ಬೆಂಗಳೂರು:ಸಿಲಿಕಾನ್​ ಸಿಟಿಯಲ್ಲಿ ಅಧಿಕ ಲಾಭಾಂಶದ ಆಮಿಷವೊಡ್ಡಿ ಕೋಟ್ಯಂತರ ರೂ. ಹೂಡಿಕೆ ಮಾಡಿಸಿಕೊಂಡು ಮೋಸ ಮಾಡಿರುವ ಮತ್ತೊಂದು ವಂಚಕ ಕಂಪನಿಯ ಕಳ್ಳಾಟ ಬೆಳಕಿಗೆ ಬಂದಿದೆ.ಈ ಕಂಪನಿ ಅಂದಾಜು 1 ಕೋಟಿ ರೂ. ವಂಚನೆ ಮಾಡಿದೆ. ಸಂತ್ರಸ್ತ ಹೂಡಿಕೆದಾರರು ಜಯನಗರ ಪೊಲೀಸರ ಮೊರೆ ಹೋಗಿದ್ದಾರೆ.
ಜಯನಗರ 4ನೇ ಹಂತದಲ್ಲಿ ಇರುವ “ಟ್ರೇಡ್​ ಆಕ್ಸಿಸ್​’ ಕಂಪನಿ ವಿರುದ್ಧ ಆರೋಪ ಕೇಳಿ ಬಂದಿದೆ. ಸದ್ಯ ಐವರು ಹೂಡಿಕೆ ದಾರರು ದೂರು ನೀಡಿದ್ದು, ಕಂಪನಿಯ ಆದರ್ಶ, ಅಭಿಲಾಷ್​, ರಾಕೇಶ್​, ವಾಸವಿ ರೈ ಮತ್ತು ತೇಜಸ್ವಿನಿ ಎಂಬುವರ ವಿರುದ್ಧ ಎ್​ಐಆರ್​ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಹಣ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಶೇ. 4 ರಿಂದ 8 ಲಾಭಾಂಶ ಕೊಡುವುದಾಗಿ 2020ರ ಜುಲೈನಲ್ಲಿ ಟ್ರೇಡ್​ ಆಕ್ಸಿಸ್​ ಕಂಪನಿ ಜಾಹೀರಾತು ನೀಡಿತ್ತು. ಅದನ್ನು ನಂಬಿದ ಹಲವರು ಲಾಂತರ ರೂ. ಹೂಡಿಕೆ ಮಾಡಿದ್ದರು. ಹಣ ಪಡೆದ ಕಂಪನಿಯ ಅಧಿಕಾರಿಗಳು, ಹೂಡಿಕೆ ಮಾಡಿರುವ ಹಣದ ಬಗ್ಗೆ “ಮೆಟ್​ ಟ್ರೇಡ್​ 5′ ಎಂಬ ಮೊಬೈಲ್​ ಅಪ್ಲಿಕೇಷನ್​ನಲ್ಲಿ ಮಾಹಿತಿ ಸಿಗಲಿದೆ ಎಂದು ತಿಳಿಸಿದ್ದರು.
ಕೆಲ ದಿನಗಳ ಬಳಿಕ ಹೂಡಿಕೆದಾರರು ಮೊಬೈಲ್​ ಆ್ಯಪ್​ನಲ್ಲಿ ನೋಡಿದಾಗ ಹಣದ ಮೊತ್ತ ಶೂನ್ಯವೆಂದು ಕಂಡು ಬಂದಿದೆ. ಗಾಬರಿಗೊಂಡ ಹೂಡಿಕೆದಾರರು, ಕಂಪನಿ ಕಚೇರಿಗೆ ಕರೆ ಮಾಡಿ ವಿಚಾರಿಸಿದಾಗ ಕಂಪನಿಯವರು ತಮಗೆ ಸಂಪೂರ್ಣ ನಷ್ಟ ಉಂಟಾಗಿದೆ ಎಂದಷ್ಟೇ ಉತ್ತರ ಕೊಟ್ಟಿದ್ದಾರೆ. ಆಗ ಹೂಡಿಕೆದಾರರಿಗೆ ತಾವು ವಂಚನೆಗೆ ಒಳಗಾಗಿರುವುದು ಅರಿವಾಗಿದೆ. ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ.
ಲಕ್ಷ ಲಕ್ಷ ರೂ. ಧೋಖಾಜೆ.ಪಿ.ನಗರದ ಎನ್​.ಎನ್​. ಪವನ್​ಕುಮಾರ್​ 7.44 ಲಕ್ಷ ರೂ., ಆರ್​.ಆರ್​.ನಗರದ ಎನ್​. ಶೇಷಪ್ರಸಾದ್​ 48.10 ಲಕ್ಷ ರೂ., ಜೆ.ಪಿ. ನಗರದ ಸಂದೀಪ್​ ಸಿಂಗ್​ 10.75 ಲಕ್ಷ ರೂ., ಅಮಿತ್​ ಪ್ರಕಾಶ್​ ತ್ರಿಪಾಠಿ 3.5 ಲಕ್ಷ ರೂ. ಹಾಗೂ ನಂದಕಿಶೋರ್​ ಜೋಶಿ 35.6 ಲಕ್ಷ ರೂ. ಹೂಡಿಕೆ ಮಾಡಿ ವಂಚನೆಗೆ ಒಳಗಾಗಿದ್ದಾರೆ. ಇದೇ ರೀತಿ ಹಲವರಿಗೆ ಮೋಸ ಮಾಡಿರುವ ಅನುಮಾನವಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 12 =
Remember me
