ಖುಷಿಯಿಂದ ಜಿಗಿದಾಡುತ್ತಿದ್ದ ನನ್ನ ಜೀವನದ ಗಾಡಿಗೆ ಬ್ರೇಕ್ ಬಿದ್ದದ್ದು ನನಗೆ ಕ್ಯಾನ್ಸರ್ ಇರುವುದು ತಿಳಿದಾಗ. ಕ್ಯಾನ್ಸರ್​ಗೆ ಟ್ರೀಟ್​ವೆುಂಟ್ ಶುರುವಾದಾಗ ಅಚ್ಚುಮೆಚ್ಚಿನ ಸ್ನೇಹಿತೆಯರು ನನ್ನ ಕೈ ಬಿಡಲಿಲ್ಲ. ಯೋಗಕ್ಷೇಮವನ್ನು ನೋಡಿಕೊಂಡರು. ನನಗಾಗಿ ದೇವಾಲಯಗಳಲ್ಲಿ ಹರಕೆ ಹೊತ್ತರು. ಪ್ರತಿದಿನ ನನ್ನ ಬೇಕು ಬೇಡಗಳನ್ನು ನೋಡಿಕೊಂಡರು. ನನಗೆ ಬೇಸರವಾಗಬಾರದು ಎಂದು ಹರಟೆ ಹೊಡೆಯುವುದಕ್ಕಾಗಿಯೇ ಮನೆಗೆ ಬರುತ್ತಿದ್ದರು. ವಿನೋದಾ, ಲಲಿತಾ.. ಇನ್ನೂ ಬಹಳಷ್ಟು ಸ್ನೇಹಿತೆಯರು ನನ್ನನ್ನು ಐದು ತಿಂಗಳು ಆರೈಕೆ ಮಾಡಿದರು. ಇದರಿಂದಾಗಿ ಕ್ಯಾನ್ಸರನ್ನು ಒಂದು ರೀತಿ ಸೆಲೆಬ್ರೇಷನ್ ಮಾಡಿಕೊಂಡೆ. ಒಂದು ಕ್ಷಣ ಕೂಡ ನಾನು ಪೇಷೆಂಟ್ ಎಂಬ ಭಾವನೆ ಬರಗೊಡಲಿಲ್ಲ ನನ್ನೀ ಸ್ನೇಹಿತೆಯರು. ಇವರಿಂದಾಗಿಯೇ ನಿಗದಿತ ಅವಧಿಗಿಂತ ಮುಂಚೆ ಚೇತರಿಸಿಕೊಳ್ಳುತ್ತಿದ್ದೇನೆ. ಆ ಎಲ್ಲ ಸ್ನೇಹಿತೆಯರಿಗೆ ನನ್ನ ಅಕ್ಷರಾಂಜಲಿ.| ಮಮತಾ ಅಡಕಳ್ಳಿಬೆಂಗಳೂರು
ಫ್ರೆಂಡ್​ಷಿಪ್​ ಡೇ: ಸ್ನೇಹದ ಸಂಕೇತವಾಗಿದ್ದ ಚಿರಂಜೀವಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + nineteen =
Remember me
