೋಂಕಿಗೆ ಒಳಗಾದ ಗರ್ಭಿಣಿಯರಲ್ಲಿ ಕೆಲವರು ಗಂಭೀರ ಉಸಿರಾಟದ ಸಮಸ್ಯೆ ಹೊಂದಿರುತ್ತಾರೆ. ಅಂತಹ ಸಂದರ್ಭದಲ್ಲಿ ಅಂದರೆ ಹೊಟ್ಟೆಯಲ್ಲಿ ಮಗು ಇರುವಾಗಲೇ ತಾಯಿಗೆ ವೆಂಟಿಲೇಟರ್ ಅಳವಡಿಸುವುದು ಕಷ್ಟ. ಹಾಗಾಗಿ ಇಂತಹ ಪ್ರಕರಣಗಳಲ್ಲಿ ಅನಿವಾರ್ಯವಾಗಿ ಅವಧಿಪೂರ್ವ ಹೆರಿಗೆ ಮಾಡಿಸಿ, ನಂತರ ತಾಯಿಗೆ ಕೋವಿಡ್ ಚಿಕಿತ್ಸೆ ನೀಡಲಾಗುತ್ತಿದೆ. ತಾಯಿ ಗುಣ ಹೊಂದುವವರೆಗೂ ಮಗುವನ್ನು ಮಕ್ಕಳ ತುರ್ತು ನಿಗಾ ಘಟಕದಲ್ಲಿ ಆರೈಕೆ ಮಾಡಲಾಗುತ್ತದೆ ಎನ್ನುತ್ತಾರೆ ಆಸ್ಪತ್ರೆಯ ಕೋವಿಡ್ ವಿಭಾಗದ ನೋಡಲ್ ಅಧಿಕಾರಿ ಡಾ. ವೆಂಕಟ ರೆಡ್ಡಿ.
ಹೊಟ್ಟೆಯಲ್ಲೇ ಮಗು ಸಾವು
ಕೋವಿಡ್ ಎರಡನೇ ಅಲೆ ವೇಳೆ ಸೋಂಕಿತ ಗರ್ಭಿಣಿಯರ ಆರೋಗ್ಯದಲ್ಲಿ ತೀವ್ರ ವ್ಯತ್ಯಾಸ ಕಂಡು ಬರುತ್ತಿರುವುದು ಹುಟ್ಟುವ ಮಕ್ಕಳ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ. ಸೋಂಕಿತ ಗರ್ಭಿಣಿಯರಿಗೆ ತೀವ್ರ ಜ್ವರ, ಉಸಿರಾಟದ ಸಮಸ್ಯೆ ಕಾಣಿಸಿಕೊಂಡರೆ, ಅಂತಹವರಲ್ಲಿ ಬಹುತೇಕರಿಗೆ ಹೊಟ್ಟೆಯಲ್ಲೇ ಮಗು ಸಾವನ್ನಪು್ಪತ್ತಿವೆ ಎನ್ನುತ್ತಾರೆ ದಾವಣಗೆರೆಯ ಜೆಜೆಎಂಎಂಸಿಯ ಸ್ತ್ರೀರೋಗ ತಜ್ಞೆ ಡಾ. ಶುಕ್ಲ ಶೆಟ್ಟಿ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 3 =
Remember me
