ಕಲಬುರಗಿ:ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಿರುವ ಮೋಮಿನಪುರ ಪ್ರದೇಶದ ಬಡ ವ್ಯಾಪಾರಿಯೊಬ್ಬರು ಲಾಕ್​ಡೌನ್​ನಿಂದ ವಹಿವಾಟು ನಡೆಯದೆ, ಅತ್ತ ಸಾಲ ತೀರಿಸಲೂ ಆಗದೆ ಬೇಸತ್ತು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಬ್ದುಲ್ ಖದೀರ್ (32) ಆತ್ಮಹತ್ಯೆ ಮಾಡಿಕೊಂಡವ. ಸಾಲ ಮಾಡಿ ಸಗಟು ವರ್ತಕರಿಂದ ಖರೀದಿಸುತ್ತಿದ್ದ ಹಣ್ಣುಗಳನ್ನು ನಿತ್ಯ ಮಾರಾಟ ಮಾಡುತ್ತಿದ್ದರು. ಈ ಮೂಲಕ ಬಂದ ಆದಾಯದಲ್ಲಿ ಸಂಸಾರದ ಬಂಡಿ ಎಳೆಯುವ ಜತೆಗೆ ಸಾಲ ಮರುಪಾವತಿ ಮಾಡುತ್ತಿದ್ದರು. ಆದರೆ, ಜಿಲ್ಲೆಗೆ ಕರೊನಾ ಎಂಟ್ರಿಯಾಗುತ್ತಿದ್ದಂತೆ ಜನಸಂಚಾರ ಮಾತ್ರವಲ್ಲ, ವ್ಯಾಪಾರ ವಹಿವಾಟು ಕೂಡ ಸ್ತಬ್ಧವಾಯಿತು. ಇನ್ನು ಸೋಂಕಿತರ ಸಂಖ್ಯೆ ಹೆಚ್ಚಿರುವ ಮೋಮಿನಪುರ ಪ್ರದೇಶದಲ್ಲಿ ಎಲ್ಲ ವ್ಯಾಪಾರ ವಹಿವಾಟು ದಿಢೀರ್ ಸ್ಥಗಿತಗೊಂಡಿತು.
ಇದನ್ನೂ ಓದಿರಿಹಣಕ್ಕಾಗಿ ಯುವತಿಯರನ್ನು ಕೂಡಿ ಹಾಕಿದ ಪಿಜಿ ಮಾಲೀಕ!
ಮೋಮಿನಪುರ ಪ್ರದೇಶದಲ್ಲೇ ಇದ್ದ ಅಬ್ದುಲ್ ಖದೀರ್, ಹಣ್ಣು ಮಾರಲಾಗದೆ ಕಣ್ಣೆದುರೇ ಕೊಳೆತು ಹೋಗುವುದನ್ನು ನೋಡಿ ಕಂಗಾಲಾಗಿದ್ದರು. ಇನ್ನೊಂದೆಡೆ ಸಾಲ ತೀರಿಸಲು ದಿಕ್ಕುತೋಚದೆ ಬುಧವಾರ ರಾತ್ರಿ ಸಾವಿನ ಕದ ತಟ್ಟಿದ್ದಾರೆ. ಚೌಕ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಮೃತರಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಸಂತ್ರಸ್ಥ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಬಡಾವಣೆಯ ಪ್ರಮುಖರು ಅಗ್ರಹಿಸಿದ್ದಾರೆ.
ಇದನ್ನೂ ಓದಿರಿಗರ್ಭಿಣಿ ಉದ್ಯೋಗಿಗಳಿಗೆ ಕಚೇರಿಗೆ ಹಾಜರಾಗುವುದರಿಂದ ವಿನಾಯ್ತಿ ಎಂದ ಕೇಂದ್ರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + two =
Remember me
