ಬೆಂಗಳೂರು:ಸರ್ಕಾರಿ ಸ್ವಾಮ್ಯದ ಇಂಧನ ಪೂರೈಕೆ ಸಂಸ್ಥೆಗಳು ತೈಲ ಸರಬರಾಜಿಗೆ ಮಿತಿ ಹೇರಿದ ಪರಿಣಾಮ ರಾಜ್ಯದ ಹಲವು ಪೆಟ್ರೋಲ್ ಬಂಕ್​ಗಳಲ್ಲಿ ಇಂಧನ ದಾಸ್ತಾನು ಸಮಸ್ಯೆ ಇನ್ನೂ ಮುಂದುವರಿದಿದೆ. ಸಮಸ್ಯೆ ತಲೆದೋರಿ ಸರಾಸರಿ 3 ತಿಂಗಳು ಕಳೆದರೂ ಎಚ್​ಪಿ ಮತ್ತು ಭಾರತ್ ಪೆಟ್ರೋಲ್ ಬಂಕ್​ಗಳಲ್ಲಿ ಇಂಧನ ಆಭಾವ ಬಗೆಹರಿಯುವ ಲಕ್ಷಣ ಕಾಣಿಸುತ್ತಿಲ್ಲ.
ದೇಶದ ಅತಿ ದೊಡ್ಡ ತೈಲೋತ್ಪನ್ನ ಹಾಗೂ ಸಂಸ್ಕರಣಾ ಸಂಸ್ಥೆಗಳಾದ ಇಂಡಿಯನ್ ಆಯಿಲ್ ಕಾಪೋರೇಷನ್ ಲಿ. (ಐಒಸಿಎಲ್) 2,036, ಭಾರತ್ ಪಟ್ರೋಲಿಯಂ ಕಾಪೋರೇಷನ್ ಲಿ. (ಬಿಪಿಸಿಎಲ್) 1,208, ಹಿಂದೂಸ್ತಾನ್ ಪೆಟ್ರೋಲಿಯಂ ಕಾಪೋರೇಷನ್ ಲಿ. (ಎಚ್​ಪಿಸಿಎಲ್) 1,800 ಹಾಗೂ ಖಾಸಗಿ 487 ಸೇರಿ ಒಟ್ಟು 5,531 ಪೆಟ್ರೋಲ್ ಬಂಕ್​ಗಳು ರಾಜ್ಯದಲ್ಲಿವೆ. ಬಿಪಿಸಿಎಲ್, ಐಒಸಿಎಲ್ ಹಾಗೂ ಬಂಕ್ ಮಾಲೀಕರ ನಡುವೆ ಇದ್ದ ಇಂಧನ ಸಮಸ್ಯೆ ಈಗ ಬಗೆಹರಿದಿದೆ. ಆದರೆ, 3 ತಿಂಗಳು ಕಳೆದರೂ ಎಚ್​ಪಿಸಿಎಲ್​ನ ತೈಲ ಸರಬರಾಜು ಸಮಸ್ಯೆ ಬಗೆಹರಿದಿಲ್ಲ. ಮುಂಗಡವಾಗಿ ಹಣ ಪಾವತಿಸಿದ್ದರೂ ನಿಗದಿತ ಸಮಯದಲ್ಲಿ ಕಂಪನಿಗಳು, ಬಂಕ್​ಗಳಿಗೆ ತೈಲ ಪೂರೈಸುತ್ತಿಲ್ಲ. ಸಮಸ್ಯೆ ಕುರಿತು ನೆಪ ಮಾತ್ರಕ್ಕೆ ಕಂಪನಿಗಳ ಜತೆ ಒಂದು ಬಾರಿ ಸಭೆ ನಡೆಸಿರುವ ಆಹಾರ ಇಲಾಖೆ ಅಧಿಕಾರಿಗಳು, ಪೂರ್ಣ ಪ್ರಮಾಣದಲ್ಲಿ ಸಮಸ್ಯೆ ನಿವಾರಿಸುವಲ್ಲಿ ವಿಫಲರಾಗಿದ್ದಾರೆ.
ಲಾಕ್​ಡೌನ್ ಸಂದರ್ಭ ಇಂಧನ ಬಳಕೆ ಕಡಿಮೆಯಾದ ಹಿನ್ನೆಲೆಯಲ್ಲಿ ಸಾವಿರಾರು ಬಂಕ್ ಮಾಲೀಕರು ಆರ್ಥಿಕ ಸಂಕಷ್ಟ ಅನುಭವಿಸಿದ್ದರು. ತೈಲ ಕಂಪನಿಗಳ ಮೇಲೂ ಆರ್ಥಿಕ ಹೊಡೆತ ಬಿದ್ದಿತ್ತು. ಈಗ ಎಲ್ಲ ವಹಿವಾಟುಗಳು ಹಿಂದಿನ ಸ್ಥಿತಿಗೆ ಮರಳಿದ್ದರೂ ಬೇಡಿಕೆಗೆ ತಕ್ಕಂತೆ ಇಂಧನ ಸಿಗದಿರುವ ಹಿನ್ನೆಲೆಯಲ್ಲಿ ಮಾಲೀಕರು ಇನ್ನಷ್ಟು ಆರ್ಥಿಕ ಸಮಸ್ಯೆಗೆ ಸಿಲುಕುವಂತಾಗಿದೆ. ಬೆಲೆ ಏರಿಕೆಯಿಂದಾಗಿ ಈಗಾಗಲೆ ಕಂಗಟ್ಟಿರುವ ವಾಹನ ಸವಾರರಿಗೆ ಇಂಧನ ಅಭಾವ ಬಿಸಿ ನಿಧಾನವಾಗಿ ತಟ್ಟುತ್ತಿದೆ. ಹಿಂದೆ ಸಾಲ ಸೌಲಭ್ಯ ಆಧಾರದಲ್ಲಿ ತೈಲ ಕಂಪನಿಗಳು ಇಂಧನ ಪೂರೈಕೆ ಮಾಡುತ್ತಿದ್ದವು. ಸದ್ಯ ಬಾಕಿ ಇರುವ ಬಿಲ್​ಗಳನ್ನು ಚುಕ್ತಾ ಮಾಡಿದ್ದೇವೆ. ಈಗ ಇಂಧನ ಪೂರೈಕೆಗಾಗಿ ಮುಗಂಡವಾಗಿ ತೈಲ ಕಂಪನಿಗಳಿಗೆ ಲಕ್ಷಾಂತರ ರೂಪಾಯಿ ಪಾವತಿಸಲಾಗಿದೆ. ಆದರೂ, ಕಂಪನಿಗಳು ನಿಗದಿತ ಸಮಯದಲ್ಲಿ ಇಂಧನ ಸರಬರಾಜು ಮಾಡುತ್ತಿಲ್ಲ. ಕಚ್ಚಾ ತೈಲ ಏರಿಕೆಯಿಂದಾಗಿ ಎಚ್​ಪಿಸಿಎಲ್ ಇಂಧನ ಖರೀದಿಗೆ ಮಿತಿಗೊಳಿಸಿದೆ. ಇದರಿಂದಾಗಿ ಬೇಡಿಕೆ ತಕ್ಕಂತೆ ಇಂಧನವನ್ನು ಪೂರೈಕೆಯಾಗುತ್ತಿಲ್ಲ ಎನ್ನುತ್ತಾರೆ ಬಂಕ್ ಮಾಲೀಕರು.
ಐಒಸಿಎಲ್ ಹಾಗೂ ಬಿಪಿಸಿಎಲ್ ಕಂಪನಿಗಳಲ್ಲಿ ಸಮಸ್ಯೆ ಇಲ್ಲ. ಆದರೆ ಎಚ್​ಪಿಸಿಎಲ್ ಬೇಡಿಕೆಗೆ ತಕ್ಕಂತೆ ಇಂಧನ ಸರಬರಾಜು ಮಾಡುತ್ತಿಲ್ಲ. ಮುಂಗಡವಾಗಿ ಹಣ ಪಾವತಿಸಿದ್ದರೂ ಇಂಧನ ಪೂರೈಕೆ ಮಾಡುತ್ತಿಲ್ಲ. ಈ ಸಮಸ್ಯೆಯನ್ನು ಸರ್ಕಾರ ತಕ್ಷಣ ಬಗೆಹರಿಸಬೇಕು.
|ತಾರಾನಾಥಉಪಾಧ್ಯಕ್ಷ, ಅಖಿಲ ಕರ್ನಾಟಕ ಪೆಟ್ರೋಲಿಯಂ ವ್ಯಾಪಾರಿಗಳ ಒಕ್ಕೂಟ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 15 =
Remember me
