ತುಮಕೂರು:ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸಮ್ಮುಖದಲ್ಲೇ ಜೆಡಿಎಸ್ ಮುಖಂಡರ ಅಸಮಾಧಾನ ಸ್ಫೋಟಗೊಂಡಿತು.
ಶಿರಾ ಉಪಸಮರದ ಕಳ್ಳಂಬೆಳ್ಳ ಹೋಬಳಿ ಸಂಪೂರ್ಣ ಜವಾಬ್ದಾರಿ ಹೊತ್ತಿರುವ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್, ಭಾನುವಾರ ಜೆಡಿಎಸ್ ಸಮಾವೇಶದಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಭಾಷಣ ಸಾಕು ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ತಡೆದಿದ್ದಕ್ಕೆ ಸಿಟ್ಟಿಗೆದ್ದ ಗೌರಿಶಂಕರ್ ‘ಮೈಕ್ ಸ್ಟಾೃಂಡ್’ ಮೇಲೆ ಮೈಕ್ ಎಸೆದು ವೇದಿಕೆ ಮೇಲಿನ ಹಿಂಬದಿ ಸಾಲಿಗೆ ಹೋಗಿ ಕುಳಿತರು.
ರೇವಣ್ಣನ ವರ್ತನೆಯಿಂದ ಕೋಪದ್ರಿಕ್ತರಾಗಿ ಒಳಗೊಳಗೆ ಕುದಿಯುತ್ತಿದ್ದ ಗೌರಿಶಂಕರ್‌ರನ್ನು ವೈ.ಎಸ್.ವಿ.ದತ್ತಾ, ಸಂಸದ ಪ್ರಜ್ವಲ್ ರೇವಣ್ಣ ಸಮಾಧಾನ ಪಡಿಸಿದರಾದರೂ ಗೌರಿಶಂಕರ್ ಕೋಪತಾಪ ಕಡಿಮೆಯಾಗಿರಲಿಲ್ಲ.
ನಿಖಿಲ್ ಎಡವಟ್ಟು:ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವೇದಿಕೆಯಲ್ಲಿ ಮತ್ತೊಂದು ಎಡವಟ್ಟು ಮಾಡಿದರು. ನಿಖಿಲ್ ಭಾಷಣದಲ್ಲಿ ದೊಡ್ಡಪ್ಪ ಎಚ್.ಡಿ.ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ಹೆಸರನ್ನು ಹೇಳುವುದನ್ನೇ ಮರೆತುಬಿಟ್ಟಿದ್ದರು. ಕೊನೆಗೆ ತಪ್ಪಾಯ್ತು ಎಂದು ಕ್ಷಮೆಕೋರಿದ ನಿಖಿಲ್, ಭಾಷಣ ಮುಂದುವರಿಸಿದರು. ಪ್ರಜ್ವಲ್‌ಗೆ ಸಮಾವೇಶದಲ್ಲಿ ಮಾತನಾಡಲು ಅವಕಾಶ ಸಿಗಲಿಲ್ಲ. ಇದರಿಂದ ಅಸಮಾಧಾನಿತರಾದಂತೆ ಕಂಡ ಪ್ರಜ್ವಲ್, ಮುಖಂಡರ ಭಾಷಣ ನಡೆಯುತ್ತಿರುವಾಗಲೇ ವೇದಿಕೆಯಿಂದ ನಿರ್ಗಮಿಸಿದ್ದು ಜೆಡಿಎಸ್‌ನಲ್ಲಿ ಎಲ್ಲವೂ ಸರಿಯಿಲ್ಲವೆಂಬುದನ್ನು ತೋರುತ್ತಿತ್ತು.
VIDEO| ಸಮಾವೇಶದಲ್ಲೇ ಕುಸಿದುಬಿದ್ದ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ!

ಚಿತ್ರನಟ ದರ್ಶನ್ ಓಡೋಡಿ ಬರಲು ಡಿಕೆಶಿ ಹಸು ಅಲ್ಲ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
