ಬೆಂಗಳೂರು: ರಾಜ್ಯದ ಪ್ರವಾಸೋದ್ಯಮಕ್ಕೂ ಕೊರೊನಾ ವೈರಸ್ ಬಿಸಿ ತಟ್ಟಿದ್ದು, ಪ್ರಮುಖ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ವಿದೇಶಿಗರ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿದ್ದು, ವೈರಸ್ ಕುರಿತು ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಪ್ರವಾಸಿಗರನ್ನು ತಪಾಸಣೆ ಮಾಡಲು ಆರೋಗ್ಯ ಇಲಾಖೆ ಸನ್ನದ್ಧಗೊಂಡಿದೆ.
ಬಿಸಿಲೂರಿಗೂ ಒಕ್ಕರಿಸಿತೇ ಮಹಾಮಾರಿ?: ಬಾಗಲಕೋಟೆ ಜಿಲ್ಲೆ ಹುನಗುಂದ ಮೂಲದ ಇಬ್ಬರಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದಿದ್ದು, ಕರೊನಾ ಭೀತಿ ಇದೀಗ ಬಿಸಿಲೂರಿಗೂ ಒಕ್ಕರಿಸಿಕೊಂಡಿದೆ. ಫ್ರಾನ್ಸ್​ನ ಪ್ಯಾರೀಸ್​ನಿಂದ ಬಂದ ಹುನಗುಂದ ಮೂಲದ ವ್ಯಕ್ತಿಗೆ ಕರೊನಾ ಸೋಕಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಜಿಲ್ಲೆಯಲ್ಲಿ ವೈರಸ್ ಪತ್ತೆಗೆ ಸೂಕ್ತ ತಂತ್ರಜ್ಞಾನವಿಲ್ಲದ ಕಾರಣ ಉಡುಪಿಯ ಮಣಿಪಾಲ ವೈರಾಲಜಿ ಇನ್ಸ್​ಟ್ಯೂಟ್​ಗೆ ರವಾನೆ ಮಾಡಿದ್ದಾಗಿ ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ. ಮಲ್ಲನಗೌಡ ಬಿರಾದಾರ ತಿಳಿಸಿದ್ದಾರೆ.
ಸೌದಿ ಅರೇಬಿಯಾದಿಂದ ಬಂದಿರುವ ಹುನಗುಂದ ಮೂಲದ ಮತ್ತೊಬ್ಬ ವ್ಯಕ್ತಿಗೂ ಜಿಲ್ಲಾ ಆಸ್ಪತ್ರೆಯಲ್ಲಿ ತೆರೆಯಲಾಗಿರುವ ಐಸೋಲೇಶನ್ ವಾರ್ಡ್​ನಲ್ಲಿ ತೀವ್ರ ನಿಗಾಘಟಕದ ಅಡಿಯಲ್ಲಿ ವೈದ್ಯರು ಚಿಕಿತ್ಸೆ ನೀಡಲಾಗುತ್ತಿದೆ. ಕರೊನಾ ವೈರಸ್ ಇರುವ ಪ್ರದೇಶದಿಂದ ಬಂದಿದ್ದಾರೆ ಎನ್ನುವ ಕಾರಣಕ್ಕೆ ಅವರಿಗೆ ಸಾಮಾನ್ಯ ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ಹೀಗಾಗಿ ಸಾರ್ವಜನಿಕರು ಆತಂಕ ಪಡುವ ಅಗತ್ಯತೆ ಇಲ್ಲ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.
ಗಣಿಜಿಲ್ಲೆಯಲ್ಲಿ ಭೀತಿ: ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರ ಹಾಗೂ ಸಂಡೂರು ತಾಲೂಕಿನ ಜಿಂದಾಲ್​ನಲ್ಲಿ ಶಂಕಿತ ಕರೊನಾ ವೈರಸ್ ಪ್ರಕರಣ ಪತ್ತೆಯಾಗಿವೆ. ದುಬೈನಿಂದ ಹೊಸಪೇಟೆಗೆ ಬಂದ ವ್ಯಕ್ತಿಯೊಬ್ಬರಿಗೆ ರೋಗದ ಕೆಲ ಗುಣಲಕ್ಷಣ ಕಂಡು ಬಂದಿರುವುದರಿಂದ ಬೆಂಗಳೂರಿಗೆ ಗುರುವಾರವೇ ರಕ್ತದ ಮಾದರಿ ಕಳುಹಿಸಲಾಗಿದೆ. ತೋರಣಗಲ್ಲಿನ ಜಿಂದಾಲ್ ಪ್ರದೇಶದಿಂದ ವರದಿಯಾಗಿದ್ದು, ಶಂಕಿತ ವಎ್ಯಕ್ತಿಯ ರಕ್ತದ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ಖಚಿತಪಡಿಸಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 19 =
Remember me
