| ಎಚ್.ವಿ.ದೀಪಕ್ ನರಸಿಂಹ
ದಧಾನ ಕರಪದ್ಮಾಭ್ಯಾಂ
ಅಕ್ಷಮಾಲಾ ಕಮಂಡಲೂ |
ದೇವೀ ಪ್ರಸೀದತು ಮಯಿ
ಬ್ರಹ್ಮಚಾರಿಣ್ಯನುತ್ತಮಾ ||
ಈಕೆ ಪಾರ್ವತಿಯು ಶಿವನ ಪತ್ನಿಯಾಗುವು ದಕ್ಕಿಂತ ಮೊದಲಿನ ರೂಪ. ಪ್ರಜಾಪತಿ ದಕ್ಷನ ಮಗಳು. ಬ್ರಹ್ಮಚರ್ಯ ಮತ್ತು ತಪಸ್ಸಿಗೆ ಹೆಸರಾದವಳು. ಇಲ್ಲಿ ‘ಬ್ರಹ್ಮ’ ಶಬ್ದದ ಅರ್ಥ ತಪಸ್ಸು ಎಂದು. ಬ್ರಹ್ಮಚಾರಿಣಿ ಅರ್ಥಾತ್ ತಪಸ್ಸನ್ನು ಆಚರಿಸುವವಳು. ದೇವಿಯ ಸ್ವರೂಪವು ಪೂರ್ಣ ಜ್ಯೋತಿರ್ಮಯ ಹಾಗೂ ಅತ್ಯಂತ ಭವ್ಯವಾಗಿದೆ. ಬರಿಗಾಲಿನಲ್ಲಿ ನಡೆಯುವ ಈಕೆ ಕೈಯಲ್ಲಿ ಜಪದ ಮಾಲೆ ಹಾಗೂ ಕಮಂಡಲು ಹಿಡಿದಿರುತ್ತಾಳೆ. ಇವಳನ್ನು ‘ಅಪರ್ಣಾ’ ‘ಉಮಾ’ ಎಂದೂ ಕರೆಯುತ್ತಾರೆ. ಇವಳ ಆರಾಧನೆಯಿಂದ ತಪಸ್ಸು, ತ್ಯಾಗ, ವೈರಾಗ್ಯ, ಸದಾಚಾರ, ಸಂಯಮ ಸಿದ್ಧಿಸುತ್ತದೆ. ನವರಾತ್ರಿಯ ಈ ಎರಡನೆಯ ದಿನ ಸಾಧಕರು ಮನಸ್ಸನ್ನು ಸ್ವಾಧಿಷ್ಠಾನ ಚಕ್ರದಲ್ಲಿ ನೆಲೆಗೊಳಿಸುತ್ತಾರೆ. ಒಮ್ಮೆ ಮನಸ್ಸಿನ ಮೇಲೆ ಹಿಡಿತ ಕಡಿಮೆಯಾದರೆ ಸ್ವಾಸ್ಥ್ಯ ಕೆಡುತ್ತದೆ. ಹಾಗಾಗಿ ಮನಸ್ಸಿನ ಜಾಗೃತಿ, ಆರೈಕೆಗೆ ಮುಖ್ಯ ಸ್ವಾಧಿಷ್ಠಾನ, ಸ್ವ+ ಅಧಿಷ್ಠಾನ. ಸ್ವ ಅಂದರೆ ನಾನು; ಅಧಿಷ್ಠಾನ ಎಂದರೆ ಅಧಿಪತಿ, ಆಡಳಿತ ನಡೆಸುವುದು. ಅಂದರೆ ಮನಸ್ಸಿನ ಮೇಲೆ ಹಿಡಿತ ಸಾಧಿಸುವುದಾಗಿದೆ. ನವರಾತ್ರಿಯ ಎರಡನೇ ದಿನ ದೇವಿಗೆ ಇಷ್ಟವಾದ ದಾಸವಾಳ ಹೂವಿನಿಂದ ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಿದರೆ ಇಷ್ಟಾರ್ಥಗಳು ನೆರವೇರುತ್ತವೆ. ಅಂದಹಾಗೆ, ಉತ್ತರ ಪ್ರದೇಶದ ವಾರಾಣಸಿಯ ಗಂಗಾನದಿ ದಡದಲ್ಲಿರುವ ದುರ್ಗಾಘಾಟ್ ಹತ್ತಿರ ಬ್ರಹ್ಮಚಾರಿಣಿಯ ಪ್ರಸಿದ್ಧ ದೇವಾಲಯವಿದೆ.
ತ್ರಿಪುರಾ ಮೇ ಹೃದಯಂ ಪಾತುಲಲಾಟೇ ಪಾತು ಶಂಕರಭಾಮಿನೀ |
ಅರ್ಪಣಾ ಸದಾ ಪಾತು ನೇತ್ರೌ ಅಧರೌ ಚ ಕಪೋಲೌ ||
ಪಂಚದಶೀ ಕಂಠಂ ಪಾತು ಮಧ್ಯದೇಶಂ ಪಾತು ಮಹೇಶ್ವರೀ | ಷೋಡಶೀ ಸದಾ ಪಾತು ನಾಭೋ ಗೃಹೇ ಚ ಪಾದಯೋಃ || ಅಂಗಪ್ರತ್ಯಂಗ ಸತತ ಪಾತು ಬ್ರಹ್ಮಚಾರಿಣೀ |
ದೇವಿ ಬ್ರಹ್ಮಚಾರಿಣಿ ಮಂತ್ರ: ಓಂ ದೇವೀ ಬ್ರಹ್ಮಚಾರಿಣ್ಯೈ ನಮಃ
ಯಶಸ್ಸಿಗೆ ಅಡ್ಡಲಾಗಿರುವ ಎಲ್ಲ ತೊಡಕುಗಳೂ ಸರಿದು ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯಲು ಈ ಶ್ಲೋಕವನ್ನು ಪಠಿಸಬೇಕು.
ದೈವದ ಕೃಪಾಕಟಾಕ್ಷಕ್ಕೆ ಸುಲಭ ಮಾರ್ಗವಾದ ಭಕ್ತಿಮಾರ್ಗದಲ್ಲಿ ಎರಡನೆಯದು ‘ಕೀರ್ತನೆ’. ಭಗವಂತನ ಹೆಸರು, ಗುಣ, ಮಹಾತ್ಮೆ, ಲೀಲೆಗಳನ್ನು ವರ್ಣಿಸುವುದು, ಹಾಡುವುದೇ ‘ಕೀರ್ತನ ಭಕ್ತಿ’. ಇಂತಹ ಕೀರ್ತನ ಭಕ್ತಿಯನ್ನು ಎಲ್ಲ ಭಗವದ್ ಭಕ್ತರುಗಳೂ ಸಾಮಾನ್ಯವಾಗಿ ಪ್ರಶಂಸಿಸಿಯೇ ಇರುತ್ತಾರೆ. ಹಾಗಿದ್ದ ಮೇಲೆ ಆಳ್ವಾರರು ಇದರ ಬಗ್ಗೆ ಏನೂ ಹೇಳದೇ ಇರುತ್ತಾರೇನು?
ಆಳ್ವಾರರ ಪಾಶುರಗಳೆ ಲ್ಲವೂ ಸಹಜವಾಗಿ ಸ್ತುತಿಪರವಾದ ಕೀರ್ತನೆಗಳೇನೇ! ಅದರಿಂದಲೇ ಈ ಪಾಶುರ ಗಳನ್ನು ದೇವಸ್ಥಾನಗಳಲ್ಲಿ ಪ್ರತಿದಿನವೂ ಅನು ಸಂಧಾನ ಮಾಡುವರು. ಭಗವಂತನ ಕಲ್ಯಾಣಗುಣಗಳನ್ನು ಸಂಕೀರ್ತನೆ ಮಾಡುವ ಭಕ್ತರ ಪಾದಸ್ಪರ್ಶದಿಂದಲೇ ಈ ಭೂಮಿ ಪಾವಿತ್ರ್ಯವನ್ನು ಹೊಂದಿದೆ ಎಂದು ಪೆರಿಯಾಳ್ವಾರ್ (ಪೆರಿಯಾಳ್ವಾರ್ ತಿರುಮೊಷಿ 4-4-6) ಸ್ಪಷ್ಟೀಕರಿಸುತ್ತ, ‘ನನ್ನ ನಾಲಿಗೆ ಭಗವಂತನನ್ನು ಮಾತ್ರವೇ ಸ್ತುತಿಸುತ್ತದೆಯೇ ಹೊರತು ಬೇರೆ ಯಾರನ್ನೂ ಸ್ತುತಿಸುವುದಿಲ್ಲ’ ಎಂದು ತಿಳಿಸಿದ್ದಾರೆ. ಗಾನಯೋಗ್ಯವಾದ ಆಳ್ವಾರರ ಪಾಶುರಗಳೆಲ್ಲವೂ ಭಗವಂತನ ಸ್ತುತಿಪರ ವಾದವುಗಳಾದುದರಿಂದ ಅಂತಹ ಭಕ್ತಿಗೀತೆಗಳನ್ನು ಭಕ್ತರು ಹಾಡುತ್ತ, ವಿವಿಧ ರಾಗ- ತಾಳಗಳೊಂದಿಗೆ ಪ್ರಚಾರ ಮಾಡುತ್ತ, ಪ್ರಜೆಗಳನ್ನು ಪ್ರಭಾವಿಸಿದ್ದಾರೆ.
(ಲೇಖಕರು ಆಧ್ಯಾತ್ಮಿಕ ಚಿಂತಕರು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
