ಚನ್ನಪಟ್ಟಣ:ಅಕಾಲಿಕ ಮರಣ ಹೊಂದಿದ ಸ್ನೇಹಿತನ ವೃದ್ಧ ತಂದೆ-ತಾಯಿಗೆ ಹನ್ನೊಂದು ದಿನಗಳಲ್ಲಿ ಮನೆ ಕಟ್ಟಿಕೊಟ್ಟು ಹೊಸಮನೆಯಲ್ಲಿಯೇ ಗೆಳೆಯನ ವೈಕುಂಠ ಸಮಾರಾಧನೆ ಮಾಡಲುದ್ದೇಶಿಸುವ ಮೂಲಕ ತಾಲೂಕಿನ ಸಿಂಗರಾಜಿಪುರದ ಐದಾರು ಯುವಕರು ಸ್ನೇಹ ಎಂಬ ಪದಕ್ಕೆ ಹೊಸ ಭಾಷ್ಯ ಬರೆದಿದ್ದಾರೆ.
ಗ್ರಾಮದ ಸಣ್ಣಮ್ಮ ಮತ್ತು ಲಂಕಣ್ಣ ದಂಪತಿ ಪುತ್ರ ಶ್ರೀನಿವಾಸ್ (30) ಬೆಂಗಳೂರಿನಲ್ಲಿ ಚಿತ್ರಮಂದಿರವೊಂದರಲ್ಲಿ ಕೆಲಸ ಮಾಡುತ್ತಿದ್ದ. ಮೇ 21ರಂದು ಹೃದಯಾಘಾತದಿಂದ ಮೃತಪಟ್ಟಿದ್ದ. ಇರಲು ಸ್ವತಃ ಸೂರಿಲ್ಲದೆ ಬೇರೆಯವರ ಗುಡಿಸಲಿನಲ್ಲಿ ವಾಸಿಸುತ್ತಿದ್ದ ಲಂಕಣ್ಣ ದಂಪತಿ, ಮನೆಗೆ ಆಧಾರವಾಗಿದ್ದ ಮಗನನ್ನು ಕಳೆದುಕೊಂಡು ಕಂಗಾಲಾಗಿ ದ್ದರು. ಬೇರೆಯವರ ಜಾಗದಲ್ಲಿ ಗುಡಿಸಲು ನಿರ್ವಿುಸಿಕೊಂಡು ಜೀವನ ಸಾಗಿಸುತ್ತಿದ್ದ ಈ ಕುಟುಂಬಕ್ಕೆ ಮಗನೇ ಆಸರೆಯಾಗಿದ್ದ. ಇದ್ದ ಅಲ್ಪ ಜಾಗದಲ್ಲಿ ಮನೆ ಕಟ್ಟಿಕೊಳ್ಳಲು ಅಡಿಪಾಯ ನಿರ್ವಿುಸಿಕೊಂಡಿದ್ದ. ಅರ್ಧಕ್ಕೆ ನಿಂತ ಮನೆ, ಮುರುಕು ಗುಡಿಸಲಿನಲ್ಲಿ ಇರುವ ಸ್ನೇಹಿತನ ತಂದೆ ತಾಯಿಗೆ ಸೂರು ಕಲ್ಪಿಸಲು ಶ್ರೀನಿವಾಸನ ಸ್ನೇಹಿತರಾದ ರಾಘು, ಸಂತೋಷ್, ರವಿ, ನಾಗರಾಜ್ ಹಾಗೂ ನಂದೀಶ್ ಮುಂದಾದರು.
ತಮ್ಮ ಹಣದೊಂದಿಗೆ ದಾನಿಗಳ ಹಣವನ್ನು ಸೇರಿಸಿ ತಾವೇ ಕೆಲಸ ಮಾಡಿ ಅಂದದ ಮನೆ ನಿರ್ವಿುಸಿಕೊಟ್ಟಿದ್ದಾರೆ. ಸ್ಥಳೀಯ ಶಾಸಕ ಎಚ್.ಡಿ. ಕುಮಾರಸ್ವಾಮಿ ಸೇರಿ ತಾಲೂಕಿನ ಹಲವರು ಮನೆ ನಿರ್ವಣಕ್ಕೆ ನೆರವಾಗಿದ್ದಾರೆ. ಆ ಮನೆಯಲ್ಲೇ ಮಂಗಳವಾರ (ಜೂ.2) ಶ್ರೀನಿವಾಸನ 11ನೇ ದಿನದ ಕಾರ್ಯ ನಡೆಯಲಿದೆ.
ಜನಾಂಗೀಯ ಕಿಚ್ಚಿಗೆ ಹೊತ್ತಿ ಉರಿಯುತ್ತಿರುವ ಅಮೆರಿಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 19 =
Remember me
