ಮೈಸೂರು:ಸಂಸದೆ ಸುಮಲತಾ ಅವರಿಗೆ ಗುದ್ದಲಿ ಪೂಜೆಗೂ ಅವಕಾಶ ನೀಡದೆ ಶಾಸಕ ಸಾ.ರಾ. ಮಹೇಶ್ ಅವರ ಬೆಂಬಲಿಗರು ಅಡ್ಡಿಪಡಿಸಿದ್ದಲ್ಲದೆ, ಒಮ್ಮೆ ಸಂಘರ್ಷ ತಾರಕಕ್ಕೇರಿದ ಪ್ರಸಂಗವೂ ನಡೆಯಿತು.
ಮೈಸೂರು ಜಿಲ್ಲೆ ಕೆ.ಆರ್‌. ನಗರ ತಾಲೂಕು ಮುಂಜನಹಳ್ಳಿಯಲ್ಲಿ ಕಾಮಗಾರಿಯೊಂದರ ಗುದ್ದಲಿ ಪೂಜೆಗೆ ಸಂಸದೆ ಸುಮಲತಾ ಬಂದಿದ್ದಾಗ ಈ ಪ್ರಕರಣ ನಡೆಯಿತು. ಶಾಸಕ ಸಾ.ರಾ. ಮಹೇಶ್​ ಅವರನ್ನು ಬಿಟ್ಟು ಕಾಮಗಾರಿಗೆ ಚಾಲನೆ ನೀಡುತ್ತಿದ್ದಾರೆ ಎಂಬ ಹಿನ್ನೆಲೆಯಲ್ಲಿ ಈ ಗಲಾಟೆ ನಡೆಯಿತು.
ಗುದ್ದಲಿ ಪೂಜೆಗೆ ಬಂದಿದ್ದ ಮಂಡ್ಯ ಸಂಸದೆಗೆ ಜೆಡಿಎಸ್ ಕಾರ್ಯಕರ್ತರು ತಡೆಯೊಡ್ಡಿದರು. ಗುದ್ದಲಿ ಪೂಜೆ ನಡೆಸಲೂ ಬಿಡದೆ ಗಲಾಟೆ ಮಾಡಿದರು. ಈ ಸಂದರ್ಭದಲ್ಲಿ ಶಾಸಕ-ಸಂಸದರ ಬೆಂಬಲಿಗರು ಪರಸ್ಪರ ಧಿಕ್ಕಾರ ಕೂಗಿದರು. ಶಾಸಕರ ಬೆಂಬಲಿಗರು ಶಾಮಿಯಾನ ಕಿತ್ತು ಹಾಕಿ ಗಲಾಟೆ ಮಾಡಿದರು. ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸುವ ಹಂತಕ್ಕೂ ತಲುಪಿತು.
ಆದರೆ ಸ್ಥಳೀಯ ಮಹಿಳೆಯರು ತಾವೇ ಖುದ್ದು ನಿಂತು ಸಂಸದೆ ಸುಮಲತಾ ಕೈಯಲ್ಲಿ ಗುದ್ದಲಿಪೂಜೆ ನಡೆಸಿದರು. ಈ ಸಂದರ್ಭದಲ್ಲಿ ಪೊಲೀಸರು ಮೂಕಪ್ರೇಕ್ಷಕರಂತೆ ನಿಂತು ನೋಡುವಂಥ ಪ್ರಸಂಗವೂ ಕಂಡುಬಂತು.
15 ಸಾವಿರ ಶಿಕ್ಷಕರ ನೇಮಕಾತಿಗೆ ಮೇನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ..

ಶಾಲಾ ಛಾವಣಿ ಪದರ ಕುಸಿತ, ಐವರು ವಿದ್ಯಾರ್ಥಿಗಳಿಗೆ ಗಾಯ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
