ಬೆಂಗಳೂರು:ಸ್ನೇಹಿತೆಯ ಮನೆಯಲ್ಲೇ ಚಿನ್ನಾಭರಣ ಕದ್ದು ಏನೂ ಗೊತ್ತಿಲ್ಲದಂತೆ ನಾಟಕವಾಡುತ್ತಿದ್ದ ಮಹಿಳೆಯನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆಂಗೇರಿ ನಿವಾಸಿ ಪಿ.ಜಿ. ಗೀತಾ (23) ಬಂಧಿತ ಆರೋಪಿ. ಈಕೆಯಿಂದ 9.84 ಲಕ್ಷ ರೂ. ಮೌಲ್ಯದ 216 ಗ್ರಾಂ ಚಿನ್ನಾಭರಣ, 231 ಗ್ರಾಂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಗುರುದರ್ಶನ ಬಡಾವಣೆ ನಿವಾಸಿ ಲಕ್ಷ್ಮೀ ಎಂಬುವವರ ಮನೆಯಲ್ಲಿ ಆ.16ರಂದು ಚಿನ್ನಾಭರಣ ಕಳವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ ತಿಳಿಸಿದ್ದಾರೆ.
ದೂರುದಾರರಾದ ಲಕ್ಷ್ಮೀ ಹಾಗೂ ಆರೋಪಿ ಗೀತಾ ಮೈಸೂರು ಮೂಲದವರು. ಅಕ್ಕಪಕ್ಕದ ಮನೆಯಲ್ಲಿ ನೆಲೆಸಿದ್ದ ಕಾರಣ ಕಳೆದ 10 ವರ್ಷಗಳಿಂದ ಆತ್ಮೀಯ ಸ್ನೇಹಿತರಾಗಿದ್ದರು. ಮದುವೆಯ ಬಳಿಕ ಇಬ್ಬರ ಕುಟುಂಬಗಳು ಬೆಂಗಳೂರಿಗೆ ಬಂದು ನೆಲೆಸಿದ್ದರು. ವಿಶೇಷ ಸಂದರ್ಭಗಳಲ್ಲಿ ಎರಡೂ ಕುಟುಂಬಗಳು ಪರಸ್ಪರ ಮನೆಗಳಲ್ಲಿ ಸೇರುತ್ತಿದ್ದರು. ಕಳೆದ ಆ.16ರಂದು ಆರೋಪಿ ಗೀತಾ ಶಾಪಿಂಗ್ ಮಾಡಲು ಕೆಂಗೇರಿಯಿಂದ ಸಿಟಿಗೆ ಬಂದಿದ್ದಳು. ಈ ವೇಳೆ ಲಕ್ಷ್ಮೀ ಸಹ ಜತೆಯಾಗಿದ್ದರು.
ಸಂಜೆಯಾದ್ದರಿಂದ ಲಕ್ಷ್ಮೀ, ಸ್ನೇಹಿತೆ ಗೀತಾಳನ್ನು ನಮ್ಮ ಮನೆಯಲ್ಲೇ ಉಳಿದು ಬೆಳಗ್ಗೆ ನಿಮ್ಮ ಮನೆಗೆ ತೆರಳುವಂತೆ ಹೇಳಿದ್ದರು. ಅದರಂತೆ ಆರೋಪಿ ಗೀತಾ, ಲಕ್ಷ್ಮೀ ಅವರ ಮನೆಯಲ್ಲಿ ಉಳಿದುಕೊಂಡಿದ್ದಳು. ಅಂದು ರಾತ್ರಿ ಆಭರಣಗಳ ಡಿಸೈನ್ ನೋಡುವುದಾಗಿ ಲಕ್ಷ್ಮೀ ಅವರ ಚಿನ್ನಾಭರಣ ಪಡೆದಿದ್ದ ಗೀತಾ, ಕೆಲ ಹೊತ್ತಿನ ಬಳಿಕ ಚಿನ್ನಾಭರಣ ವಾಪಸ್ ನೀಡಿದ್ದಳು. ಆ ಚಿನ್ನಾಭರಣಗಳನ್ನು ಲಕ್ಷ್ಮೀ ಒಂದು ಬಾಕ್ಸ್‌ನಲ್ಲಿ ಹಾಕಿ ರೂಮ್‌ನಲ್ಲಿ ಇರಿಸಿದ್ದರು. ಮಾರನೇ ದಿನ ಆರೋಪಿ ಗೀತಾ ಬೆಳಗ್ಗೆ ಎದ್ದು ತಮ್ಮ ಮನೆಗೆ ತೆರಳಿದ್ದಳು. ಒಂದೆರೆಡು ದಿನ ಬಿಟ್ಟು ಬಾಕ್ಸ್ ನೋಡಿದಾಗ ಚಿನ್ನಾಭರಣ ಇರಲಿಲ್ಲ. ಈ ವೇಳೆ ಆತಂಕಗೊಂಡ ಲಕ್ಷ್ಮೀ ಮನೆಯ ಸದಸ್ಯರು ಹಾಗೂ ಮನೆಗೆಲಸದವರನ್ನು ವಿಚಾರಿಸಿದ್ದರು. ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರು ಆಧರಿಸಿ ತನಿಖೆ ನಡೆಸಿ ಆರೋಪಿ ಗೀತಾಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಬಟ್ಟೆ ಬದಲಿಸುವ ನೆಪದಲ್ಲಿ ಕಳ್ಳತನ: ತನಿಖೆ ವೇಳೆ ಲಕ್ಷ್ಮೀ ಅವರ ಮನೆಗೆ ಯಾರೆಲ್ಲ ಬಂದಿದ್ದರು ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸಿದಾಗ ಗೀತಾಳ ಬಗ್ಗೆ ಮಾಹಿತಿ ಸಿಕ್ಕಿದೆ. ಬಳಿಕ ಆಕೆಯನ್ನು ಕರೆಸಿ ವಿಚಾರಣೆ ಮಾಡಿದಾಗ ಆರಂಭದಲ್ಲಿ ಕಳ್ಳತನ ಮಾಡಿರುವುದನ್ನು ಆಕೆ ಒಪ್ಪಿಕೊಳ್ಳಲಿಲ್ಲ. ಬಳಿಕ ಪೊಲೀಸ್ ಭಾಷೆಯಲ್ಲಿ ಪ್ರಶ್ನಿಸಿದಾಗ ಸ್ನೇಹಿತೆಯ ಮನೆಯಲ್ಲಿ ಚಿನ್ನಾಭರಣ ಕದ್ದಿದ್ದು ತಾನೇ ಎಂದು ತಪ್ಪೊಪ್ಪಿಕೊಂಡಿದ್ದಾಳೆ. ಅಂದು ಆರೋಪಿ ಗೀತಾ ಬೆಳಗ್ಗೆ ಎದ್ದು ಬಟ್ಟೆ ಬದಲಿಸುವ ನೆಪದಲ್ಲಿ ರೂಮ್ ಬಾಗಿಲು ಲಾಕ್ ಮಾಡಿಕೊಂಡು ಬಾಕ್ಸ್‌ನಲ್ಲಿದ್ದ ಚಿನ್ನಾಭರಣಗಳನ್ನು ತನ್ನ ಬ್ಯಾಗ್‌ಗೆ ಹಾಕಿಕೊಂಡಿದ್ದಾಳೆ. ಬಳಿಕ ಯಾರಿಗೂ ಅನುಮಾನ ಬಾರದಂತೆ ತನ್ನ ಮನೆಗೆ ತೆರಳಿದ್ದಾಳೆ. ಈ ಕದ್ದ ಚಿನ್ನಾಭರಣಗಳನ್ನು ಮೈಸೂರಿಗೆ ಸಾಗಿಸಿ ಗಿರವಿ ಇರಿಸಿ ಹಣ ಪಡೆದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಲಾಟರಿಯಲ್ಲಿ ಆಟೋ ಚಾಲಕನಿಗೆ 25 ಕೋಟಿ ರೂ. ಬಂಪರ್​ ಪ್ರೈಜ್!

ರಾಜ್ಯಾದ್ಯಂತ ಮಕ್ಕಳ ಕಳ್ಳರು?; ಜನರ ಕೈಗೆ ಸಿಕ್ಕಿಹಾಕಿಕೊಂಡ ಇಬ್ಬರ ಪೈಕಿ ಒಬ್ಬನ ಜೇಬಲ್ಲಿದ್ದವು ಮಕ್ಕಳ ಫೋಟೋಗಳು!

ಯೂಟ್ಯೂಬ್​ನಲ್ಲಿ ಉಪ್ಪಿ ಹವಾ: ‘ಕಬ್ಜ’ ಟೀಸರ್​ ನಂ. 1 ಟ್ರೆಂಡಿಂಗ್​; 24 ಗಂಟೆಗಳಲ್ಲಿ 1 ಕೋಟಿಗೂ ಅಧಿಕ ವ್ಯೂಸ್..

ನಾಯಿ ಬೊಗಳಿದ್ದಕ್ಕೆ ಅಟ್ಟಾಡಿಸಿಕೊಂಡು ಹೋಗಿ ಗುಂಡು ಹಾರಿಸಿ ಕೊಂದ!

ಭೀಕರ ಅಪಘಾತ: ಸೇತುವೆ ಮೇಲಿಂದ 30 ಅಡಿ ಕೆಳಗೆ ಬಿದ್ದ ವಾಹನ!; ಒಬ್ಬನ ಸಾವು, ಇನ್ನಿಬ್ಬರಿಗೆ ಗಂಭೀರ ಗಾಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 12 =
Remember me
